ಬೆಂಗಳೂರು: ಭಾರತದ ಪ್ರಮುಖ ಫ್ಯಾಷನ್ ಮತ್ತು ಬೆಳ್ಳಿ ಆಭರಣ ಬ್ರಾಂಡ್ ಆಗಿರುವ ಕುಶಾಲ್ಸ್ ಫ್ಯಾಷನ್ ಜ್ಯುವೆಲರಿ ಭಾರತದಲ್ಲಿ 100 ಮಳಿಗೆಗಳನ್ನು ಹೊಂದುವ ಮೂಲಕ ಮಹತ್ತರ ಸಾಧನೆ ಮಾಡಿದೆ. ಸಂಸ್ಥೆಯ 100ನೇ ಮಳಿಗೆಯು ಬೆಂಗಳೂರಿನ ಕೋರಮಂಗಲದ ನೆಕ್ಸಸ್ ಮಾಲ್ ನಲ್ಲಿ ಆರಂಭಗೊಂಡಿದ್ದು, ಈ ಮಳಿಗೆಯನ್ನು ಬಾಲಿವುಡ್ ನಟಿ ನುಸ್ರತ್ ಭರುಚಾ ಅವರು ಉದ್ಘಾಟಿಸಿದರು.
ನಟಿ ನುಸ್ರತ್ ಭರುಚಾ ಮಾತನಾಡಿ, “ಕುಶಾಲ್ಸ್ ಫ್ಯಾಷನ್ ಜ್ಯುವೆಲರಿಯಲ್ಲಿ ಸಂಭ್ರಮಾಚರಣೆ ಮತ್ತು ದೈನಂದಿನ ಬಳಕೆ ಎಲ್ಲಕ್ಕೂ ಸೂಕ್ತವಾಗುವ ಆಭರಣಗಳಿವೆ. 100ನೇ ಮಳಿಗೆ ಉದ್ಘಾಟನೆಯ ಈ ಸಂದರ್ಭದಲ್ಲಿ ಈ ಸಂಸ್ಥೆಯ ಜೊತೆ ಇರುವುದು ನನಗೆ ಸಂತಸ ತಂದಿದೆ” ಎಂದರು. ಬೆಂಗಳೂರಿನಲ್ಲಿ ಇಂತಹ ವಿಶೇಷ ಮಳಿಗೆ ಆರಂಭ ಮಾಡಿರುವುದು ಙಗೆ ಅತಿಯಾದ ಸಂತೋಷದಾಯಕವಾಗಿದೆ. ಬೆಂಗಳೂರು ನಗರ ನನಗೆ ಇಷ್ಟ. ಸಂಸ್ಥೆಯ ಆಭರಣಗಳು ಸಾಕಸ್ಟು ವಿಶೇಷತೆಗಳಿಂದ ಕೂಡಿವೆ. ನನಗೂ ಆಭರಣದ ಮೇಲೆ ವ್ಯಾಮೋಹ ಇದೆ. ಅದರಲ್ಲೂ ಮಹಿಳೆಯರಿಗೆ ಹೇಳಿಮಾಡಿಸಿದಾಗಿದೆ ಎಂದರು.
ಕುಶಾಲ್ಸ್ ಫ್ಯಾಷನ್ ಜ್ಯುವೆಲರಿಯ ಸಹ-ಸಂಸ್ಥಾಪಕ ಮನೀಶ್ ಗುಲೇಚ್ಛಾ, “100 ಮಳಿಗೆ ಉದ್ಘಾಟನೆಗೊಳ್ಳುತ್ತಿರುವ ಈ ಸಂದರ್ಭವು ನಮಗೆ ಬಹಳ ಹೆಮ್ಮೆಯ ಕ್ಷಣವಾಗಿದೆ. 2006ರಲ್ಲಿ ಸಣ್ಣದಾಗಿ ಪ್ರಾರಂಭವಾದ ಈ ಸಂಸ್ಥೆ ಇವತ್ತು ಭಾರತದಾದ್ಯಂತ ಇರುವ ಆಧುನಿಕ ಭಾರತೀಯ ಮಹಿಳೆಯರ ಇಷ್ಟದ ಬ್ರಾಂಡ್ ಆಗಿ ಬೆಳೆದಿದೆ. ಈ ಸಾಧನೆಯು ನಮ್ಮ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಮ್ಮ ತಂಡದ ಶ್ರದ್ಧೆಯಿಂದ ಮಾತ್ರ ಸಾಧ್ಯವಾಗಿದೆ. ನಾವು ಅಂಗಡಿಯಲ್ಲಾಗಲಿ ಅಥವಾ ಆನ್ ಲೈನ್ ನಲ್ಲಾಗಲಿ ಸೊಗಸಾದ ವಿನ್ಯಾಸಗಳುಳ್ಳ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ಬದ್ಧರಾಗಿದ್ದೇವೆ” ಎಂದರು.
ಸುಮಾರು ಎರಡು ದಶಕದ ಪರಂಪರೆ ಹೊಂದಿರುವ ಕುಶಾಲ್ಸ್ ಫ್ಯಾಷನ್ ಜ್ಯುವೆಲರಿ ಈ ಆರ್ಥಿಕ ವರ್ಷದ ಅಂತ್ಯದ ವೇಳೆಗೆ 150 ಮಳಿಗೆಗಳನ್ನು ತೆರೆಯುವ ಗುರಿಯನ್ನು ಹೊಂದಿದೆ. ತನ್ನ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ಕಂಪನಿಯು ಹೊಸ ಸಂಗ್ರಹಗಳನ್ನು ಪರಿಚಯಿಸಲು ಯೋಜನೆ ರೂಪಿಸಿದೆ ಮತ್ತು ಪ್ಲೇಟಿಂಗ್ ತಂತ್ರಜ್ಞಾನದ ಮೂಲಕ ಉತ್ಪನ್ನದ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯಕ್ರಮ ಹಾಕಿಕೊಳಲಾಗಿದೆ. ವಿಶೇಷವಾಗಿ ತನ್ನ ಹೊಸ “ಎಲಿವೇಟೆಡ್ ಎವೆರಿಡೇ” ಶ್ರೇಣಿ ಮತ್ತಷ್ಟು ವಿಸ್ತಾರಗೊಳಿಸಲು ಯೋಜಿಸಿದೆ.
ಕುಶಾಲ್ಸ್ ಫ್ಯಾಷನ್ ಜ್ಯುವೆಲರಿ ಸಂಸ್ಥೆಯು ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ 300 ಮಳಿಗೆಗಳನ್ನು ತಲುಪುವ ಗುರಿಯನ್ನು ಇಟ್ಟುಕೊಂಡಿದೆ. ದೇಶದ ಪ್ರತಿಯೊಂದು ಮೂಲೆಗೂ ಕೈಗೆಟುಕುವ ದರದ ಮತ್ತು ವಿಶಿಷ್ಟ ಫ್ಯಾಷನ್ ನ ಆಭರಣಗಳನ್ನು ತಲುಪಿಸುವ ಉದ್ದೇಶ ಹೊಂದಿದ.
ಗುಣಮಟ್ಟದ ಬ್ರಾಂಡ್ ಆಗಿ ಎಲ್ಲೆಡೆ ಹೆಸರು ಮಾಡಿದೆ
2006ರಲ್ಲಿ ಆರಂಭಗೊಂಡ ಕುಶಾಲ್ಸ್ ಫ್ಯಾಷನ್ ಜ್ಯುವೆಲರಿ 38 ನಗರಗಳಲ್ಲಿ 100 ಮಳಿಗೆಗಳನ್ನು ಹೊಂದಿದ್ದು, ದೇಶಾದ್ಯಂತ ಅತ್ಯುತ್ತಮ ಉಪಸ್ಥಿತಿಯನ್ನು ಹೊಂದಿದೆ. ಈ ಸಂಸ್ಥೆಯು ಸೊಗಸಾಗಿ ಮತ್ತು ಎಚ್ಚರಿಕೆಯಿಂದ ರೂಪಿಸಲಾದ 10,000ಕ್ಕೂ ಹೆಚ್ಚು ವಿನ್ಯಾಸಗಳನ್ನು ಒಳಗೊಂಡಿದ್ದು, ಇದರಲ್ಲಿ ಆಂಟಿಕ್, ಕುಂದನ್, ಜಿರ್ಕಾನ್, ಟೆಂಪಲ್ ಜ್ಯುವೆಲ್ಲರಿ ಮತ್ತು 92.5 ಬಿಐಎಸ್- ಹಾಲ್ಮಾರ್ಕ್ ಮಾಡಲಾದ ಸ್ಟರ್ಲಿಂಗ್ ಬೆಳ್ಳಿಯ ಆಭರಣಗಳು ಸೇರಿವೆ. ಈ ಉತ್ಪನ್ನಗಳು ಉತ್ತಮ ಮತ್ತು ಪ್ರೀಮಿಯಂ ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ಈ ಶ್ರೇಣಿಯಲ್ಲಿ ನೆಕ್ಲೇಸ್ ಗಳು, ಕಿವಿಯೋಲೆಗಳು, ಚೋಕರ್ ಗಳು, ಉಂಗುರಗಳು, ಕಂಕಣಗಳು, ಬ್ರೋಚ್ ಗಳು ಸೇರಿದಂತೆ ವಿವಿಧ ವಿಭಾಗಗಳ ಆಭರಣಗಳು ಸೇರಿವೆ. ಸಂಭ್ರಮಾಚರಣೆ, ವಿವಾಹ, ಕಚೇರಿ ಬಳಕೆ ಮತ್ತು ದೈನಂದಿನ ಬಳಕೆ ಹೀಗೆ ಎಲ್ಲಾ ಸಂದರ್ಭದಲ್ಲಿ ಬಳಸಬಲ್ಲ ಉತ್ಪನ್ನಗಳು ಇಲ್ಲಿ ಲಭ್ಯವಿದೆ.