ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ 20 ರಿಂದ 30ಕ್ಕಿಂತ ಹೆಚ್ಚು ಕಾಲ ಪಕ್ಷಕ್ಕಾಗಿ ದುಡಿಯುತ್ತಿರುವವರಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ, ಹೀಗಾಗಿ ನಮಗೆ ಪಕ್ಷದ ವತಿಯಿಂದ ಮನ್ನಣೆ ಸಿಗದೇ ಇದ್ದರೆ ಮುಂದಿನ ದಿನಗಳಲ್ಲಿ ಕೆಪಿಸಿಸಿ ಹಾಗು ಎಐಸಿಸಿ ಕಛೇರಿ ಮುಂದೆ ಧರಣಿ ನಡೆಸಲಾಗುತ್ತದೆ ಎಂದು ಕೆಪಿಸಿಸಿ ನಿಷ್ಠಾವಂತ ಕಾರ್ಯಕರ್ತರ ವೇದಿಕೆ ಅಧ್ಯಕ್ಷರ ಅನಂತ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ದಶಕಗಳ ಕಾಲ ಕಾಂಗ್ರೆಸ್ ನಲ್ಲಿ ಅನೇಕ ಮಹನೀಯರು ದುಡಿದಿದ್ದಾರೆ, ಆದರೆ ಅವರಿಗೆ ಪಕ್ಷದಲ್ಲಿ ಯಾವುದೇ ರೀತಿಯ ಗುರುತಿಸುವ ಕಾರ್ಯ ಮಾಡಿಲ್ಲ ಅದು ನೋವಿನ ಸಂಗತಿಯಾಗಿದೆ ಎಂದರು.
1) ಕೆ.ಪಿ.ಸಿ.ನಿಷ್ಠಾವಂತ ಕಾರ್ಯಕರ್ತರ ವೇದಿಕೆಯು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಗೆ ಕರ್ನಾಟಕ ರಾಜ್ಯದ ಕಾಂಗ್ರೇಸ್ ಪಕ್ಷದಲ್ಲಿ ಇರುವ ಹಿರಿಯ ಕಾಂಗ್ರೇಸ್ ನಾಯಕರು ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ಪುನರ್ ರಚನೆಯಾಗಲಿರುವ ನಿಗಮ ಮಂಡಳಿಗಳಿಗೆ ಹೆಚ್ಚಿನ ಪ್ರಾತಿನಿದ್ಯ ಕೊಡಬೇಕೆಂದು ವೇದಿಕೆಯು ಮನವಿ ಅರ್ಪಿಸುತ್ತದೆ.
2) ಈ ವೇದಿಕೆಯು ರಾಜಕೀಯ ಪಕ್ಷಗಳ ವಾಸ್ತವಗಳ ಗಳ ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಹಲವು ಸ್ವಾಲಂಬಿ ನಿರ್ದೇಶನಗಳನ್ನು ನೀಡುವುದರ ಜೊತೆಗೆ ಪ್ರಜಾತಂತ್ರಗಳ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸಬೇಕೆಂದು ವೇದಿಕೆಯು ಕಾಂಗ್ರೇಸ್ ವರಿಷ್ಠ ಮಂಡಳಿಯನ್ನು ಒತ್ತಾಯಿಸುತ್ತದೆ.
3) ಕರ್ನಾಟಕ ಕಾಂಗ್ರೇಸ್ ಪಕ್ಷದ ಅಧ್ಯಕ್ಷರು ಹಾಗೂ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಕಳೆದ ಹತ್ತಾರು ವರ್ಷಗಳಿಂದ ಕಾಂಗ್ರೇಸ್ ಪಕ್ಷದ ಸಂಘಟನೆಗಾಗಿ ಬಾಡಿಗೆಯತ್ತುಗಳಾಗಿ ದುಡಿದು ದಣಿದು ತಮ್ಮ ಬದುಕನ್ನು ದೃಷ್ಟರ ಕೋಪಕ್ಕೆ ತಳ್ಳಿ ತಮ್ಮ ಸಂಸಾರದ ಬದುಕಿಗೆ ಕೊಡಲಿ ಪೆಟ್ಟಾಗಿರುವ ನಿಷ್ಠಾವಂತರ ಬದುಕಿಗಾಗಿ “ಕಾರ್ಯಕರ್ತರ ಆರ್ಥಿಕ ಅಭ್ಯುದಯಕ್ಕಾಗಿ ಕಲ್ಯಾಣ ನಿಧಿಯನ್ನು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಠೇವಣಿಯನ್ನು ಇಟ್ಟು ಅವರ ಹಿತವನ್ನು ಕಾಪಾಡಬೇಕೆಂದು ಅರ್ಪಿಸುತ್ತದೆ.
4) ಮಾರ್ಚ್ ತಿಂಗಳ ಕೊನೆಯವಾರದಲ್ಲಿ 6.2.2.2 ಕಛೇರಿಯ ಮುಂದೆ ಕೆ.ಪಿ.ಸಿ.ಸಿ.ನಿಷ್ಠಾವಂತ ಕಾರ್ಯಕರ್ತರ ವೇದಿಕೆಯು ಉಪಾವಸ ಸತ್ಯಗ್ರಹವನ್ನು ಹಮ್ಮಿಕೊಂಡಿದೆ. ಈ ಬಹುಮುಖ್ಯವಾದ ಕಾರ್ಯಕ್ರಮದಲ್ಲಿ ರಾಜ್ಯದಾಂತ್ಯ ಸುಮಾರು ಐದು ಸಾವಿರ ಕಾರ್ಯಕರ್ತರು ಬಾಗವಹಿಸುವವರು ಇದ್ದಾರೆ ಜೊತೆಗೆ ಕೆ.ಪಿ.ಸಿ.ಸಿ. ಅಧ್ಯಕ್ಷರಿಗೆ ನಿಷ್ಠಾವಂತ ಕಾರ್ಯಕರ್ತರ ಬಹುದಿನದ ಬೇಡಿಕೆಯಾದ ನಿಗಮ ಮಂಡಳಿಗಳಲ್ಲಿ ಹೆಚ್ಚಿನ ಪ್ರಾತಿನಿದ್ಯ ನೀಡಬೇಕೆಂದು ಮನವಿ ಅರ್ಪಿಸುತ್ತದೆ.
5.ಕರ್ನಾಟಕ ರಾಜ್ಯದಲ್ಲಿ 1972 ರಿಂದ 1980 ರವರೆಗೆ 8 ವರ್ಷದವರೆಗೆ ರಾಜ್ಯದ ಬಹುನಿರಿಕ್ಷಿತ ನಾಯಕತ್ವವನ್ನು ನೀಡಿ ಹಿಂದುಳಿದ ವರ್ಗದವರಿಗೆ ರಾಜಕೀಯ ಅಸ್ಥಿತವಕ್ಕೆ ಬುನಾದಿ ಹಾಡಿ ಜೀತ ಪದ್ಧತಿ ಹಾಗೂ ಉಳುವವನೆ ನೆಲದೊಡಯ ಕ್ರಾಂತಿಕಾರಿ ಕಾರ್ಯಕ್ರಮವನ್ನು ರಾಷ್ಟ್ರ ರಾಜಕಾರಣದಲ್ಲಿ ಮುಂಚಿ ದೃವತಾರೆಯಾಗಿ ಮೆರೆದು ನಮ್ಮೆಲರನ್ನು ಹಗಲಿರುವ ಮಾಜಿ ಮುಖ್ಯಮಂತ್ರಿ ದಿ॥ ಡಿ.ದೇವರಾಜ್ ಅರಸು ರವರ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತನೆ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ವೇದಿಕೆಯು ಓತ್ತಾಯಿಸುತ್ತದೆ.
6) ರಾಜ್ಯದ ಕಾಂಗ್ರೇಸ್ ಪಕ್ಷದಲ್ಲಿ ಹಲವು ಗೊಂದಲಗಳನ್ನು ಸೃಷ್ಟಿ ಮಾಡುತ್ತಿರುವ ಕೆಲವು ಹಿರಿಯ ಸಚಿವರ ವಿರುದ್ಧ ಕಾಂಗ್ರೇಸ್ ವರಿಷ್ಠ ಮಂಡಳಿಯು ಪತ್ರಿಕೆ ಹಾಗೂ ಸಂಪರ್ಕ ಮಾದ್ಯಮಗಳಲ್ಲಿ ಪಕ್ಷದ ಘನತೆಗೆ ಧಕ್ಕೆ ತರುವ ಹೇಳಿಕೆಯನ್ನು ನೀಡಬಾರದೆಂದು ಸೂಕ್ತ ನಿರ್ದೇಶನವನ್ನು ಹಿರಿಯ ಸಚಿವರುಗಳಿಗೆ ವರಿಷ್ಠ ಮಂಡಳಿಯು ಹೆಚ್ಚರಿಕೆ ನೀಡಬೇಕೆಂದು ವೇದಿಕೆಯು ಮನವಿ ಅರ್ಪಿಸುತ್ತದೆ.
7) ಕಾಂಗ್ರೇಸ್ ಪಕ್ಷದಲ್ಲಿ ಒಬ್ಬರಿಗೆ ಒಂದೇ ಉದ್ದೆ ಮಂತ್ರವನ್ನು ಹೇಳುತ್ತಿರುವ ಹಿರಿಯ ಸಚಿವರುಗಳಿಗೆ ಒಂದು ಮನೆಗೆ ಒಂದೇ ಪದವಿಯನ್ನು ನೀಡುವ ಸಂಕಲ್ಪವನ್ನು ಕಾಂಗ್ರೇಸ್ ವಲಯದಲ್ಲಿ ವಿಶೇಷ ಸಲೆಹೆಯಾಗಿ ಕಲ್ಪಿಸಬೇಕೆಂದು ವೇದಿಕೆಯು ಒತ್ತಾಯಿಸುತ್ತದೆ.
8) ರಾಜ್ಯದ ಕಾಂಗ್ರೇಸ್ ಪಕ್ಷದ ಸಂಘಟನೆಗಾಗಿ ಹಾಗೂ ಎಲ್ಲಾ ಲೋಕಸಭೆ ಹಾಗೂ ಚುನಾವಣೆಗಳಲ್ಲಿ ಪ್ರಾಮಾಣಿಕರಗಿ ದುಡಿದು ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಕಾರ್ಯಕರ್ತರಿಗೆ ಸೂಕ್ತ ಪ್ರಾತಿನಿದ್ಯವನ್ನು ಪಕ್ಷ ಹಾಗೂ ಸರ್ಕಾರದಲ್ಲಿ ನೀಡಬೇಕೆಂದು ಮನವಿ ಅರ್ಪಿಸುತ್ತದೆ.
9) ಮುಂದಿನ ತಿಂಗಳು ಕೊನೆಯವಾರದಲ್ಲಿ ಕಾಂಗ್ರೇಸ್ ಪಕ್ಷದ ಅಧ್ಯಕ್ಷರು ಹಾಗೂ ಹಿರಿಯ ಕಾಂಗ್ರೇಸ್ ನಾಯಕರಾದ ಶ್ರೀಮತಿ.ಸೋನಿಯಾ ಗಾಂಧಿ ವಿರೋಧ ಪಕ್ಷದ ನಾಯಕರಾದ ಶ್ರೀ.ರಾವುಲ್ ಗಾಂಧಿ ಹಾಗೂ ಲೋಕಸಭಾ ಸದಸ್ಯೆಯಾದ ಪ್ರಿಯಾಂಕ ಗಾಂಧಿಯವರನ್ನು ಬೇಟಿ ಮಾಡಲು ನಿಷ್ಠಾವಂತ ನಾಯಕರೆಲ್ಲರು ಬೇಟಿ ಮಾಡಲು ಅವಕಾಶವನ್ನು ಕೇಳಿರುತ್ತೆವೆ.
10) ಇಷ್ಟಲದೆ ಅಖಿಲ ಭಾರತ ಕಾಂಗ್ರೇಸ್ ಪಕ್ಷದ ಕಛೇರಿಯ ಮುಂದೆ ನಿಷ್ಟಾವಂತ ಕಾರ್ಯಕರ್ತರ ವೇದಿಕೆಯು ಉಪವಾಸ ಸತ್ಯಗ್ರಹವನ್ನು ಹಮ್ಮಿಕೊಂಡಿರುತ್ತದೆ. ರಾಜ್ಯದ ಸುಮಾರು 500 ಜನ ಕಾರ್ಯಕರ್ತರು ದೆಹಲಿಯ ನಿಯೋಗದಲ್ಲಿರುತ್ತಾರೆ. ರಾಜ್ಯದಂತಹ ಮೇಲಿನ ಸತ್ಯಗ್ರಹಕ್ಕೆ ಉತ್ತಮ ಪ್ರತಿಕ್ರಿಯೆ ಇದ್ದು ಯಶಸನ್ನು ಕಾಣುವುದರಲ್ಲಿ ಸಂಶಯವಿಲ್ಲ.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳು, ಅನೇಕ ನಿಷ್ಠಾವಂತ ಕೈ ಕಾರ್ಯಕರ್ತರು , ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.