ಬೆಂಗಳೂರು: ಕರ್ನಾಟಕ ರಾಜ್ಯದ ಗೃಹರಕ್ಷಕರಿಗೆ ಸಾಂದರ್ಭಿಕ ಕರ್ತವ್ಯಕ್ಕೆ ಬದಲಾಗಿ 365 ದಿನಗಳ ಕಾಲ ಪೂರ್ಣಾವಧಿಕ ಕರ್ತವ್ಯ ನೀಡಬೇಕೆಂದು ಲೇಬರ್ ರೈಟ್ಸ್ ಫೋರಂ ಗೃಹ ರಕ್ಷಕರ ಪೋಷಕರ ಹಕ್ಕು ಸಂರಕ್ಷಣಾ ಸಮಿತಿಯ ಸಂಸ್ಥಾಪಕರಾದ ಪಾವಗಡ ಶ್ರೀರಾಮ್ ತಿಳಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಗೃಹ ರಕ್ಷಕರಿಗೆ ಕೇವಲ ಸಾಂದರ್ಭಿಕ ಕರ್ತವ್ಯ ನೀಡದೆ ವರ್ಷದ 365 ದಿನಗಳ ಕಾಲವೂ ಕೆಲಸ ಕೊಡಿ, ನಮ್ಮ ಕುಟುಂಬಕ್ಕೆ ಅನುಕೂಲವಾಗುತ್ತದೆ, ಬೇಕಾಬಿಟ್ಟಿ ಕರ್ತವ್ಯ ಮಾಡಿಸಿಕೊಳ್ಳುತ್ತಿರುವುದು ಸರಿಯಲ್ಲ, ನಮ್ಮ ಕರ್ನಾಟಕ ರಾಜ್ಯದಲ್ಲಿ 25,882 ಗೃಹ ರಕ್ಷಕರ ಇದ್ದು, 21,327 ಪುರುಷರು, 4555 ಮಹಿಳೆಯರು, 426 ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚುನಾವಣೆ ಕರ್ತವ್ಯ, ತುರ್ತು ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರೀಯ ಮತ್ತು ನಾಡ ಹಬ್ಬ, ಗಣಪತಿ ಹಬ್ಬ, ದಸರಾ ಮತ್ತು ಜಾತ್ರೆಗಳ ಬಂದೋಬಸ್ತ್ ಸೇರಿ ವರ್ಷದಲ್ಲಿ ಮೂರು ತಿಂಗಳು ಮಾತ್ರ ಕರ್ತವ್ಯ ಸಿಗುತ್ತದೆ. ಉಳಿದ ಒಂಬತ್ತು ತಿಂಗಳು ಗೃಹ ರಕ್ಷಕರ ಜೀವನ ಚಿಂತಾಜನಕವಾಗಿರುತ್ತದೆ.
ಗೃಹ ರಕ್ಷಕ ಮದುವೆಗೆ ಹೆಣ್ಣು ಕೊಡುತ್ತಿಲ್ಲ!
ಈ ರೀತಿ ಅತಂತ್ರ ಕೆಲಸದಿಂದ ಗೃಹ ರಕ್ಷಕರಿಗೆ ಮದುವೆಯಾಗಲು ಯಾರು ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ, ಸಾವಿರಾರು ಗೃಹರಕ್ಷಕ ಮದುವೆಯಾಗದೆ ಉಳಿದಿರುತ್ತಾರೆ. ಎಂ.ಎ, ಎಲ್.ಎಲ್.ಬಿ, ಬಿ.ಎ, ಬಿ.ಎಡ್ ಇನ್ನು ಆನೇಕ ಪದವಿಗಳನ್ನು ಪಡೆದವರು ಒಟ್ಟು ಐದು ಸಾವಿರಕ್ಕು ಹೆಚ್ಚು ಪದವಿಧಾರರು ಗೃಹರಕ್ಷಕ ಕರ್ತವ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಮೂಲಭೂತ ಸೌಲಭ್ಯಗಳನ್ನು ಕೊಟ್ಟಿಲ್ಲ, ಸರ್ಕಾರಿ ಅಧಿಕಾರಿಗಳ ರೀತಿ ಕರ್ತವ್ಯ ಮಾಡುತ್ತೇವೆ. ಆದರೆ ಕಡಿಮೆ ಸಂಬಳ ಅಧಿಕ ಕೆಲಸ ಇರುವುದರಿಂದ ಜೀವನ ನಿರ್ವಹಣೆ ಕಷ್ಟ ಆಗಿದೆ ಸರ್ಕಾರ ನಮ್ಮ ಕಡೆ ಕಣ್ಣೆತೆರೆದು ನೋಡಬೇಕಾಗಿದೆ ಎಂದರು.
ಆದ್ದರಿಂದ ಗೃಹರಕ್ಷಕರ ಪೊಷಕರಿಗೆ ತುಂಬಾ ತೊಂದರೆಯಾಗಿದ್ದು ನಮ್ಮ ಮಕ್ಕಳಿಗೆ ಕೆಲಸ ಇಲ್ಲದೆ ತಂದೆ ತಾಯಿಯನ್ನು ಪೊಷಣೆ ಮಾಡುವುದಿರಲೀ, ನಮಗೆ ಔಷಧಿ ಕೊಡಿಸಲು ಹಣವಿಲ್ಲದೆ ತೊಂದರೆಯಲ್ಲಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಮನೆ ಭಾಡಿಗೆ ನಮ್ಮ ಮಕ್ಕಳು ಪರದಾಡುತ್ತಿದ್ದಾರೆ. ಬೇರೆ ಕೆಲಸ ಮಾಡಲು ಸಾಧ್ಯವಾಗದೆ ಈ ಕೆಲಸ ಬಿಡಲು ಮನಸ್ಸು ಒಪ್ಪದೆ ಅವರ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ಇರುತ್ತದೆ, ಆದಕಾರಣ ಅವರ ತಂದೆ ತಾಯಿಗಳಾದ ನಾವು ತಮ್ಮ ಘನ ಸರ್ಕಾರದಲ್ಲಿ ವಿನಂತಿಸುವುದು ಅಂದ್ರ ಮತ್ತು ತೆಲಂಗಾಣ ಹಾಗೂ ಇತರೆ ರಾಜ್ಯಗಳಲ್ಲಿ ನೀಡುತ್ತಿರುವಂತೆ ಕರ್ನಾಟಕದಲ್ಲೂ ಕುಡ ಪೂರ್ಣವಧಿ ಕರ್ತವ್ಯ ನೀಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ ಎಂದರು.
ಸರ್ಕಾರಕ್ಕೆ ನೀಡಿರುವ ಪ್ರಮುಖ ಬೇಡಿಕೆಗಳು
1) ಸಾಂಧರ್ಬಿಕ ಕರ್ತವ್ಯಕ್ಕೆ, ಬದಲಾಗಿ 365 ದಿನ ಪೂರ್ಣಾವಧಿ ಕರ್ತವ್ಯ ನೀಡಬೇಕು.
2) ಎಲ್ಲಾ ಗೃಹ ರಕ್ಷಕರಿಗೂ ಅಂದ್ರ ಮತ್ತು ತೆಲಂಗಾಣ ರಾಜ್ಯಗಳ ರೀತಿ ಒಂದು ಸಾವಿರ ರೂಗಳ ಸಮಾನ ವೇತನ ನೀಡಬೇಕು.
3) ನಮ್ಮ ಗೃಹ ರಕ್ಷಕ ಪೂರ್ಣಾವಧಿ ಕರ್ತವ್ಯ ನೀಡುವವರೆಗೂ ಹೊಸ ನೇಮಕಾತಿಯನ್ನು ತಡೆಯಬೇಕು
4) ಪೊಲೀಸ್ ನೇಮಕಾತಿಯಲ್ಲಿ ಗೃಹ ರಕ್ಷಕರಿಗೆ ಪ್ರಥಮ ಆಧ್ಯತೆ ಮೇರೆಗೆ 50% ಮೀಸಲಾತಿ ನೀಡಬೇಕು.
5) 426 ಯೂನಿಟ್ ಆಫೀಸರ್ಗಳಿಗೆ ಉಚಿತ ದ್ವಿಚಕ್ರ ವಾಹನದ ಜೊತೆಗೆ ಎ.ಎಸ್.ಐ ಗೌರವ ನೀಡಬೇಕು.
6) ಕಾರ್ಮಿಕ ಇಲಾಖೆಯಿಂದ ನೀಡುವ ಎಲ್ಲಾ, ಸವಲತ್ತುಗಳನ್ನು ಗೃಹ ರಕ್ಷಕರಿಗೆ ನೀಡಬೇಕು.
7) ಎಲ್ಲಾ ಗೃಹ ರಕ್ಷಕರಿಗೆ ತಾಲ್ಲೂಕು ಮತ್ತು ಜಿಲ್ಲೆಗಳಿಗೆ ಸೇರಿದಂತೆ ಎಲ್ಲಾ ಕಡೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಒದಗಿಸಬೇಕು.
8) ಎಲ್ಲಾ ಗೃಹ ರಕ್ಷಕರಿಗೆ ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯ ಒದಗಿಸಬೇಕು.
9) ಎಲ್ಲಾ ಗೃಹ ರಕ್ಷಕರಿಗೂ ವಸತಿ ಸೌಲಭ್ಯ ಒದಗಿಸಬೇಕು.
ಪ್ರತಿಭಟನಾ ನಿರತ ಕಾರ್ಯಕ್ರಮದಲ್ಲಿ ಎಲ್ಲಾ ಜಿಲ್ಲೆಗಳ ಗೃಹ ರಕ್ಷಕ ಪಡೆಯ ಕಾರ್ಮಿಕರು ಪ್ರತಿಭಟನೆಗೆ ಸಾಥ್ ನೀಡಿದರು.