ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕನಿಷ್ಠ ಸೌಲಭ್ಯಗಳು ಇಲ್ಲದೆ ಅತ್ಯಂತ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸುತ್ತಾ ಅತಿಥಿ ಶಿಕ್ಷಕರು ಮಾಡಿಕೊಂಡು ಬರುತ್ತಿದ್ದರು ರಾಜ್ಯ ಸರ್ಕಾರ ಅವರನ್ನು ಪರಿಗಣಿಸದೆ
ಬಂದಿದ್ದೇವೆ ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಕುರಿತು.
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ(ರಿ) ಕರ್ನಾಟಕ ಇವರ ಅರಿಕೆ ಕರ್ನಾಟಕ ರಾಜ್ಯದಲ್ಲಿ ಸತತವಾಗಿ 12-13 ವರ್ಷಗಳಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕನಿಷ್ಠ ಸೌಲಭ್ಯಗಳು ಇಲ್ಲದೆ ಅತ್ಯಂತ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದೇವೆ. ಅತಿಥಿ ಶಿಕ್ಷಕರ ಬೇಡಿಕೆಗಳ ಕುರಿತು ಈಗಾಗಲೇ ಸಾಕಷ್ಟು ಹೋರಾಟ ಹಾಗೂ ಮನವಿಗಳನ್ನ ಸಲ್ಲಿಸಿ ಸರ್ಕಾರದ ಗಮನವನ್ನು ಸೆಳೆಯುವ ಕಾರ್ಯವನ್ನು ಮಾಡಿದ್ದೇವೆ, ಆದರೆ ಇಲ್ಲಿಯವರೆಗೆ ಅತಿಥಿ ಶಿಕ್ಷಕರ ಯಾವ ಬೇಡಿಕೆಗಳಿಗೂ ಮನ್ನಣೆ ಸಿಗದೇ ಇರುವುದು ನೋವಿನ ಸಂಗತಿಯಾಗಿದೆ. ಆದಕಾರಣ ಪ್ರಸ್ತುತ ಶೈಕ್ಷಣಿಕ ವರ್ಷದ ಆರಂಭದಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಅತಿಥಿ ಶಿಕ್ಷಕರ ಪ್ರಮುಖ ಬೇಡಿಕೆಗಳನ್ನ ಈಡೇರಿಸಬೇಕು ಎಂದು ಈ ಮೂಲಕ ಕೋರಿಕೊಳ್ಳುತ್ತೇವೆ.
ಅತಿಥಿ ಶಿಕ್ಷಕರ ಪ್ರಮುಖ ಬೇಡಿಕೆಗಳಿಗೆ ಮನ್ನಣೆ ಸಿಗದೇ ಇದ್ದ ವೇಳೆಯಲ್ಲಿ ಸಂಘದ ಮೂಲಕ ಎಲ್ಲ ಅತಿಥಿ ಶಿಕ್ಷಕರು ಬೇಡಿಕೆ ಈಡೇರುವವರೆಗೂ ಜೂನ್ 13-14 ರಂದು ಶಾಲೆಯನ್ನು ತೊರೆದು ಪ್ರತಿಭಟನೆ ಗೆ ಸಿದ್ದರಾಗುತ್ತೇವೆ ಎಂದು ಈ ಮೂಲಕ ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.
ಅತಿಥಿ ಶಿಕ್ಷಕರ ಪ್ರಮುಖ ಬೇಡಿಕೆಗಳು:
1.ಪ್ರತಿ ವರ್ಷದ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ 2013-14ನೇ ಸಾಲಿನಲ್ಲಿ ಇದ್ದ ಆದೇಶವನ್ನು (ಆದೇಶ ಸುತ್ತೋಲೆ ಸಂಖ್ಯೆ ಸಿ3(1)ಪ್ರಾಶಿ ನೆ 15/2011-12 ದಿನಾಂಕ 30-05-2013 ಕ್ರಮ 10, ಮತ್ತು ಸರಕಾರದ ಆದೇಶ ಸಂಖ್ಯೆ ಇ ಡಿ 194ಎಸ್.ಟಿ.ಬಿ (ಬಾ ) 22-11-2014ಕ್ರಮ ಸಂಖ್ಯೆ 10) ಮರು ಅದೇಶಿಸಬೇಕು. ಈ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದವರನ್ನು ಹಾಗೂ ಸೇವಾಹಿರಿತನ್ನು ಪರಿಗಣಿಸಿ ಮೊದಲು ಸೇವೆ ಮಾಡಿದವರಿಗೆ ಮೊದಲ ಆದ್ಯತೆ ನೀಡಬೇಕು.
2. ಅತಿಥಿ ಶಿಕ್ಷಕರಿಗೆ ಸೇವಾ ಪ್ರಮಾಣ ಪತ್ರ ಹಾಗೂ ಸೇವಾ ಭದ್ರತೆಯನ್ನು ನೀಡಬೇಕು.
3. ಅತಿಥಿ ಶಿಕ್ಷಕರಿಗೆ ಪ್ರಸ್ತುತ ನೀಡಲಾಗುವ 12,000-00 ರೂ ಗೌರವ ಧನ ಮತ್ತೊಮ್ಮೆ ಪರಿಷ್ಕರಿಸಿ ಕನಿಷ್ಠ 25,000-00 ರೂ ವೇತನ ನೀಡಬೇಕು.
4.ಅತಿಥಿ ಶಿಕ್ಷಕರ ಸೇವೆಯನ್ನು ಪರಿಗಣಿಸಿ ವಾರ್ಷಿಕ 5% ಕೃಪಾಂಕ ನೀಡಬೇಕು.
5. ಅತಿಥಿ ಶಿಕ್ಷಕರ ಕಾಯಂಮಾತಿಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು.,