ಬೆಂಗಳೂರು : ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ, ಬೆಂಗಳೂರು ವತಿಯಿಂದ ದಿನಾಂಕ 19.05.2025ನೇ ಸೋಮವಾರ, ಬೆಂಗಳೂರಿನಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ವಿಶ್ವಕರ್ಮ ಬೃಹತ್ ಸಮಾವೇಶ ಹಾಗು ಸಂಘದ 5ನೇ ವರ್ಷದ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ಜನ ಸೇವಾ ಸಂಘದ ರಾಜ್ಯ ಅಧ್ಯಕ್ಷ ಸೋಮಶೇಖರ್ ಅವರು ತಿಳಿಸಿದರು.
ಬೆಂಗಳೂರಿನ ಪ್ಲಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು, ರಾಜ್ಯದಲ್ಲಿ ವಿಶ್ವಕರ್ಮ ಸಮುದಾಯವನ್ನು ಒಂದುಗೂಡಿಸುವ ಹಾಗೂ ಅವರ ಕೆಲಸ ಕಾರ್ಯಗಳನ್ನು ಗುರುತಿಸುವ ಸಲುವಾಗಿ ವಿಶ್ವಕರ್ಮ ಪಂಚವೃತ್ತಿ ಸಾಧಕರಿಗೆ ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿ. ಯು. ಸಿ. ಯಲ್ಲಿ ಶೇ 85 ರಷ್ಟು ಅಂಕವನ್ನು ಪಡೆದು ಉತ್ತೀರ್ಣವಾಗಿರುವ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ ಎಂದರು.
ಪಂಚ ತಿಲ್ಪಗಳಾದ ಕಾಷ್ಟ್ರ ಶಿಲ್ಪ (ಮರ) ಲೋಹ ಶಿಲ್ಪ (ಕಬ್ಬಿಣ) ಶಿಲಾ ಶಿಲ್ಪ (ಕಲ್ಲಿನ ಕೆತ್ತನೆ) ಎರಕ ಶಿಲ್ಪ (ಕಂಚು) ಸ್ವರ್ಣಶಿಲ್ಪ (ಚಿನ್ನ-ಬೆಳ್ಳಿ) ಪಂಚವೃತಿಗಳಲ್ಲಿ ಅಮೋಘ ಸಾಧನೆಗೈದಿರುವ ವಿಶ್ವಕರ್ಮ 5 ಪುರುಷ ಸಾಧಕರಿಗೆ ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್ ವಿಶ್ವಕರ್ಮ ಕಲಾಸಿಂಧು, ವಿಶ್ವಕರ್ಮ ಶಿಲ್ಪಶ್ರೀ ವಿಶ್ವಕರ್ಮ ಕಲಾ ಕೌಸ್ತುಭ ವಿಶ್ವಕರ್ಮ ಕಲಾ ಸೌರಭ ಪ್ರಶಸ್ತಿ ಪುರಸ್ಕಾರ ನೀಡಲಾಗುವುದು.
ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಕಾನೂನು, ಪ್ರತಿಭೆ, ಕ್ರೀಡೆ, ರಂಗಭೂಮಿ, ಚಲನಚಿತ್ರ ಇತರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿಶ್ವಕರ್ಮ 5 ಮಹಿಳಾ ಸಾಧಕರಿಗೆ ವಿಶ್ವಕರ್ಮ ಕಲಾ ಸಿಂಧು ವಿಶ್ವಕರ್ಮ ಸಾಹಿತ್ಯ ಸೌರಭ ವಿಶ್ವಕರ್ಮ ಕಲಾ ಸೌರಭ ವಿಶ್ವಕರ್ಮ ಕಲಾಕೌಸ್ತುಭ ವಿಶ್ವಕರ್ಮ ಕಲಾಶ್ರೀ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲು ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘವು ನಿರ್ಧರಿಸಿದ್ದು, ಈ ಪ್ರತಿ ಪುರಸ್ಕಾರವು 5 ಪುರುಷ ಸಾಧಕರಿಗೆ ಮತ್ತು 5 ಮಹಿಳಾ ಸಾಧಕರಿಗೆ ನಗದು ಸ್ಮರಣಿಕೆ (ಫಲಕ-ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.
ಈ ಸಮಾವೇಶದ ಸರ್ವಾಧ್ಯಕ್ಷರಾಗಿ ಡಾ. ವಸಂತ ಮುರುಳಿ ಆಚಾರ್ ರವರನ್ನು ಆಯ್ಕೆ ಮಾಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಸಂಘದ ಮಹಿಳಾ ರಾಜ್ಯಾಧ್ಯಕ್ಷರಾದ ಡಾ. ವಸಂತ ಮುರಳಿ ಜನ ಸೇವಾ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕುಲಬಾಂಧವರು ಇದೇ ವೇಳೆ ಉಪಸ್ಥಿರಿದ್ದರು.