ಹುಬ್ಬಳ್ಳಿ: ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪಿ ಬಿಹಾರದ ರಿತೇಶ್ ಕುಮಾರ್ಯನ್ನು ಎನಕೌಂಟರ ಮಾಡಿದ ಹೆಗ್ಗಳಿಕೆ ಲೇಡಿ ಸಿಗಂ ಪಿಎಸ್ ಐ ಅನ್ನಪೂರ್ಣ ರಂಗಪ್ಪ ಮೂಕ್ಕಣ್ಣವರ ಸಲ್ಲುತ್ತದೆ.
ಅನ್ನಪೂರ್ಣ ಅವರು ಉಪ್ಪಾರ ಸಮಾಜದ ಹೆಣ್ಣುಮಗಳು…ಗೋಕಾಕ ತಾಲೂಕಿನ ಗುಜನಟ್ಟಿ ಗ್ರಾಮದವರು…ಕಡು ಬಡತನದಲ್ಲಿ ಓದಿ ಪಿಎಸ್ ಐ ಆಗಿ ಆಯ್ಕೆಯಾಗಿದ್ದಾರೆ…ಇವರ ಸಾದನೈಗೆ ಸಮಾಜದ ಮೆಚ್ಚುಗೆ ಇರಲಿ.
ಆರೋಪಿಯನ್ನು ಬಂಧಿಸಲು ಹೋದಾಗಆರೋಪಿ ಎನ್ಕೌಂಟರ್ : ಬಾಲಕಿ ಕೊಲೆ ಪ್ರಕರಣದಲ್ಲಿ ಎಸ್ಕೇಪ್ ಆಗಿದ್ದ ಆರೋಪಿ ಹಿಡಿಯಲು ಹೋದಾಗ ಪೊಲೀಸರ ಮೇಲೆನೇ ಹಲ್ಲೆ ಮಾಡಿದ್ದಾನೆ. ಇದರಿಂದ ಪ್ರಾಣ ರಕ್ಷಣೆಗಾಗಿ ಪೂರ್ಣಿಮಾ ಹಂತಕನಿಗೆ ಗುಂಡು ಹೊಡೆಯಬೇಕಾಗಿ ಬಂತು.. ಈ ವೇಳೆ ಆರೋಪಿ ಎದೆಗೆ ಗುಂಡು ತಾಗಿದ ಪರಿಣಾಮ ಸಾವನ್ನಪ್ಪಿದ್ದಾನೆ.. ಘಟನೆಯಲ್ಲಿ ಓರ್ವ ಪಿಎಸ್ಐ, ಇಬ್ಬರೂ ಸಿಬ್ಬಂದಿಗಳಿಗೆ ಗಾಯವಾಗಿದೆ.. ಹಲ್ಲೆಗೊಳಗಾದ ಪೊಲೀಸರನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ..
ಪಿಎಸ್ಐ ಗೆ ಅಭಿನಂದನೆ, ಪ್ರಶಸ್ತಿ ನೀಡಬೇಕು:
ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ನಂತ್ರ ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗೆ ಎನ್ಕೌಂಟರ್ ಮಾಡಿದ ಪಿಎಸ್ಐ ಅನ್ನಪೂರ್ಣ ಅವರ ಧೈರ್ಯ ಮೆಚ್ಚಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದರು.
ಪಿಎಸ್ಐ ಅನ್ನಪೂರ್ಣ ಅವರ ಕೆಲಸವನ್ನು ಮೆಚ್ಚಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಯಾರಿಗೂ ನೀಡಿಲ್ಲ ಸರ್ಕಾರ ಪ್ರಶಸ್ತಿ ಘೋಷಣೆ ಮಾಡಿದ್ದೆ ಆದಲ್ಲಿ ಮೊದಲು ಹಂತ್ಕನ ಬೇಟೆಯಾಡಿದ ಪಿಎಸ್ಐ ಅನ್ನಪೂರ್ಣ ನೆಡಬೇಕು ಎಂದು ಒತ್ತಾಯ ಮಾಡಿದರು.
ಪಿಎಸ್ಐ ಅನ್ನಪೂರ್ಣ ಅವರ ಕಾರ್ಯ ವೈಖರಿಯನ್ನು ಗುರುತಿಸಿದ ಉಪ್ಪಾರ ಸಮಾಜದವರು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನದಾನೆ ಸಲ್ಲಿಸಿದರು.