ಶಿರಾ,ದೊಡ್ಡಹುಲಿಕುಂಟೆ: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 34 ಕೋಟಿ ವ್ಯವಹಾರವಿದ್ದು, ಇದರಲ್ಲಿ 9 ಕೊಟಿ ಸಾಲ ನಮ್ಮ ಬ್ಯಾಂಕ್ ಒಂದರಲ್ಲಿ ಸುಸ್ಥಿತಿಯಾಗಿದೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಪವನ್ ಕುಮಾರ್ ತಿಳಿಸಿದರು.
ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ದೊಡ್ಡ ಹುಲಿಕುಂಟೆ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ 40ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಿಹಿ ಹಂಚಿ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿ,ಮಾತನಾಡಿ, ನಮ್ಮ ಬ್ಯಾಂಕಿನ ವ್ಯವಹಾರದಲ್ಲಿ 34 ಕೋಟಿ ವ್ಯವಹಾರವಿದ್ದು ಇದರಲ್ಲಿ ಒಂಬತ್ತು ಕೊಟ್ಟಿರುವ ಸಾಲ ನಮ್ಮ ಬ್ಯಾಂಕ್ ಒಂದರಲ್ಲಿ ಸುಸ್ಥಿತಿಯಾಗಿದೆ ತಾವುಗಳು ಬ್ಯಾಂಕ್ ವ್ಯವಹಾರದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಬ್ಯಾಂಕ್ ಗ್ರಾಹಕರು ತಿಳಿಯಬೇಕಿದೆ.
ಗ್ರಾಮೀಣ ಬ್ಯಾಂಕ್ ಇರುವುದೇ ರೈತರಿಗೆ ಅನುಕೂಲ ಮಾಡಿಕೊಡಲು, ತೆಗೆದುಕೊಂಡಿರುವ ಸಾಲವನ್ನು ಸರಿಯಾದ ಸಮಯಕ್ಕೆ ಹಣ ಪಾವತಿ ಮಾಡಿ ತೊಂದರೆಯಾಗದಂತೆ ನೋಡಿಕೊಳ್ಳಿ, ONE TIME Settelment ವ್ಯವಸ್ಥೆಯು ಜಾರಿಯಲ್ಲಿದೆ, ಬಡ್ಡಿ, ಹಾಗು ಅಸಲು ಎರಡನ್ನೂ ಒಟ್ಟಿಗೆ ಕಟ್ಟುವ ಮೂಲಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂದರು.
ಗ್ರಾಮಾಂತರ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನ ಸಾಮಾನ್ಯರಿಗೆ ಅರ್ಥವಾಗುವ ಹಾಗೆ ಬ್ಯಾಂಕ್ ನ ವ್ಯವಹಾರದ ಬಗ್ಗೆ , ಮಾಹಿತಿ ಬಗ್ಗೆ ಬೋರ್ಡ್ ಹಾಕಲಾಗುತ್ತದೆ, ಅದರಿಂದ ಮಾಹಿತಿ ತಿಳಿಯಬಹುದಾಗಿದೆ ಎಂದರು.
ಹುಲಿಕುಂಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವಿಕುಮಾರ್, ಪಿಡಿಓ ತಿಪ್ಪೇಸ್ವಾಮಿ, ಮಾಜಿ ಗ್ರಾಫಂ ಅಧ್ಯಕ್ಷ ವೈಕೆ ತಿಪ್ಪೇಸ್ವಾಮಿ, ಗ್ರಾಮದ ತಾಪಂ ಮಾಜಿ ಸದಸ್ಯ ಲಕ್ಕಪ್ಪ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ತಿಲಕ್ ಕುಮಾರ್, ಕ್ಯಾಶಿಯರ್ ವಸಂದರ, ಅಟೆಂಡರ್ ರಮೇಶ್, ಬ್ಯಾಂಕ್ ಸಿಬ್ಬಂದಿ ಟಿವಿ ಚಂದ್ರಶೇಖರ, ಭಾರತಿ, ಹನುಮಂತರಾಯಪ್ಪ. ಕೆನರ ಎಚ್ ಎಸ್ ಬಿಸಿ ಅಧಿಕಾರಿ ಯಶೋಧರ, ಸಂಜೀವಿನಿ ಸ್ತ್ರೀ ಶಕ್ತಿ ಒಕ್ಕೂಟದ ಯೋಗೇಶ್ವರಿ, ರಂಗಸ್ವಾಮಿ ಇದ್ದರು.