ಬೆಂಗಳೂರು: ಯಜಮಾನ್ ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರವರ 103ನೇ ಆರಾಧನಾ ಮಹೋತ್ಸವ ಆಗಸ್ಟ್ 6 ರಂದು ನಡೆಯಲಿದೆ ಎಂದು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆ ಅಧ್ಯಕ್ಷರಾದ ಸುರೇಶ್ ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದವರು, ಶ್ರೀ ದೊಡ್ಡಣ್ಣ ಶೆಟ್ಟರವರ ಧಾರ್ಮಿಕ ಕಾರ್ಯ, ಬಡವರಿಗೆ ಉಚಿತ ಶಿಕ್ಷಣ, ಹಾಗೂ,ಉಚಿತ ಊಟ,ವಸತಿ ನೀಡಿದ ಮಹಾನ್ ವ್ಯಕ್ತಿತ್ವದವರು,ಮೈಸೂರು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜೊತೆಯಲ್ಲಿ ಯಜಮಾನ್ ಜನೋಪಕಾರಿ ದೊಡ್ಡಣ್ಣ ಶೆಟ್ಟರವರು ಉತ್ತಮ ಒಡನಾಟವಿತ್ತು. ದೊಡ್ಡಣ್ಣ ಶೆಟ್ಟರವರ ಸಮಾಜ ಸೇವೆಯನ್ನು ಗುರುತಿಸಿ ಇವರಿಗೆ ಜನೋಪಕಾರಿ ಎಂಬ ಬಿರುದು ಕೊಟ್ಟು ಚಿನ್ನದ ಪದಕವನ್ನು ನೀಡಿ ಗೌರವಿಸಿದ್ದಾರೆ.ಮಹಾರಾಜರು ನೀಡಿದ 5.1/5 ಎಕರೆ ಜಾಗದಲ್ಲಿ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಧರ್ಮ ಸಂಸ್ಥೆ ಸ್ಥಾಪಿಸಿದರು.
1905ರಲ್ಲಿ ಕಲಾಸಿಪಾಳ್ಯದಲ್ಲಿ ಸಭಾಂಗಣ ಕಟ್ಟಡ ನಿರ್ಮಾಣ ಮಾಡಿದರು.ದೊಡ್ಡಣ್ಣ ಶೆಟ್ಟರವರ ಕೆಲಸ ಕಾರ್ಯಗಳು ಮುಂದಿನ ಪೀಳಿಗೆಗೆ ತಿಳಿಯಬೇಕು, ಅವರ ಹಾಕಿಕೊಟ್ಟ ಮಾರ್ಗದರ್ಶನ ಸಾಗಬೇಕು ಎಂಬುದು ಧರ್ಮ ಸಂಸ್ಥೆಯ ಉದ್ದೇಶವಾಗಿದೆ.ಆಗಸ್ಚ್ 6ರಂದು ಶ್ರೀ ದೊಡ್ಡಣ್ಣ ಶೆಟ್ಟರವರ 103ನೇ ಆರಾಧನಾ ಮಹೋತ್ಸವವನ್ನು ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟಿರ ಬಯಲು ರಂಗಮಂದಿರದಲ್ಲಿ ಬೆಳಗ್ಗೆ 6 ಗಂಟೆಗೆ ಜರುಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಸುರೇಶ್ ಎಸ್. ಮತ್ತು ಆಡಳಿತ ಮಂಡಳಿಯ ಸದಸ್ಯರಾದ ವಿನೋದ್ ಎಂ.ಜಿ., ವಿ.ಎಸ್.ಮಂಜುನಾಥ್, ನಿರಂಜನ್ ಗಾಣಿಗ. ಎನ್,ಮುನಿಚೆಟ್ಟಿ.ವಿ , ಶ್ರೀಮತಿ ಉಮಾದೇವಿ ಜಿ.ಎ,ಸ್ಪಪ್ನಚಂದ್ರಶೆಟ್ಟಿ, ರಾಜಣ್ಣ ಎಂ.ಸಿ,ಷಹ ಸಂಜಯ್, ಶ್ರೀಮತಿ ಕೃಷ್ಣವೇಣಿ ಡಿ.ಸಿ ರವರು ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು,ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗರೆಡ್ಡಿ ರವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆಯನ್ನು, ಸಂಸದರಾದ ತೇಜಸ್ವಿಸೂರ್ಯರವರು, ಶಾಸಕರಾದ ಉದಯ ಗರುಡಾಚಾರ್ ಸಿ.ರವರು ಲಕ್ಷ್ಮೀನರಸಿಂಹಸ್ವಾಮಿ ಧರ್ಮ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಸಮುದಾಯದ ಎಲ್ಲಾ ಸಂಘ ಸಂಸ್ಥೆಯವರು ಹಿರಿಯ ಮುಖಂಡರು, ಶಾಲಾ ಕಾಲೇಜುಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಇನ್ನು ಇದೇ ವೇಳೆ ಶ್ರೀ ದೊಡ್ಡಣ್ಣ ಶೆಟ್ಟ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪೂರೈಸಿದ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.