ಬೆಂಗಳೂರು : ಕರ್ನಾಟಕ ರಾಜ್ಯ ಪಡಿತರ ಆಹಾರ ಸಾಮಗ್ರಿಗಳ ಚಿಲ್ಲರೆ ಹಾಗೂ ಸಗಟು ಮಳಿಗೆಗಳಿಗೆ ಸರ್ಕಾರದ ಗುತ್ತಿಗೆದಾರರ ಮೂಲಕ ಸಾಗಾಣಿ ಮಾಡಿರುವ ಬಾಡಿಗೆ ನೀಡದೆ ಸರ್ಕಾರ ಸತಾಯಿಸಿದೆ ಎಂದು ಲಾರಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಜಿ ಆರ್ ಷಣ್ಮುಗಪ್ಪ ಆಕ್ರೋಶ ವ್ಯಕ್ತಪಡಿಸಲು.
ಈ ಸಂಬಂಧ ಖಾಸಗಿ ಹೋಟೆಲ್ ನಲ್ಲಿ ಪತ್ರಿಯಾಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಪಡಿತರ ಆಹಾರ ಧಾನ್ಯಗಳ ಸಗಟು ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘ, ಕರ್ನಾಟಕ ರಾಜ್ಯದ ಲಾರಿ ಮಾಲೀಕರು ರಾಜ್ಯದ ಪಡಿತರ ಆಹಾರ ಧಾನ್ಯಗಳ ಸಗಟು ಹಾಗೂ ಚಿಲ್ಲರೆ ಗೋದಾಮುಗಳಿಗೆ ಸರ್ಕಾರದ ಕಾಂಟ್ರಾಕ್ಟ್ ಮೇರೆಗೆ ಸಾಗಾಣಿಕೆ ಮಾಡಿ 3 (ಮೂರು) ತಿಂಗಳು ಕಳೆದರೂ ಸಾಗಾಣಿಕೆ ಮಾಡಿದಂತ ವಾಹನಗಳ ಬಾಡಿಗೆ ನೀಡಿರುವುದಿಲ್ಲ.
ಈಗಾಗಲೇ ಸರ್ಕಾರಕ್ಕೆ ಸಾಕಷ್ಟು ಭಾರಿ ಇದರ ಸಂಬಂದ ಮನವಿ ಮಾಡಿದ್ದರೂ ಸಹ ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ , ಆದ್ದರಿಂದ ಕೂಡಲೇ ವಾಹನ ಮಾಲೀಕರಿಗೆ ಕೊಡಬೇಕಾಗಿರುವ ಬಾಕಿ ಮೊತ್ತವನ್ನು ಮಂಜೂರು ಮಾಡಬೇಕೆಂದು ಆಗ್ರಹ ಮಾಡಿದರು. ಆಗೊಂದು ವೇಳೆ ಸರ್ಕಾರ ಇದಕ್ಕೆ ಸ್ಪಂಧಿಸದಿದ್ದರೆ ಅನಿರ್ಧಿಷ್ಟ ಕಾಲ ಮುಷ್ಕರ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಇದೇ ವೇಳೆ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಕರ್ನಾಟಕ ರಾಜ್ಯ ಪಡಿತರ ಆಹಾರ ಧಾನ್ಯಗಳ ಸಗಟು ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು ಎಲ್ಲಾ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಹಾಗೂ ಲಾರಿ ಮಾಲೀಕರು ಇದೇ ವೇಳೆ ಉಪಸ್ತರಿದ್ದರು.