ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ 10 ಮತ್ತು 11ನೇ ದೀಕ್ಷಾ ಅಂತ ಘಟಿಕೋತ್ಸವ ಜೂನ್ 14ರಂದು ಬೆಂಗಳೂರಿನ ಟೌನ್ ಹಾಲ್ನಲ್ಲಿ ನಡೆಯಲಿದೆ ಎಂದು ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಸ್ ಅಹಲ್ಯಾ ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು, ಸಂಸ್ಕೃತ ಕೇವಲ ಭಾಷೆಯಷ್ಟೇ ಅಲ್ಲ ಕಲೆ ವಿಜ್ಞಾನ ಸಂಸ್ಕೃತಿ ಯೋಗ ಆಯುರ್ವೇದ ಅರ್ಥಶಾಸ್ತ್ರ ಮುಂತಾದವುಗಳ ಆಗರವಾಗಿದೆ, ಇಂತಹ ವೇದ ಶಾಸ್ತ್ರಗಳ ಮಾಧ್ಯಮವಾದ ಸಂಸ್ಕೃತದ ಪೋಷಣೆ ಸಂವರ್ಧನೆ ವಿಶ್ವವಿದ್ಯಾನಿಲಯದ ಧ್ಯೇಯವಾಗಿತ್ತು. 14 ವರ್ಷಗಳಿಂದ ಇದರ ಸಂವರ್ಧನೆ ಪ್ರಚಾರ ಕಾರ್ಯದಲ್ಲಿ ತೊಡಗಿಸಲಾಗಿದೆ ಎಂದರು.
2022 23ನೇ ವರ್ಷದಲ್ಲಿ ಆಚಾರ್ಯ ಎಂ ಏ ತರಗತಿಗಳಲ್ಲಿ 221 ವಿದ್ಯಾರ್ಥಿಗಳು, ಶಾಸ್ತ್ರಿ, ಬಿಎ ತರಗತಿಗಳಲ್ಲಿ 333 ವಿದ್ಯಾರ್ಥಿಗಳು ಒಟ್ಟು 554 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಕಾಗಿ ಅರ್ಜಿಯನ್ನು ಹಾಕಿದ್ದಾರೆ ಎಂದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 10 ಮತ್ತು 11ನೇ ದೀಕ್ಷಾ ಅಂತ ಘಟಿಕೋತ್ಸವ ಕಾರ್ಯಕ್ರಮವನ್ನು ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ರವರು ಉದ್ಘಾಟನೆ ಮಾಡಲಿದ್ದಾರೆ, ವಿವಿಯ ಸಹಕುಲಾಧಿಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಎಂಸಿ ಸುಧಾಕರ್ ಅವರು ವಿಶಿಷ್ಟಾತಿಗಳಾಗಿ ಭಾಗವಹಿಸಲಿದ್ದಾರೆ. ರಾಷ್ಟ್ರಪತಿ ಪುರಸ್ಕೃತರು ಹಾಗೂ ಪ್ರಸಿದ್ಧ ವಿದ್ವಾಂಸರಾದ ಡಾ. ಎಚ್ಪಿ ನಾಗರಾಜ್ ರಾವ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನೋ ಕಟಿಕೋತ್ಸವ ಕಾರ್ಯಕ್ರಮದಲ್ಲಿ ನಿರಂಜನ ಪ್ರಣವ ಸ್ವರೂಪಿ ಶ್ರೀ ಬಸವಮೂರ್ತಿ ಮಾಧಾರ ಚೆನ್ನಯ್ಯ ಸ್ವಾಮೀಜಿ, ಡಾ. ಗೌರಿ ಮಾಹುಲೀಕರ್ ,ಶ್ರುತಿಸಾಗರ ಘನಪಾಟಿ ಶಂಕರನಾರಾಯಣ ಭಟ್, ಪ್ರೊ. ಹಿತ್ಲಳ್ಳಿ ಸೂರ್ಯನಾರಾಯಣ ಭಟ್, ಶ್ರೀ ಸದ್ಗುರು ದುಂಡೇಶ್ವರ ಮಹಾಸ್ವಾಮಿಗಳು ಹಾಗೂ ಪ್ರೊಫೆಸರ್ ಗೆ ಹರಿದಾಸ ಭಟ್ ಇವರಿಗೆ ಗೌರವ ಡಿಲೀಟ್ ಪ್ರಧಾನ ಮಾಡಲಾಗುವುದು.
ಸುದ್ದಿಗೋಷ್ಠಿಯಲ್ಲಿ ವಿವಿಯ ಆಡಳಿತ ವಿಭಾಗದ ಕುಲಸಚಿವರಾದ ಬಿ ಗಿರೀಶ್ ಚಂದ್ರ ಕುಲ ಸಚಿವರು ಮೌಲ್ಯಮಾಪನ ವಿಭಾಗದ ಡಾ. ರಾಮಕೃಷ್ಣ ಭಟ್ ಕೆ, ವಿವಿಯ ಡೀಂ ಇದೆ ವೇಳೆ ಉಪಸ್ಥಿತರಿದರು.