ಬೆಂಗಳೂರು/ ಮದುಗಿರಿ: ಸರ್ಕಾರಿ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಕ್ರಯ ಮಾಡಿಕೊಂಡು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಮೂಲ ಜಮೀನ್ದಾರರಿಗೆ ಪಂಗನಾಮ ಹಾಕಿರುವ ಘಟನೆ ಬೆಳಿಕಿಗೆ ಬಂದಿದೆ ಎಂದು ಭೂಮಿಯನ್ನು ಕಳೆದುಕೊಂಡ ರೈತ ನಟರಾಜ್ ತಮ್ಮ ಅಳಲನ್ನು ತೋಡಿಕೊಂಡರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಂದಾಯ ಅಧಿಕಾರಿ ಹಾಗೂ ತಹಸಿದ್ಧರು ಅಧಿಕಾರಿಗಳ ನೆರವಿನೊಂದಿಗೆ ಗೋಮಾಳ ಮತ್ತು ಬಗರು ಹುಕ್ಕು ಭೂಮಿಗೆ ನಕಲಿ ದಾಖಲೆ ಸೃಷ್ಟಿ ಮಾಡಿ ಭೂಗಳ್ಳರು 113 ಎಕರೆ ಭೂಮಿಯನ್ನು ಕಬಳಿಸಿದ್ದಾರೆ ಎಂದರು.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಕೋಡಿ ಗೇನಹಳ್ಳಿ ಹೋಬಳಿಯ ದೊಡ್ಡ ಮಾಲೂರು ಗ್ರಾಮದ ಸರ್ವೆ ನಂಬರ್ 64ರಲ್ಲಿ 113 ಎಕರೆ ಸರ್ಕಾರಿ ಭೂಮಿ ಇದೆ, ಅದರಲ್ಲಿ 49 ಎಕರೆ ಭೂಮಿಯನ್ನು ಕಳೆದ 50 ವರ್ಷಗಳ ಹಿಂದೆ ಶಾರದಮ್ಮ ಕೊಂ ಲಕ್ಷ್ಮೀನಾರಾಯಣ, ಜಿ ಎನ್ ಚಂದ್ರಶೇಖರ್ ಬಿನ್ ಲೇಟ್ ಕುರಿ ನಂಜುಂಡಪ್ಪ ಜೆಎನ್ ನಟರಾಜು ಬಿನ್ ನಂಜುಂಡಪ್ಪ ಸೇರಿದಂತೆ 15 ಮಂದಿ ಬಗರ್ ಹುಕುಂ ಸಾಗುವಳಿ ಮಾಡಿಕೊಂಡಿರುತ್ತಾರೆ.
ಮುಟ್ಟು ಭೂಮಿಯಲ್ಲಿ ಸುಮಾರು 57.04 ಎಕರೆ ಭೂಮಿ ಗೋಮಳವಾಗಿದ್ದು ಉಳಿದ ಭೂಮಿ ಬಿ ಕರಾಬು ಸೇರಿದಂತೆ ಮತ್ತಿತರ ವರ್ಗದಾಗಿದೆ, ಇದಕ್ಕೆ ಸಂಬಂಧಿಸಿದಂತೆ 1993 -94ರ ಸರ್ಕಾರಿ ದಾಖಲೆಗಳು ಸಹ ಇವೆ. ಆದರೆ ಇತ್ತೀಚಿಗೆ ಡಿವಿ ಮಂಜುನಾಥ ಬಿನ್ ಡಿ ವೀರಭದ್ರಪ್ಪ ಮತ್ತು ಜಿ ಎನ್ ಹರೀಶ್ ಕುಮಾರ್ ಬಿನ್ ನಂಜುಂಡಯ್ಯ ಎಂಬುವರು ಸರ್ವೆ ಸಂಖ್ಯೆ 64ರ 12ನೇ ಬ್ಲಾಕ್ ನ ಖುಷ್ಕಿ ವಿಸ್ತೀರ್ಣ, 4 ಎಕರೆ ಭೂಮಿಗೆ ಮಂಗಮ್ಮ ಲೇಟ್ ನಂಜುಂಡಪ್ಪ, ಭಾಗ್ಯಮ್ಮ ಕೋಂ ಲೇಟ್ ಸಿದ್ದಪ್ಪ ಬಿನ್ ಲೇಟು ನಂಜುಂಡಪ್ಪ, ಎಂಬುವವರ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಇವೆಲ್ಲವೂ ಸಹ ಹಳೆಯ ಖಾತೆ ನಂಬರ್ ಇಲ್ಲದೆ ಹೊಸ ಖಾತೆ ಸೃಷ್ಟಿ ಮಾಡಿದ್ದಾರೆ.
ಹಲವು ವರ್ಷಗಳಿಂದ ನಾಲ್ವರು ರೈತರು ನಿಗದಿತ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ ಎಂದು ಎಂಬುದಕ್ಕೆ ಮೂಲ ದಾಖಲೆಗಳು ಅವರಲ್ಲಿ ಇವೆ. ನಕಲಿ ದಾಖಲೆ ಸೃಷ್ಟಿಸಿದ ನಂತರ ಆ ಭೂಮಿಯನ್ನು ತಾವು ಕಾಯ ಮಾಡಿಕೊಂಡು ಅದಕ್ಕೆ ಕ್ರಯ ಪತ್ರವನ್ನು ಸಹ ಮಾಡಿಸಿದ್ದಾರೆ. ಅಕ್ರಮವಾಗಿ ಮಾಡಿರುವ ಕ್ರಯಕ್ಕೆ ಹಾಗೂ ಟ್ರೈ ಮಾಡುವುದಕ್ಕೂ ಮುನ್ನ ಮಧುಗಿರಿ ತಾಲೂಕು ಪಂಚಾಯಿತಿಯ ಸಂಬಂಧಪಟ್ಟ ಅಧಿಕಾರಿ ಅಥವಾ ಸ್ಥಳವನ್ನು ಪರಿಶೀಲನೆ ಮಾಡಬೇಕಿತ್ತು, ಆದರೆ ಗೆಲ್ಲವೂ ಸಹ ಮಾಡದೆ ನಕಲಿಯಾಗಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಕ್ರಯ ಮಾಡಿಕೊಡುವುದಕ್ಕೂ ಮುನ್ನ ಜಿಲ್ಲಾಧಿಕಾರಿಗಳಿಂದ ಅನುಮತಿಯನ್ನು ಪಡೆದಿಲ್ಲ, ಹೀಗಾಗಿ ಅಧಿಕಾರಿಗಳು ಸಂಪೂರ್ಣವಾಗಿ ನಿಯಮಗಳನ್ನು ಗಾಳಿಗೆ ತೋರಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದರು.
ಭೂಮಿಗೆ ಸಂಬಂಧಿಸಿದಂತೆ ನಿಗದಿತ ಸರ್ವ ಸಂಖ್ಯೆಯ ದಾಖಲೆಗಳನ್ನು ನೀಡುವಂತೆ ಕಚೇರಿಗೆ ಭೂಮಾಲೀಕರು ಕೋರಿದರು ಸಹ ದಾಖಲೆ ನೀಡದೆ ಇಲ್ಲಿ ಸಲದ ಹೇಳುತ್ತಿದ್ದಾರೆ ಎಂದರು. ನಕಲಿ ಖಾತೆಗಳನ್ನು ಸೃಷ್ಟಿ ಮಾಡಿರುವುದು ಕೇವಲ ಎರಡು-ಮೂರು ತಿಂಗಳಲ್ಲಿ, ಇದರಲ್ಲಿ ಅಧಿಕಾರಿಗಳು ಅಕ್ರಮದಲ್ಲಿ ಶಾಮಿಲ್ ಆಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ನೇರವಾಗಿ ಭೂಮಿ ಕಳೆದುಕೊಂಡವರು ಆರೋಪಿಸಿದ್ದಾರೆ.
ಈ ಸಂಬಂಧ ಸಹಕಾರ ಸಚಿವರಾದ ರಾಜಣ್ಣ ಅವರ ಗಮನಕ್ಕೆ ಬಂದಿದ್ದರು ಸಹ ಅದನ್ನು ಸರಿಪಡಿಸಲು ಸಭೆ ಕರೆದು ಇದನ್ನು ರಿಯಲ್ ಎಸ್ಟೇಟ್ ವ್ಯವಹಾರವಾಗಿದ್ದು ಹಣ ಹಂಚಿಕೊಳ್ಳುವ ಸಂಬಂಧ ಇಬ್ಬರಲ್ಲಿಯೂ ಕಿತ್ತಾಟವಾಗಿದೆ ಎಂದು ಸಬೂಬು ಹೇಳಿ ಕಳುಹಿಸಿರುವುದು ಗೊತ್ತಾಗಿದೆ.
ಸರ್ಕಾರಿ ಭೂಮಿಗೆ ನಕಲಿ ಖಾತೆ ಸೃಷ್ಟಿಸಿರುವ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ವಯಸ್ ನಂಬರ್ ಬಂದ ಕೂಡಲೇ ನ್ಯಾಯದ ವತಿಯಿಂದ ಅಕ್ರಮದ ಬಗ್ಗೆ ಸ್ಟೇ ತೆಗೆದುಕೊಂಡು ಬರಲಾಗುತ್ತದೆ ಎಂದರು.
ಕಳೆದ ಐದು 50 ವರ್ಷಗಳಿಂದ ಸರ್ಕಾರದಿಂದ ಭೂಮಿಯನ್ನು ರೈತರು ಅನುಭವಿಸಿಕೊಂಡು ಬಂದಿದ್ದಾರೆ ಇತ್ತೀಚಿಗೆ ಕಿಲ ಭೂಗಳ್ಳರು ಇದನ್ನೇ ಬಂಡವಾಳ ಮಾಡಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಭೂಮಿಕ ಖಬಳಸುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಮಧ್ಯಪ್ರವೇಶ ಮಾಡಿ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ನ್ಯಾಯ ಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಭೂಮಿ ಕಳೆದುಕೊಂಡ ರೈತರು ಉಪಸ್ಥಿತರಿದ್ದರು.