ಬೆಂಗಳೂರು: ಈಸ್ಟು ವರ್ಷ ರಾಜಕೀಯ ಪ್ರತಿನಿಧಿಗಳು ಜನರನ್ನು ಗುಲಾಮರಂತೆ ನಡೆಸಿಕೊಂಡರು, ಈಗ ನಾವು ಹಳ್ಳಿ, ಕೇರಿ,ಗ್ರಾಮ, ಓಣಿ ಗಳಲ್ಲಿ ನಮ್ಮ ಕಾರ್ಯತಂತ್ರಗಳನ್ನು ಹೇಳುವ ರಾಜಕೀಯದವರು ಮಾಡಿರುವ ಸಾಧನೆಗಳ ಕುರಿತು ನಾವು ಜಿಲ್ಲೆ ,ತಾಲುಕು ಮಟ್ಟದಲ್ಲಿ ಬೃಹತ್ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ ಎಂದು ಮುಖ್ಯ ಸಂಚಾಲಕರಾದ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಸಭಾಂಗಣದಲ್ಲಿ ರಾಜ್ಯ ಹಿತ ಚಿಂತನೆ, ಜನರ ಹಿತಾಸಕ್ತಿ, ಪರ್ಯಾಯ ರಾಜಕೀಯ ಶಕ್ತಿ ಹಾಗೂ ಕರ್ನಾಟಕದ ರಾಜ್ಯ ಪ್ರಾದೇಶಿಕತೆ ಶಕ್ತಿ ರೂಪಿಸಲು ಜನತಾ ಪ್ರಣಾಳಿಕೆ ಬಿಡುಗಡೆ ಮಾತಮಾಡಿದರು,
ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಈ ಕನ್ನಡಿಗರು ಬೇಸತ್ತುಹೋಗಿದ್ದರೂ,ಬೇರೆ ಆನಿರ್ವಾಯವಿಲ್ಲದೆ, ಅನಿವಾರ್ಯವಾಗಿ ಒಮ್ಮೆ ಬಿಜೆಪಿಯನ್ನೂ, ಮತ್ತೊಮ್ಮೆ ಕಾಂಗ್ರೆಸನ್ನೂ ಒಮ್ಮೊಮ್ಮೆ ಜೆಡಿಎಸ್ ಪಕ್ಷವನ್ನೂ ಆರಿಸುತ್ತಾ ಬಂದಿದ್ದಾರೆ. ಆದರೆ, ಶೋಷಿತ-ಪೀಡಿತ– ವಂಚಿತ ವರ್ಗಗಳಲ್ಲಿ ಹುಟ್ಟಿರುವ ಹೋರಾಟಗಾರರು ಮತ್ತು ಬುದ್ದಿಜೀವಿಗಲೆಲ್ಲರೂ ಕಲೆತು, ಗಂಭೀರವಾಗಿ ಚರ್ಚಿಸಿ, ರಾಜಕೀಯ ನಾಯಕರಿಗೆ ಸರಿಯಾಗಿ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಎಲ್ಲಾ ಬಡ ವರ್ಗದವರು ಸೇರಿಕೊಂಡು ಇಂದು ಹೊಸ ಪರ್ಯಾಯ ಮಾರ್ಗವನ್ನು ನಿರ್ಧರಿಸಿದ್ದಾರೆಂದರು.
ನಾವು ರಾಜ್ಕೀಯದವರ ಗುಲಾಮರಂತೆ ಇದ್ದೇವ್ವು ಆದರೆ ಈಗ ಅವರ ಆಟ ನಡೆಯುವುದಿಲ್ಲ, ಅವರಿಗೆ ತಕ್ಕ ಪಾಠ ಕಲಿಸಲು ನಾವೆಲ್ಲರೂ ಒಂದಾಗಿ ಕರ್ನಾಟದಲ್ಲಿ ನಾದಿಂದನ್ನು ಕಟ್ಟೋಣ ಎಂದು ಸಮರ ಸಾರಿದ್ದಾರೆ. ಅದಕ್ಕೆ ನಾಡಿನ ಎಲ್ಲ ರೈತರೂ, ದಲಿತರು, ಚಿಂತಕರು, ಸಭೆಯಲ್ಲಿ ಒಮ್ಮತಕ್ಕೆ ಬಂದು ಜಿಲ್ಲಾ, ತಾಲುಕು, ಗ್ರಾಮಮಟ್ಟದಲ್ಲಿ ಸಭೆ ಸಮಾರಂಭಗಳನ್ನು ಮಾಡಿ ಅದಕ್ಕೆ ಈಗಾಗಲೇ ಕೆಲವು ಜಿಲ್ಲೆ ಗಳಲ್ಲಿ ಸಭೆಗಳ ನಡೆಯುವ ಬಗ್ಗೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ, ಅದಕ್ಕೆ ಎಲ್ಲರೂ ಒಗ್ಗೂಡಿ ನಮ್ಮ ಹಕ್ಕುಗಳನ್ನು ಪಡೆದುಕೊಂಡು ಸನ್ಮಾರ್ಗದಲ್ಲಿ ನಡೆಯೋಣ ಎಂದು ತಿಳಿಸಿದರು.
ಸಂಚಾಲಕರಾದ ಮಾರಸಂದ್ರ ಮುನಿಯಪ್ಪ ಮಾತನಾಡಿ,ನಮ್ಮೆಲ್ಲರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸಬಲ್ಲ, ಸಮಾಜದಲ್ಲಿ ಏಕತೆ ಮತ್ತು ಸೌಹಾರ್ದತೆಯನ್ನು ಮೂಡಿಸಿ ಅಭಿವೃದ್ಧಿಯನ್ನು ಸಾಧಿಸಬಲ್ಲ ಪ್ರಾದೇಶಿಕ ರಾಜಕೀಯ ಪಕ್ಷವನ್ನು ರೂಪಿಸಬೇಕೆನ್ನುವುದೇ ನಮ್ಮೆಲ್ಲರ ನಿರ್ಧಾರವಾಗಿದೆ ಎಂದರು.ಈ ನಿಟ್ಟಿನಲ್ಲಿ, ಕಳೆದ ಒಂದೆ- ರಡು ವರ್ಷಗಳಿಂದ, ಈ ಎಲ್ಲಾ ನಾಯಕರೂ ಬುದ್ದಿಜೀವಿಗಳೂ ಕೂಡಿ, ನಾವು ನಿರ್ಮಿಸಲಿರುವ ಸ್ವಾಭಿಮಾನಿ ಮತ್ತು ಸ್ವಾವಲಂಬಿ ಕರ್ನಾಟಕಕ್ಕೆ ಅಗತ್ಯವಾದ ಜನತಾ ಪ್ರಣಾಳಿಕೆಯನ್ನು ರಚಿಸಿದ್ದೇವೆ. ಈ ಪ್ರಣಾಳಿಕೆಯನ್ನು ನಮ್ಮ ಎಲ್ಲಾ ಚಳುವಳಿಗಳ ಕಾರ್ಯಕರ್ತರ ಮತ್ತು ಪ್ರಗತಿಪರರ ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಮುಂದಿನ ಎರಡು ತಿಂಗಳು ಈ ನಮ್ಮ ಪ್ರಣಾಳಿಕೆಯನ್ನು ಕುರಿತು ನಮ್ಮೆಲ್ಲ ಕಾರ್ಯಕರ್ತರುಗಳು ನಾಡಿನ ಜನತೆಯೊಂದಿಗೆ ಚರ್ಚಿಸಲಿದ್ದಾರೆ. ಜನತೆ ನೀಡುವ ಸಲಹೆಗಳನ್ನು ಸ್ವೀಕರಿಸಿ, ಅವೆಲ್ಲವನ್ನು ಅಂಗೀಕರಿಸಿ ಅಂತಿಮವಾದ ಜನತಾ ಪ್ರಣಾಳಿಕೆಯನ್ನು ಲೋಕಾರ್ಪಣೆ ಮಾಡಲು ತೀರ್ಮಾಸನಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಸಂಚಾಲಕರುಗಳಾದ ಸಿ.ಎಂ.ಇಬ್ರಾಹಿಂ,ಕೋಡಿಹಳ್ಳಿ ಚಂದ್ರಶೇಖರ್, ಟಿಎನಾರಾಯಣಗೌಡ, ಬಿ.ಟಿ.ಲಲಿತನಾಯಕ್, ಮಾರಸಂದ್ರ ಮುನಿಯಪ್ಪ,ಎಂ.ಗೋಪಿನಾಥ್, ಶಿವರಾಮ್ ಕೆ.ವಿ. ಎನ್ ಮೂರ್ತಿ ,ಮೋಹನ್ರಾಜ್, ಆರ್.ಎಂ.ಎನ್. ರಮೇಶ್, ಯೋಗೇಶ್,ರವರು ಆನೇಕ ಮುಖಂಡರು ಜನತಾ ಪ್ರಣಾಳಿಕೆ ಬಿಡುಗಡೆ ಮಾಡಿದರು