ಬೆಂಗಳೂರು: ಕರ್ನಾಟಕ ರಾಜ್ಯ ದ ಇತಿಹಾಸದಲ್ಲಿ ನೂರಾರು ಸಮುದಾಯಗಳ ನಡುವೆ ವಿಶೇಷ ವಿಶಿಷ್ಟ ಆಚರಣೆಗಳಿಂದ ಗುರುತಿಸಲ್ಪಟ್ಟ ಹಳ್ಳಿಕಾರ ಸಮುದಾಯದಿಂದ ಶ್ರೀ ಹಳ್ಳಿಕಾರ್ ಮಠದ ದ್ವಿತೀಯ ವಾರ್ಷಿಕೋತ್ಸವ ಹಾಗು ಶ್ರೀ ಬಾಲಕೃಷ್ಣಾನಂದ ಸ್ವಾಮೀಜಿ ದೀಕ್ಷಾ ಮಹೋತ್ಸವ, ಹಳ್ಳಿಕಾರ ತಲಿ ರಾಸುಗಳ ಪ್ರದರ್ಶನ ಮಾಡಲಾಗುತ್ತದೆ ಎಂದು ಟ್ರಸ್ಟ್ ನ ಅಧ್ಯಕ್ಷರಾದ ನಾಗಯ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ನೂರಾರು ಸಮುದಾಯಗಳ ನಡುವೆ ತನ್ನದೇ ಆದ ವೈeಶಿಷ್ಟ ಮತ್ತು ವಿವಿಧ ಆಚರಣೆಗಳಿಂದ ಗುರುತಿಸಲ್ಪಟ್ಟ ಪಶು ಸಂಗೋಪನೆ ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡು ಬದುಕು ಸಾಗಿಸುತ್ತಿದ್ದೇವೆ. ರಾಜ್ಯದಲ್ಲಿ ಒಂದು ಲಕ್ಷ ಜನಸಂಖ್ಯೆಯನ್ನು ಹೊಂದಿದೆ, ನಮ್ಮ ಸಮುದಾಯದ ಹೆಗ್ಗುರುತು ವಿಶ್ವವಿಖ್ಯಾತ ರಾಸು ತಳಿಗಳಲ್ಲಿ ಒಂದಾದ ಹಳ್ಳಿಕಾರ ತಳಿ ಗಳಲ್ಲಿ ಒಂದಾದ ಪ್ರವರ್ತಕರಾಗಿ ಹತ್ತಾರು ರಾಜಮನೆತನಗಳ ಆಡಳಿತದಲ್ಲಿ ಸೇನಾಧಿಪತಿಗಳಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು ಹೆಮ್ಮೆಯ ಸಂಗತಿ. ವಿಜಯನಗರ ಮತ್ತು ಮೈಸೂರು ಸಂಸ್ಥಾನಗಳಲ್ಲಿ ಸೇವೆ ಸಲ್ಲಿಸಿದ ಐತಿಹಾಸಿಕ ದಾಖಲೆಗಳು ಇಂದಿಗೂ ಕಾಣಬಹುದಾಗಿದೆ. ಹಳ್ಳಕಾರ ಸಮುದಾಯವು ಇಂದು ಕರ್ನಾಟಕ ರಾಜ್ಯದ 14 ಜಿಲ್ಲೆ 45 ತಾಲೂಕುಗಳಲ್ಲಿ ಹಾಗೂ ತಮಿಳುನಾಡು ರಾಜ್ಯದ 10 ಜಿಲ್ಲೆ 40 ತಾಲೂಕುಗಳಲ್ಲಿ
3
ಸ್ವತಂತ್ರ ಭಾರತದ ನಂತರ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು ಸಂಘಟನೆ ಬಹಳ ಮುಖ್ಯವಾದ ಕಾರಣ 2020ರಲ್ಲಿ ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಗ್ರಾಮವಾಸಿಗಳಾದ ಸಮುದಾಯದ ಸಮಾನಮನಸ್ಯ ಮುಖಂಡರುಗಳು ಹಿರಿಯ ನ್ಯಾಯವಾದಿಗಳಾದ ಶ್ರೀ ನಾಗಯ್ಯನವರ ನೇತೃತ್ವದಲ್ಲಿ ಮತ್ತು 80ಕ್ಕೂ ಹೆಚ್ಚು ಧರ್ಮದರ್ಶಿಗಳ ಸಾವಿರಾರು ದಾನಿಗಳ ತುಂಬು ಹೃದಯದ ಸಹಕಾರದಿಂದ ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕು ಶೆಟ್ಟಿಗೊಂಡನಹಳ್ಳಿ ಗ್ರಾಮದಲ್ಲಿ ದಿನಾಂಕ 22.2.2021 ರಂದು ಹಳ್ಳಿಕಾರರ ಆಸ್ಥಿತೆಯ ಅಂಗವಾಗಿ ಹಳ್ಳಿಕಾರ ಸಮುದಾಯದ ಪ್ರಪ್ರಥಮ ಪೀಠಕ್ಕೆ ಬೇಲಿ ಮಠದ ಶಿವಾಚಾರ್ಯ ಪೂಜ್ಯರಿಂದ ಹಾಗೂ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಚಂದ್ರಶೇಖರನಾಥ ಸ್ವಾಮೀಜಿಗಳ ಅಮೃತ ಹಸ್ತದಿಂದ ಭೂಮಿ ಪೂಜೆ ನೆರವೇರಿಸಲಾಯಿತು ಮತ್ತು ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರು, ಅಂದಿನ ವಸತಿ ಸಚಿವರು ಮತ್ತು ಕೇಂದ್ರ ಸಚಿವರಾದ ಶ್ರೀ ವಿ. ಸೋಮಣ್ಣನವರು, ಮಾಜಿ ಸಚಿವರಾದ ಶ್ರೀ ಹೇಮಚಂದ್ರ ಸಾಗರ್ ರವರು ಹಾಗೂ ಹಾಲಿ ತುರುವೇಕೆರೆ ಶಾಸಕರಾದ ಶ್ರೀ ಎಂ.ಟಿ. ಕೃಷ್ಣಪ್ಪ ಮತ್ತು ಮಾಜಿ ಶಾಸಕರಾದ ಶ್ರೀ ಮಸಾಲ ಜಯರಾಮ್ ರವರು ಹಾಗೂ ಸಾವಿರಾರು ಹಳ್ಳಿಕಾರ ಬಂಧುಗಳು ಸಾಕ್ಷಿಯಾದರು.
ನಾಡಿನ ಉದ್ದಗಲಕ್ಕೂ ನೆಲೆಸಿರುವ ಹಳ್ಳಿಕಾರ ಬಂಧುಗಳು ತಮ್ಮ ತನು,ಮನ,ಧನ ಅರ್ಪಿಸುವ ಮುಖೇನ ಇಂತಹ ಐತಿಹಾಸಿಕ ಕಾರ್ಯಕ್ಕೆ ಸಾಕ್ಷಿಯಾಗಿದ್ದಾರೆ. ಹಳ್ಳಿಕಾರ ಮಠ ಟ್ರಸ್ಟ್ ನಾಡಿನ ಏಳುಕಟ್ಟಿಮನೆ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ “ಶ್ರೀಮಠದ ನಡೆ ಹಳ್ಳಿಕಾರರ ಕಡೆ’ ಎಂಬ ವಿಶಿಷ್ಟ ಕಾರ್ಯಕ್ರಮದ ಅಂಗವಾಗಿ ಪ್ರತಿ ಹಳ್ಳಿಯ ಹಿರಿಯರನ್ನು ಯುವಕರನ್ನು ಹಾಗೂ ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಒಮ್ಮತದ ಅಭಿಪ್ರಾಯದ ಮೇರೆಗೆ ಹಳ್ಳಿಕಾರ ಮಠ ಕಾಮಗಾರಿ ಪ್ರಾರಂಭಿಸಲಾಯಿತು. ಪ್ರಾರಂಭವಾಗಿ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ನೆಲೆಸಿರುವ ಸಾವಿರಾರು ಬಂಧುಗಳ ನೆರವಿನಿಂದ ಸಂಘಟನಾತ್ಮಕವಾದ ಸಂಚಲನ ಹಳ್ಳಿಕಾರ ಬಂಧುಗಳಲ್ಲಿ ಮೂಡಿಬಂದಿರುವುದು ಹರ್ಷದಾಯಕ ಸಂಗತಿ ಆಗಿರುತ್ತದೆ.
ಪ್ರಸ್ತುತ ಶ್ರೀಮಠದ ಸಾನಿದ್ದ ರಸಿಕರುವ ಆರೋಪಿಯಾ ದೇಶದಲ್ಲಿ ದಶಕಗಳಿಗೂ ಕಾಲ ಶ್ರೀ ಕೃಷ್ಣನ ಆರಾಧನೆಯಲ್ಲಿ ತೊಡಗಿ ಭಗದತ್ ಸೇವೆಯಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಚಿತ್ರದುರ್ಗ ಜಿಲ್ಲೆ ಹಿರಿಯ ತಾಲ್ಲೂಕು ಐದರಕೆರೆ ಗ್ರಾಮದ ಕೀರ್ತಿಶೇಷರಾದ ದೊಡ್ಡಮನೆ ಚಿಕ್ಕಣ್ಣನವರು ಹಾಗೂ ಶ್ರೀಮತಿ ಪುಟ್ಟಮ್ಮರವರ ಪುತ್ರರಾಗಿ ಜನಿಸಿದ ಪೂರ್ವಾಶ್ರಮದಲ್ಲಿ ಬ್ಯಾಲೆಗೌಡ ಎಂಬ ಹೆಸರಿನಿಂದ ನಾಮಾಂಕಿತರಾಗಿದ್ದ ಶ್ರೀಗಳು ವೈಷ್ಣದ ಸಂಪ್ರದಾಯದ ಧಾರ್ಮಿಕ ವಿಧಿ ವಿಧಾನದಂತೆ ಮೇಲುಕೋಟೆಯ ಪರಮಪೂಜ್ಯ ಗುರುಗಳಾದ ಪರಗೋಪ ರಾಮಾನುಜಜೀಯರ್ ರವರ ಮೂಲಕ ದೀಕ್ಷೆಯನ್ನ ಪಡೆದ ಪೂಜ್ಯರು ಶ್ರೀ ಶ್ರೀ ಶ್ರೀ ಬಾಲಕೃಷ್ಣಾನಂದ ಎಂಬ ಹೆಸರಿನಿಂದ ನಾಮಾಂಕಿತರಾಗಿ ಐತಿಹಾಸಿಕ ಹಳ್ಳಿಕಾರ ಮಠದ ಮೊದಲ ಪೀಠಾಧಿಪತಿಗಳಾಗಿ
ಕೇವಲ ಒಂದೇ ವರ್ಷದಲ್ಲಿ ತಮ್ಮೆಲ್ಲರ ಅಭಿಮಾನ ಪೂರ್ವಕ ಮತ್ತು ಭಕ್ತಿ ಪೂರ್ವಕವಾದಂತ ಪೂಜ್ಯರ ಪೀಠಾರೋಹಣ ಮತ್ತು ಹಳ್ಳಿಕಾರ ಮನೆ ಲೋಕಾರ್ಪಣ ಕಾರ್ಯಕ್ರಮ ದಿನಾಂಕ 10,11 ಮತ್ತು 12, 2022ರ ಶುಕ್ರವಾರದಿಂದ ಭಾನುವಾರದವರೆಗೂ ಮೂರು ದಿನಗಳ ಕಾಲ ಶಾಸ್ತೋತ್ತವಾಗಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಸಾವಿರಾರು ಹಳ್ಳಿಕಾರರು ಸಾಕ್ಷಿಯಾಗಿ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಮತ್ತು ಸ್ಪಟಿಕಪುರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ನಂಜಾವದೂತ ಸ್ವಾಮೀಜಿಗಳ ಅಮೃತ ಹಸ್ತದಿಂದ ಹಳ್ಳಿಕಾರ ಮತ ಲೋಕಾರ್ಪಣೆಗೊಂಡು ಸಮುದಾಯಕ್ಕೆ ಅರ್ಪಣೆಯಾಯಿತು. ಶ್ರೀಮಠಕ್ಕೆ ಕೇಂದ್ರ ಸಚಿವರಾದ ವಿ ಸೋಮಣ್ಣನವರ, ಮಾಜಿ ಶಾಸಕರಾದ ಹೇಮಚಂದ್ರ ಸಾಗರ್ ಅವರ ಕೊಡುಗೆ ಅಪಾರವಾದದ್ದು ಹಾಗೆಯೇ ನೂರಾರು ಬಂದುಗಳು ತಮ್ಮ ತಂದೆ ತಾಯಿಗಳ ಹೆಸರಿನಲ್ಲಿ ಸಮುದಾಯದ ಮತ್ತು ಗ್ರಾಮೀಣ ಬಾಗದ ಮಕ್ಕಳ ಶಿಕ್ಷಣಕ್ಕೆ ಕೊಠಡಿಗಳನ್ನು ದಾನವಾಗಿ ಕಟ್ಟಿಕೊಟ್ಟ ಕೀರ್ತಿ ಆ ಕುಟುಂಬಗಳಿಗೆ ಸಲ್ಲುತ್ತದೆ. ಪ್ರಸ್ತುತ ಶ್ರೀಮಠದ ಆವರಣದಲ್ಲಿ ಹಳ್ಳಿಕಾರರ ಹೆಸರಿನಲ್ಲಿ ಎಸ್.ಹೆಚ್.ಎಂ. – ಶಾಲಾ ಶಿಕ್ಷಣ ಸಂಸ್ಥೆ, ಹಳ್ಳಿಕಾರರ ಹೆಸರಿನಲ್ಲಿ ಕೋ.ಆಪರೇಟಿವ್ ಸೊಸೈಟಿ, ಗೋಶಾಲೆ ಸ್ಥಾಪಿಸಿ ಮಠದ ಧೈಯೋದ್ದೇಶವಾದ ಅನ್ನ-ಅಕ್ಷರ-ಅರಿವು ಎಂಬ ಮೂಲತತ್ವದ ಅಡಿಯಲ್ಲಿ ಪುಟ್ಟ ಹೆಜ್ಜೆಯನ್ನು ಇಟ್ಟಿದೆ. ಇದಕ್ಕೆ ತಮ್ಮೆಲ್ಲರ ಪ್ರೋತ್ಸಾಹ ಸಹಕಾರ ಮುಖ್ಯ ಕಾರಣ.
ಶ್ರೀಮಠದ ಸೇವಾಕಾರ್ಯವನ್ನು ಮುಂದುವರೆಸುತ್ತಾ, ನಾಡಿನ ಸಮುದಾಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೋಯ್ಯಲು ಎಲ್ಲಾ ಧರ್ಮದರ್ಶಿ ಮಂಡಳಿ ನಿರ್ಧರಿಸಿದ್ದು ಒಂದು ದಶಕದಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡು ಪ್ರಗತಿ ಪಥದಲ್ಲಿ ಸಾಗಲು ವಾರ್ಷಿಕೋತ್ಸವದ ಮೂಲಕ ಹಾಗೂ ಶ್ರೀಗಳ ಅನುಗ್ರಹದಂತೆ ದ್ವಿತೀಯ ವಾರ್ಷಿಕೋತ್ಸವ ಮತ್ತು ದ್ವಿತೀಯ ವರ್ಷದ ಶ್ರೀಗಳ ದೀಕ್ಷಾ ಮತ್ತು ಪೀಠಾರೋಹಣ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಧರ್ಮದರ್ಶಿಗಳು ಸಂಕಲ್ಪತೊಟ್ಟು ತೀರ್ಮಾನಿಸಿರುವ ಈ ಹಿನ್ನೆಲೆಯಲ್ಲಿ ದಿನಾಂಕ 23-2-2025ನೇ ಭಾನುವಾರ ನಾಡಿನ ವಿವಿಧ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಲವು ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಸಮುದಾಯದ ಹಿರಿಯರು, ಕಿರಿಯ ಮುಖಂಡರು ಹಾಗೂ ಸರ್ವಸಮುದಾಯದ ಬಂಧುಗಳು ಈ ಉತ್ಸವದಲ್ಲಿ ಪಾಲ್ಗೊಂಡು ಎಂದಿನಂತೆ ಈ ಬಾರಿಯ ಕಾರ್ಯಕ್ಕೆ ತಮ್ಮ ತನು-ಮನ-ಧನ ಅರ್ಪಿಸಿ ದುಮ್ಮಿಶಾಲ್ಯದೀಶ ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಹಾಗೂ ಈ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಸಕುಟುಂಬ ಸಮೇತರಾಗಿ ಆಗಮಿಸಿ ಯಶಸ್ವಿ ಮಾಡಬೇಕೆಂದು ಶ್ರೀಮಠದ ಕಳಕಳಿಯ ಪ್ರಾರ್ಥನೆ.