ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ಅಧ್ಯಕ್ಷೀಯ ಚುನಾವಣೆ ಎಪ್ರಿಲ್ 13ರಂದು ಬೆಂಗಳೂರಿನ ಎಪಿಎಸ್ ಕಾಲೇಜಿನಲ್ಲಿ ನಡೆಯಲಿದೆ, ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಭ್ಯರ್ಥಿ ರಘುನಾಥ್ ಎಸ್ ಅವರು ಸ್ಪರ್ಧೆ ಮಾಡಿದ್ದಾರೆ. ಸಂಘದಲ್ಲಿ ನಡೆಯುತ್ತಿರುವ ಚಟುವಟಿಗಳ ಬಗ್ಗೆ ಹಾಗೂ ಸಮಾಜ ಸೇವೆ, ಸಮಾಜದ ಅಭಿವೃದ್ಧಿಯ ಚಿಂತನೆಗಳ ಬಗ್ಗೆ ಸ್ವತಃ ರಘುನಾಥ ಅವರು ಮಾಹಿತಿ ನೀಡಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು, ಚುನಾವಣೆಯಲ್ಲಿ ಸಮಾಜದ ಬಂಧುಗಳು ಚುನಾವಣೆಯಲ್ಲಿ ಗೆಲ್ಲಿಸಿದ್ದೆ ಆದರೆ ಸಮಾಜದ ಅಭಿವೃದ್ಧಿಗೆ ಜನರ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ. 2025 30ರ ಅವಧಿಯ ಸುಮಾರು 18 ಚುನಾವಣಾ ಪ್ರಣಾಳಿಕೆಯನ್ನು ಸಹ ಮಾಡಿದ್ದು ಹಾವೆಲ್ಲವನ್ನು ಸಹ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ತಿಳಿಸಿದರು.
ರಘುನಾಥ್ ಎಸ್ ಅವರ ಚುನಾವಣಾ ಪ್ರಣಾಳಿಕೆ
- 100 ಕೋಟಿ ಮೂಲಧನ ಸಂಗ್ರಹಿಸುವುದು.
- ಅಧ್ಯಕ್ಷರಿಗೆ 5 ವರ್ಷದ ಒಂದೇ ಅವಧಿ ನಿಗಧಿಪಡಿಸುವುದು.
- ಮಹಾಸಭಾ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಉತ್ತಮ ಕಾರ್ಯನಿರ್ವಹಿಸಲು ಉಪಸಮಿತಿಗಳನ್ನು ನೇಮಿಸುವುದು.
- ಸದಸ್ಯರ ದತ್ತಾಂಶದ ಗಣಕೀಕರಣ ಮಾಡುವುದು.
- ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಬ್ರಾಹ್ಮಣ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ CA ಜಾಗ ಕೊಡಿಸಲು ಪ್ರಯತ್ನಿಸುವುದು.
- ಮುದ್ರಿತ / ಸಾಫ್ಟ್ ಕಾಪಿ “ವಿವುನುಡಿ” ಪ್ರತಿ ತಿಂಗಳು ಸದಸ್ಯರಿಗೆ ಕಳುಹಿಸುವುದು.
- ಪದ್ಮನಾಭನಗರದಲ್ಲಿರುವ ನಿವೇಶನದ ಅಭಿವೃದ್ಧಿಯ ಕಾರ್ಯವನ್ನು ಪ್ರಾರಂಭಿಸುವುದು.
- ಮಹಿಳಾ ವಸತಿ ನಿಲಯವನ್ನು ವಿಸ್ತರಿಸುವುದು.
- ಪ್ರತಿ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಭಿರಗಳನ್ನು ಏರ್ಪಡಿಸುವುದು.
- ಕನಾಟಕ ರಾಜ್ಯ ಬ್ರಾಹ್ಮಣರ ಇತಿಹಾಸ ಕುರಿತು ಕೃತಿಗಳನ್ನು ಹೊರತರುವುದು.
- ವೇದ ಪಾಠಶಾಲೆ ಪ್ರಾರಂಭಿಸುವುದು.
- 5 ವರ್ಷದಲ್ಲಿ ಪದ್ಮನಾಭನಗರದಲ್ಲಿರುವ ಮಹಾಸಭಾ ಆಸ್ತಿಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವುದು ಮತ್ತು ಮಹಾಸಭೆಗೆ ಖಾಯಂ ಆದಾಯ ಬರುವಂತೆ ಮಾಡುವುದು.
- ಅಪರಕರ್ಮಗಳಿಗೆ ಸರ್ಕಾರದಿಂದ ಸ್ಥಳಾವಕಾಶ ಮಾಡಿಕೊಡಲು ಪ್ರಯತ್ನಿಸುವುದು.
- ವಿವಿಧ ಹಂತಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸುವುದು.
- ರಾಜ್ಯಾದ್ಯಂತ ಬ್ರಾಹ್ಮಣರ ಸಮಗ್ರ ಮಾಹಿತಿಕೋಶ ಸಂಗ್ರಹಿಸುವುದು ಇ-ಸೇವೆಯ ಕೌಂಟರ್ಗಳನ್ನು ಪ್ರತಿ ಜಿಲ್ಲೆಯಲ್ಲಿ ಪ್ರಾರಂಭಿಸುವುದು.
- ಸರ್ಕಾರಿ ಯೋಜನೆಗಳನ್ನು ಸಮುದಾಯದವರಿಗೆ ತಲುಪಿಸುವ ವ್ಯವಸ್ಥೆ ಮಾಡುವುದು
- ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು.
ರಘುನಾಥ್ ಅವರು ಬಿಕಾಂ ಪದವೀಧರರಾಗಿದ್ದಾರೆ. ಶೈಕ್ಷಣಿಕ ಮಾತ್ರವಲ್ಲದೆ ಸಮುದಾಯದ ಚಳುವಳಿಗಳನ್ನು ಸಹ ಇವರು ಅಮೂಲಗ್ರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಅದರ ಜೊತೆಗೆ ರಾಜಕೀಯ ಚಟುವಟಿಕೆಗಳಲ್ಲಿ ಸಹ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಇನ್ನು ರಘುನಾಥ್ ಅವರು ಪ್ರತಿ ವರ್ಷ ಬೃಹತ್ ಉದ್ಯೋಗ ಮೇಳ, ಸಾಮೂಹಿಕ ಉಪನಯನ, ಶಂಕರ್ ಜಯಂತಿ, ರಾಮಾನುಜಾ ಜಯಂತಿ, ಮಧ್ವ ಜಯಂತಿಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ, ಅಲ್ಲದೇ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ ವೇತನ ಹೂಡಿಕೆ ಕಾಪರ್ಸ್ ಸಂಗ್ರಹಿಸುವುದು, ಅಂಗವಿಕಲ ವೇತನವನ್ನು ನೀಡಲಾಗುತ್ತಿದೆ. ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಹ ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತದೆ. ಇದರ ಜೊತೆಗೆ ಬಹಳ ಮುಖ್ಯವಾಗಿ ಸಮಾಜದ ಸದಸ್ಯತ್ವ ಅಭಿಯಾನ ಸಮಿತಿಯ ಮುಖಾಂತರ ವರ್ಷಕ್ಕೆ 25,000 ಸದಸ್ಯರನ್ನು ಮಾಡಿಕೊಳ್ಳುವುದು ಮತ್ತು ಎಲ್ಲಾ ಸದಸ್ಯರಿಗೆ ಡಿಜಿಟಲ್ ಐಡಿ ಕಾರ್ಡ್ ನೀಡಲಾಗುತ್ತಿದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಪ್ರಮುಖ ಕಾರ್ಯಕ್ರಮಗಳ ರೂಪರೇಷೆ
- ಪದ್ಮನಾಭನಗರದಲ್ಲಿರುವ ನಿವೇಶದ ಅಭಿವೃದ್ಧಿ ಕಾರ್ಯಕ್ರಮವನ್ನು ಪ್ರಾರಂಭಿಸುವುದು.
- ಮಹಿಳಾ ವಸತಿ ನಿಲಯವನ್ನು ವಿಸ್ತರಿಸಲಾಗುವುದು.
- ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಗಳನ್ನು ಏರ್ಪಡಿಸುವುದು.
- ವಧು ವರಾನ್ವೇಷಣೆ ಗಣಕೃತ ಮಾಡಲು ಆದ್ಯತೆ ನೀಡಲಾಗುವುದು.
- ಕರ್ನಾಟಕ ರಾಜ್ಯ ಗ್ರಾಮದ ಕುರಿತು ಕೃತಿಗಳನ್ನು ಹೊರ ತರುವುದು. ಅಧ್ಯಯನ ಕೇಂದ್ರ ಮತ್ತು ಗ್ರಂಥಾಲಯ ಪ್ರಾರಂಭಿಸಲಾಗುತ್ತದೆ.
- ಆರ್ಥಿಕವಾಗಿ ಹಿಂದುಳಿದ ಮಹಾಸಭಾ ಸದಸ್ಯರಿಗೆ ಆರೋಗ್ಯ ನಿಧಿ ನೀಡಲು ಹೂಡಿಕೆ ಕಾಪರ್ಸ್ ಹಣ ಸಂಗ್ರಹಿಸುವುದು . ರಾಜದಾದ್ಯಂತ ಆಸ್ಪತ್ರೆಗಳೊಡನೆ ಒಡಂಬಡಿಕೆ ಮಾಡಿಕೊಳ್ಳುವುದು ಆರೋಗ್ಯವೇ ಕೊಡಿಸಲು ಯೋಜನೆ ರೂಪಿಸಲಾಗುತ್ತದೆ.
- ವೇದ, ಪಾಠಶಾಲಾ ಪ್ರಾರಂಭಿಸಲಾಗುವುದು.
- ಪ್ರತಿ ತಿಂಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಸಾಧಕರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಿಕಾಂತ್ ಸೇರಿದಂತೆ ಚುನಾವಣಾ ಅಭ್ಯರ್ಥಿ ರಘುನಾಥ್ ಅವರ ಬೆಂಬಲಿಗರು ಅನೇಕರು ಇದೆ ವೇಳೆ ಉಪಸ್ಥಿತರಿದ್ದರು.