ಬೆಂಗಳೂರು : ಇವತ್ತಿನ ಶಿಕ್ಷಣ ಮೌಲ್ಯಯುತ ವಾಗಿರಬೇಕು, ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾರ್ಗದರ್ಶಕರಾಗಿ ಗುಣಮಟ್ಟದ ಪಾಠಗಳನ್ನು ಹೇಳಿಕೊಡಬೇಕು ಎಂದು ಧಾರವಾಡದ ನಿವೃತ್ತ ಮುಖ್ಯೋಪಾಧ್ಯಾಯರಾದ ಸುರೇಶ್ ವಿ ಕುಲಕರ್ಣಿ ಅವರು ತಿಳಿಸಿದರು.
ಬೆಂಗಳೂರಿನ ಜಯನಗರದ ಯುವಪಥದಲ್ಲಿ ಪಾಂಚಜನ್ಯ ಪ್ರತಿಷ್ಠಾನ ಹಮ್ಮಿಕೊಂಡಿದ್ದ 2023ನೇ ಸಾಲಿನ ಪ್ರತಿಷ್ಠಿತ ಪಾಂಚಜನ್ಯ ಪುರಸ್ಕಾರವನ್ನು ಆರ್ ವಿ ಶಿಕ್ಷಣ ಸಂಸ್ಥೆಯ ಯೋಜನಾ ವಿಭಾಗದ ನಿರ್ದೇಶಕರಾದ ಡಾ.ಟಿವಿ ರಾಜು ಅವರಿಂದ ಸ್ವೀಕರಿಸಿ ಮಾತನಾಡಿದ ಅವರು, ಪ್ರಸ್ತುತ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ, ಅದು ಆಗಬಾರದು, ಮುಂದಿನ ಭಾವಿ ಶಿಕ್ಷಕರು ಮಕ್ಕಳಿಗೆ ಸಮಾಜಕ್ಕೆ ಬೇಕಾದ, ತಿದ್ದಿ ತೀಡುವ ಕೆಲಸವಾಗಬೇಕೆಂದರು, ಗ್ರಾಮೀಣಾ ಮಟ್ಟದಲ್ಲಿನ ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸಬೇಕು,ಗ್ರಾಮೀಣಾ ಪ್ರತಿಭೆಗಳನ್ನು ಹುಡುಕುವ, ಶಿಕ್ಷಣವಂತರನ್ನಾಗಿ ಮಾಡಬೇಕಾದ ಅನಿವಾರ್ಯತೆ ಇದೆ ಆ ಕೆಲಸವಾಗಬೇಕೆಂದರು.
ವಿಧ್ಯಾರ್ಥಿಗಳಿಗಿಂತ ಮೊದಲು ಶಿಕ್ಷಕರು ಪರಿಪಕ್ವತೆ ಹೊಂದಿರಬೇಕು, ಸಮಾಜಕ್ಕೆ ಮಾರಕವಾಗುವ ಹಾಗೆ ಬಿಡಬಾರದು, ವಿದ್ಯಾರ್ಥಿಗಳನ್ನು ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಿ ಮಾಡುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿ ಎಂದರು.
ಪಾಂಚಜನ್ಯ ಪ್ರತಿಷ್ಠಾನಕ್ಕೆ 11ನೇ ವರ್ಷಾಚರಣೆ ಹಿನ್ನೆಲೆ ಪ್ರತಿ ವರ್ಷವೂ ಸಹ ಅಕ್ಷರ, ಆರೋಗ್ಯ ಹಾಗೂ ಆಧ್ಯಾತ್ಮ ವಿಚಾರವಾಗಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರ, ಸಮಾಜದಲ್ಲಿ ಅವಿರತರಾಗಿ ದುಡಿದಿರುವ ವ್ಯಕ್ತಿಗಳನ್ನು ಹುಡುಕಿ ಪ್ರತಿವರ್ಷ ಪ್ರಶಸ್ತಿಯನ್ನು ನೀಡುವ ಪರಿಪಾಠವನ್ನು ಪ್ರತಿಷ್ಠಾನವು ಪ್ರತಿವರ್ಷ ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದೆ.
ಪ್ರತಿಷ್ಠಾನವು 2023ಕ್ಕೆ ಶಿಕ್ಷಣ, ರಂಗಭೂಮಿ, ಕಲಾವಿದ, ಉತ್ತಮ ವಾಗ್ಮಿ, ಚಿತ್ರಕಲೆ, ಪತ್ರಿಕೆಯೊಂದರ ಸಂಪಾದಕರು ಆಗಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಸುರೇಶ್ ವಿ ಕುಲಕರ್ಣಿ ಅವರಿಗೆ ಈ ಭಾರಿ ಪ್ರಶಸ್ತಿ ಕೊಡಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಜಯ್ teacher collage, RV teachers collage, Nmkrv ಮಹಿಳಾ ಕಾಲೇಜು, ಬೀಸ್ ಕಾಲೇಜ್ ನ Bed ಶಿಕ್ಷಕರು, ವಿಧ್ಯಾರ್ಥಿಗಳು ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಕುರಿತು ಸಂವಾದ ನಡೆಸಿದರು. ಅವರಿಗೆ ಪ್ರಶಸ್ತಿ ನೀಡಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಿಹೆಚ್ ಎಸ್ ಉನ್ನತ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಕೆ ಎಸ್ ಸಮೀರ ಸಿಂಹ, ಎಂ ಇ ಎಸ್ ಶಿಕ್ಷಣ ಸಮೂಹದ ಶೈಕ್ಷಣಿಕ ನಿರ್ದೇಶಕರಾದ ಡಾ.ಹೆಚ್ ಎಸ್ ಗಣೇಶ ಭಟ್ಟ, ಪ್ರತಿಷ್ಠಾನದ ಸಂಸ್ಥಾಪಕ ಗೌರವ ಕಾರ್ಯದರ್ಶಿ ಮುರಳಿ ಎಸ್ ಕಾಕೊಳು, ಪ್ರತಿಷ್ಠಾನದ ಟ್ರಸ್ಟಿಗಳಾದ ಎಸ್ ವಿ ಸುಬ್ರಮಣ್ಯ, ವೆಂಕಟೇಶ್ ಆರ್ ವೇದಾಂತಿ ಇತರರು ಉಪಸ್ಥಿತರಿದ್ದರು.