ಬೆಂಗಳೂರು: ಸಂಘಟನೆಗಳು ಧ್ವನಿ ಇಲ್ಲದವರ ಪರವಾಗಿ ಧ್ವನಿಯೆತ್ತುವ ಮೂಲಕ ನಿರಂತರವಾಗಿ ಹೋರಾಟ ಮಾಡುತ್ತಿರ ಬೇಕು ಎಂದು ಮಾಜಿ ಸಚಿವೆ ರಾಣಿ ಸತೀಶ್ ಕರೆ ನೀಡಿದರು.
ಕರುನಾಡ ವಿಜಯಸೇನೆ ವತಿಯಿಂದ ಗುರುವಾರ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಬೆಳವಾಡಿ ಮಲ್ಲಮ್ಮ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಾರ್ಯಾಂಗ, ನ್ಯಾಯಾಂಗವಿದ್ದರೂ ಅನೇಕ ಅನ್ಯಾಯಗಳು ನಡೆಯುತ್ತಿದೆ. ಆ ನಿಟ್ಟಿನಲ್ಲಿ ಸಂಘಟನೆಗಳು ಧ್ವನಿ ಇಲ್ಲದವರ ಪರವಾಗಿ ಧ್ವನಿಯೆತ್ತುವ ಮೂಲಕ ನಿರಂತರವಾಗಿ ಹೋರಾಟ ಮಾಡುತ್ತಿರಬೇಕು ಎಂದರು.
ಶಿವಾಜಿರವರ ವಿರುದ್ಧ ಹೋರಾಡಿದ ಬೆಳವಾಡಿ ಮಲ್ಲಮ್ಮ ರವರು ನಮ್ಮೆಲ್ಲರ ಮನಸ್ಸಿನಲ್ಲಿ ಅಗ್ರಸ್ಥಾನದಲ್ಲಿದ್ದು, ಪ್ರಸ್ತುತ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಪ್ರಶಸ್ತಿಯು ಮಹಿಳೆಯರು ಇನಷ್ಟು ಸಮಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಿದಂತಾಗುತ್ತದೆಂದು ಅಭಿಪ್ರಾಯಾಪಟ್ಟರು.
ಗಾಯಕಿ ಸವಿತಾ ಗಣೇಶ್ ಪ್ರಸಾದ್ ಮಾತನಾಡಿ, ಮಹಿಳಾ ದಿನಾಚರಣೆ ಚೆನ್ನಾಗಿರಬೇಕಾದರೆ ಪ್ರತಿ ಮನೆಯಲ್ಲಿ ಮಹಿಳೆ ಯರಿಗೆ ಗೌರವ ಸಿಗಬೇಕು, ಆಗ ಸಮಾಜದಲ್ಲಿ ಗೌರವ ಸಿಗಲುಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ವಿಜಯಸೇನೆ ಅಧ್ಯಕ್ಷ ಎಚ್.ಎನ್.ದೀಪಕ್ ಕುಮಾರ್ ಮಾತನಾಡಿ, ಕರುನಾಡು ವಿಜಯ ಸೇನೆ ಸಂಘಟನೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬೆಂಗಳೂರು ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು, ಮಹಿಳಾ ದಿನಾಚರಣೆಯ ಮೇಲೆ ಸಂಘಟನೆಯಲ್ಲಿ ಹಾಗೂ ಸಮಾಜದಲ್ಲಿ ಮಹಿಳೆಯರು ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಅಂತವರನ್ನು ಗುರುತಿಸಿ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಮಾಡಲಾಯಿತು. ಎಲೆಮರೆಕಾಯಿಯಂತೆ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತೋರಿಸುವ ನಟ್ಟಿನಲ್ಲಿ ಹಾಗೂ ಸಾಧನೆ ಬಗ್ಗೆ ಇತರರಿಗೆ ಮನವರಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಸಾಧನೆ ಮಾಡಿರವ ಮಹಿಳೆಯರ ಯಶೋಗಾತೆಯನ್ನು ಇತರರು ಪೂರ್ತಿಯಾಗಿ ತೆಗೆದುಕೊಂಡು ಸಾದಕೀಯರು ಸಾಧನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂಬುದು ನಮ್ಮ ಆಶಯವಾಗಿದೆ ಎಂದರೆ.
ಈ ಸಂದರ್ಭದಲ್ಲಿ ಐ ಕ್ಯಾಟ್ ಫೌಂಡೇಶನ್ ಅಧ್ಯಕ್ಷೆ ಡಾ. ಶಾಲಿನಿ ನಲವಾಡ್, ಲೇಖಕಿ ಚೈತ್ರಾ ಶಿವಯೋಗಿ ಮಠ, ಗಾಯಕಿ ಸವಿತಾ ಗಣೇಶ್ ಪ್ರಸಾದ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶೀಲಾ ಮಧು, ಎಸ್ಎಸ್ಬಿ ಸೊಲ್ಯೂಷನ್ಸ್ ವ್ಯವಸ್ಥಾಪಕ ನಿರ್ದೇಶಕಿ ಭವ್ಯರವರಿಗೆ ಮಲ್ಲಮ್ಮ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಡಾ.ಎಸ್. ಜಿ. ಸುಶೀಲಮ್ಮ, ವಿಜಯಸೇನೆ ಅಧ್ಯಕ್ಷ ಎಚ್.ಎನ್.ದೀಪಕ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.