ಬೆಂಗಳೂರು: ಸಿದ್ದರಾಮಯ್ಯ ಮಂಡಿಸಿದ ಬಜೆಟ್ನಲ್ಲಿ ರೈತರಿಗೆ ಮಹತ್ವದ ಯೋಜನೆಗಳನ್ನು ಪ್ರಕಟಿಸದೇ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಸರ್ಕಾರದ -ಕ್ಕೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ನಶೆ ಹೊರಹಾಕಿದರು.
ಬಾರಿಯ ಬಜೆಟ್ನಲ್ಲಿ ರೈತರನ್ನು ಲೆಕ್ಕಕ್ಕೆ ಇಲ್ಲದಂತೆ ತಿರಸ್ಕಾರ ಮಾಡಲಾಗಿದೆ. ಕೃಷಿ ಕಾಯ್ದೆಯನ್ನು ರದ್ದು ಪಡಿಸುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಎರಡು ವರ್ಷ ಕಳೆದರೂ ಕೃಷಿ ಕಾಯ್ದೆಯನ್ನು ಮುಂದುವರೆಸಿದೆ. ಹೂಡಿಕೆದಾರರ ಸಮಾವೇಶ ನಡೆಸಿ ಕೋಟ್ಯಂತರ ರೂಪಾಯಿ ಬಂಡವಾಳಹರಿದು ಬರಲಿದೆ ಎಂದು ಆಸೆ ತೋರಿಸಿ ರೈತರ ಜಮೀನು ಕಸಿದುಕೊಳ್ಳಲಾಗುತ್ತಿದೆ ಎಂದು ರೈತರು ಆರೋಪಿಸಿದರು.
ರೈತರ ಜಮೀನು ಕಸಿದುಕೊಂಡು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ನೀಡಲಾಗುತ್ತಿದೆ. ಇದು ರೈತರಿಗೆ ಮಾಡುತ್ತಿರುವ ದ್ರೋಹ ಎಂದು ಪ್ರತಿಭಟನಕಾರರು ಆರೋಪಿಸಿದರು.
ಯಃ ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕು, ಜಂಗಮಕೋಟೆ ಹೋಬಳಿಯ ತೊಟಗಾನಹಳ್ಳಿ ಗ್ರಾಮ, ಅರಿಕೆರೆ ಗ್ರಾಮ, ಬಸವಪಟ್ಟಣ ಗ್ರಾಮ, ಹೊಸಪೇಟೆ ಗ್ರಾಮ, ಚೊಕ್ಕೊಂಡಹಳ್ಳಿ ಗ್ರಾಮ ಯದ್ಧಲುತಿಪ್ಪೇನಹಳ್ಳಿ, ಗ್ರಾಮ, ಕೊಲಿ ಹೊಸೂರು ಗ್ರಾಮ, ನಡಿಪಿನಾಯಕನಹಳ್ಳಿ ಗ್ರಾಮ ತಾದೂರು ಗ್ರಾಮ, ಯಣ್ಣಂಗೂರು ಗ್ರಾಮ, ದೇವಗಾನಹಳ್ಳಿ ಗ್ರಾಮ, ಗೊಲ್ಲಹಳ್ಳಿ ಮತ್ತು ಸಂಜೀವಪುರ ಗ್ರಾಮಗಳ ಸುಮಾರು 2823 ಎಕರ 04.12 ಗುಂಟೆ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯವರು ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆ ಸಂಖ್ಯೆ ಸಿಐ ಎಸ್ಪಿಕ್ಯೂ 2024 ದಿನಾಂಕ:25.06.2024ರ ಅಧಿಸೂಚನೆಯನ್ನ ರದ್ದುಪಡಿಸುವಂತೆ ಕೋರಿ ಮನವಿ ಪತ್ರ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಚಿಕ್ಕಬಳ್ಳಾಪುರ ಶಿಡ್ಲಘಟ್ಟ ತಾಲ್ಲೂಕು, ಜಂಗಮಕೋಟೆ ಹೋಬಳಿಯ ಮೂಲತಃ ಕೃಷಿ ಅವಲಂಬಿತ ಹೋಬಳಿಯಾಗಿದ್ದು ಸದರಿ ಹೋಬಳಿಯ ವ್ಯಾಪ್ತಿಯಲ್ಲಿರುವ ತೊಟ್ಟಿಗಾನಹಳ್ಳಿ, ಗ್ರಾಮ ಅರಿಕೆರೆ ಗ್ರಾಮ. ಬಸವಪಟ್ಟಣ ಗ್ರಾಮ, ಹೊಸಪೇಟೆ ಗ್ರಾಮ, ಚೊಕ್ಕೊಂಡಹಳ್ಳಿ ಗ್ರಾಮ, ಯದ್ಧಲುತಿಪ್ಪೇನಹಳ್ಳಿ ಗ್ರಾಮ ಕೊಲಿ ಹೊಸೂರು ಗ್ರಾಮ, ನಡಿಪಿನಾಯಕನಹಳ್ಳಿ ಗ್ರಾಮ,ತಾದೂರು ಗ್ರಾಮ, ಯಣ್ಣಂಗೂರು ಗ್ರಾಮ, ದೇವಗಾನಹಳ್ಳಿ ಗ್ರಾಮ, ಗೊಲ್ಲಹಳ್ಳಿ, ಸಂಜೀವಪುರ ಗ್ರಾಮಗಳ ಗ್ರಾಮಸ್ಥರಿಗೆ ಜೀವನೋಪಾಯಕ್ಕೆ ಕೃಷಿಯೇ ಮೂಲ ಆಧಾರಾಗಿರುತ್ತದೆ. ಇವರು ಸಣ್ಣ ಮತ್ತು ಅತೀ ಸಣ್ಣ ಹಿಡುವಳಿದರರಾಗಿರುತ್ತಾರೆ. ಇವರು ಜೀವ ನೋಪಾಯಕ್ಕಾಗಿ ಉಳಿಸಿಕೊಂಡಿರುವ 1 ಅಥವಾ 2 ಎಕರೆ ಜಮೀನುಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಭೂಮಿಯನ್ನು ಅವರು ಹೊಂದಿರುವುದಿಲ್ಲ.
ಮುಂದುವರೆದು, ವಿಶೇಷವಾಗಿ ಶಿಡ್ಲಘಟ್ಟ ತಾಲ್ಲೂಕು ರೇಷ್ಮೆ ಬೆಳೆಗೆ. ಪ್ರಸಿದ್ದಿಯೊಂದಿಗೆ ರೇಷ್ಮೆ ನಗರಿ ಎಂದು ಕರೆಯಲ್ಪಡುತ್ತದೆ. ರೇಷ್ಮೆಯ ಬಳೆಯು ಸಾಕುಷ್ಟು ಉದ್ಯೋಗ ಅವಕಾಶಗಳ ಸೃಷ್ಟಿಗೆ ಕಾರಣವಾಗಿರುತ್ತದೆ, ಇದನ್ನು ಮನ ಗಂಡಂತಹ ಸರ್ಕಾರವು ಈ ಹಿಂದಿನ ವಾರ್ಷಿಕ ಮುಂಗಡ ಪತ್ರ (ಬಜೆಟ್)ನಲ್ಲಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಸ್ಥಾಪಿಸಲು ಸುಮಾರು ರೂ.200 ಕೋಟಿಗಳನ್ನು ಮಂಜೂರು ಮಾಡಿರುತ್ತದೆ ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ. ಈ ಪ್ರದೇಶದಲ್ಲಿ 5 ಕೆರೆಗಳು ಇದ್ದು ಮತ್ತು ಅರಣ್ಯದ ಪ್ರದೇಶದಲ್ಲಿ ಕಾಡು ಪ್ರಾಣಿಗಳು ವಾಸವಾಗಿರುತ್ತವೆ ಮತ್ತು ಈ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು ಬಹಳ ಪ್ರಸಿದ್ಧವಾಗಿದ್ದು, ಈ ಭೂ ದೇಶವು HN ವ್ಯಾಲಿ ನೀರಾವರಿ ವ್ಯವಸ್ಥೆ ಹೊಂದಿರುತ್ತೆ.
ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ನೇತೃತ್ವದಲ್ಲಿ ಪ್ರತಿ ಭಟನೆ ನಡೆಯಿತು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರತಿಭಟನ ಕಾರರಿಂದ ಮನವಿ ಸ್ವೀಕರಿಸಿದರು.