ಬೆಂಗಳೂರು: ನೌಜವಾನ ಸಿರತ್ ಕಮಿಟಿಗೆ 2017 ಸರ್ಕಾರಿ ಯಿಂದ 2020 ರ ಅವಧಿಯಲ್ಲಿ ಸರ್ಕಾರದಿಂದ ಒಟ್ಟು 47 ಲಕ್ಷ ರೂಪಾಯಿ ಹಾಗೂ ವಕ್ಪ್ ಸಂಸ್ಥೆಯ ಆದಾಯವು ಸೇರಿ ಸುಮಾರು 96 ಲಕ್ಷ ರೂಪಾಯಿಗಳ ಲೆಕ್ಕಪತ್ರಕ್ಕೆ ಸಂಬಂಧಿಸಿದ ವೋಚರ್ ರಸೀದಿಯನ್ನು ಅಧ್ಯಕ್ಷರಾದ ಶಮಶೀರ ಸೂಳಿಕೇರಿಯವರು ನೀಡಿರುವುದಿಲ್ಲ ಎಂದು ವಕ್ಪ್ ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಜಾಕ್ ಟಪಾಲ ಅವರು ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿರುವ ನೌಜವಾನ ಸೀರತ್ ಕಮಿಟಿಗೆ ಸಂಬಂಧಿಸಿದಂತೆ ಒಟ್ಟು 96 ಲಕ್ಷ ರೂಪಾಯಿ ಲೆಕ್ಕಪತ್ರ ದಲ್ಲಿ ಅಂದಿನ ಅಧ್ಯಕ್ಷರಾದ ಶಮಶೀರ್ ಸುಳಿಕೆರೆಯವರು ಯಾವುದೇ ಖರ್ಚು ವೆಚ್ಚದ ಬಗ್ಗೆ ದಾಖಲಾತಿಯನ್ನು ನೀಡಿರುವುದಿಲ್ಲ, ಅದರ ಜೊತೆಗೆ ಯಾವ ಯಾವ ಯೋಜನೆಗಳಿಗೆ ಹಾಗೂ ಎಷ್ಟು ರೂಪಾಯಿ ಹಣವನ್ನು ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿದ್ದಾರೆ ಎಂಬುದರ ಬಗ್ಗೆ ಇಲ್ಲಿಯವರೆಗೂ ಸಹ ರಶೀದಿಯಾಗಲಿ ಅದಕ್ಕೆ ಸಂಬಂಧಿಸಿದಂತೆ ವೋಚರ್ ನೀಡುತ್ತಿಲ್ಲ ಹೀಗಾಗಿ ಅಂದಿನ ಅಧ್ಯಕ್ಷರ ಅವ್ಯವಹಾರದ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಈ ಸಂಬಂಧ ತನಿಖೆ ನಡೆಸಬೇಕೆಂದು ಆಗ್ರಹವನ್ನು ಸಹ ಮಾಡಿದರು.
ಶಾದಿ ಮಹಲ್ ಕೆಲಸಕ್ಕೆ ಎಂದು ಚೆನ್ನಬಸಪ್ಪ ಎಂಬವರಿಗೆ 12 ಲಕ್ಷ ಶಫಿವುಲ್ಲಾ ಜಲಗೇರಿ ಎಂಬವರಿಗೆ 4 ಲಕ್ಷ ಕಬೀರ್ ಸಾಬ್ ಅವರಿಗೆ 7 ಲಕ್ಷ ವಾಸಿ ಮಹಮ್ಮದ್ ಎಂಬವರಿಗೆ4.5 ಲಕ್ಷ ಸಂಸ್ಥೆಯ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದಾರೆ, ಆದರೆ ಇವರೆಲ್ಲರಿಗೂ ಹಣ ವರ್ಗಾವಣೆ ಆಗಿರುವುದು ಹೇಗೆ ಹಾಗೂ ಇವರು ಯಾರು ಎಂಬುದು ಕಮಿಟಿಗಾಗಲಿ, ಕಮಿಟಿ ಸದಸ್ಯರಿಗಾಗಲಿ ಇಲ್ಲಿಯವರೆಗೂ ತಿಳಿದು ಬಂದಿಲ್ಲ.
ಶವಸಾಗಿಸುವ ವಾಹನಕ್ಕೆ 4 ಲಕ್ಷ ರೂಪಾಯಿ ಖರ್ಚು ಹಾಕಿದ್ದಾರೆ, ಆದರೆ ಆ ವಾಹನ ಇಲ್ಲವೇ ಇಲ್ಲಾ, ನಿಯಮ ಬಾಹಿರವಾಗಿ ಶಮಶೀರ ಸೂಳಿಕೇರಿಯವರು11 ಲಕ್ಷ ರೂಪಾಯಿಗಳನ್ನು ಸಂಸ್ಥೆ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡದೆ ತಮ್ಮ ಬಳಿ ಇಟ್ಟುಕೊಂಡಿವುದು ಹಲವು ಸಂಶಯಗಳಿಗೆ ಕಾರಣವಾಗುತ್ತದೆ. ಅವ್ಯವಹಾರಗಳೆಲ್ಲವೂ ಸಹ ಜಿಲ್ಲಾ ವಕ್ಪ್ ಲೆಕ್ಕ ಪರಿಶೋಧಕರು ತಮ್ಮ ಆಡಿಟ್ ವರದಿಯಲ್ಲಿ ದಾಖಲು ಮಾಡಿದ್ದಾರೆ ಮತ್ತು ವಕ್ಪ್ ಅಧಿಕಾರಿಗಳಿಗೆ ತನಿಖೆ ಮಾಡುವಂತೆ ಸೂಚನೆ ಸಹ ನೀಡಿದ್ದಾರೆ.
ಅವ್ಯವಹಾರಕ್ಕೆ ಸಂಬಂಧಿಸಿದಂತೆ 2020 ರಿಂದಲೂ ಸಹ ಜಿಲ್ಲಾ ವಕ್ಪ್ ಅಧಿಕಾರಿಗಳು ರಾಜ್ಯ ವಕ್ಪ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ರಾಜ್ಯ ವಕ್ಪ್ ಮಂಡಳಿ ಅಧ್ಯಕ್ಷರು, ರಾಜ್ಯ ಮುಖ್ಯ ಕಾರ್ಯದರ್ಶಿಗಳು ಸಚಿವರು ಮುಖ್ಯಮಂತ್ರಿಗಳಿಗೆ ಈಗಾಗಲೇ ದೂರನ್ನು ಸಹ ನೀಡಿದ್ದೆವು ಆದರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಕಮಿಟಿಯಲ್ಲಿ ಹಾಗಿರುವ ಹವ್ಯವಹಾರದ ಬಗ್ಗೆ ಸಾಕಷ್ಟು ದಾಖಲೆ ಪತ್ರಗಳನ್ನು ಸಹ ಬಿಡುಗಡೆ ಮಾಡಿದರು.
ವಕ್ಪ್ ಇಲಾಖೆಯವರು ಅನುದಾನ ವಾಪಸ್ ಪಡೆದಿದ್ದೇವೆ ಎಂದು ಸಬೂಬು ?
ಸೀರತ್ ಕಮಿಟಿಯಲ್ಲಿ ಆಗಿರುವ 96 ಲಕ್ಷ ರೂಪಾಯಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಒಟ್ಟು ಇಲಾಖೆಯವರು ಈಗಾಗಲೇ ಅನುದಾನವನ್ನು ಹಿಂದಿನ ಅಧ್ಯಕ್ಷರಿಂದ ವಾಪಸ್ ಪಡೆದಿದ್ದೇವೆ ಎಂದು ಹೇಳುತ್ತಿದ್ದಾರೆ ಮಾಜಿ ಅಧ್ಯಕ್ಷರಿಂದ 11 ಲಕ್ಷ ಮಾತ್ರ ಚೆಕ್ ಮೂಲಕ ಪಡೆದಿದ್ದಾರೆ ಆದರೆ ಅತ್ಯಂತ ಜನತೆಯಿಂದ ಕಮಿಟಿ ಖಾತೆಯಿಂದ ಯಾವುದೇ ಅನುಮತಿ ಇಲ್ಲದೆ 9 ಲಕ್ಷ ರೂಪಾಯಿ ಮರುಪಾವತಿ ಮಾಡಿಕೊಂಡಿದ್ದಾರೆ ಆದರೆ ಅಲ್ಪಸಂಖ್ಯಾತ ಇಲಾಖೆಯಿಂದ ಬಂದಂತಹ ಶಾದಿ ಮಹಲ್ಲ 20 ಲಕ್ಷ ರೂ ಅನುದಾನದ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ ಅನುದಾನ ಬಿಡುಗಡೆಯಾಗಿ ಒಂದು ವರ್ಷದಲ್ಲಿ ಕೆಲಸ ಆಗದಿದ್ದರೆ ವಾಪಸ್ ಪಡೆಯಬೇಕು ಎಂದು ಸರ್ಕಾರದ ಆದೇಶವಿದ್ದರೂ ಅದನ್ನು ಪಾಲನೆ ಮಾಡದಿರುವುದು ದುರಂತದ ಸಂಗತಿ ಆಗಿದೆ ಎಂದರು.
ಆಡಳಿತ ಅಧಿಕಾರಿಗಳಿಂದಲೇ ಸಂಸ್ಥೆಯ ಹಣ ದುರ್ಬಳಕೆ?
ಸೀರತ್ ಕಮಿಟಿಯಲ್ಲಿ ಆಗಿರುವ ಅವರಿಗ ಸಂಬಂಧಿಸಿದಂತೆ 2017 ರಿಂದ 2020ರ ಅವಧಿಯಲ್ಲಿ ವ್ಯವಹಾರ ವಾಗಿರುವ ಬಗ್ಗೆ ಸಾಕಷ್ಟು ಚರ್ಚೆಗಳು ಕೋರ್ಟು ಕಚೇರಿ ಹಂತಕ್ಕೆ ತಲುಪಿದೆ ಹಿನ್ನೆಲೆ 2020ರ ನಂತರ ಸಂಸ್ಥೆಯ ವ್ಯವಹಾರವನ್ನು ಆಡಳಿತ ಅಧಿಕಾರಗಳ ಜವಾಬ್ದಾರಿಗೆ ವಹಿಸಲಾಗಿತ್ತು. ಇವರು ಕೂಡ ಸಂಸ್ಥೆಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ, ಇದುವರೆಗೂ ಇದರ ಬಗ್ಗೆ ಯಾವುದೇ ಮಾಹಿತಿ ಕೊಡುತ್ತಿಲ್ಲ ಎಂದು ಅಬ್ದುಲ್ ರಜಾಕ್ ಅವರು ಆರೋಪವನ್ನು ಮಾಡಿದರು. ಸಂಬಂಧಪಟ್ಟ ಇಲಾಖೆಯವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಹಾಗೂ ಈ ಹಿಂದಿನ ಅಧ್ಯಕ್ಷರಾದ ಶಮಶೀರ ಸೂಳಿಕೇರಿ ಅವರ ವಿರುದ್ಧವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪವನ್ನು ಮಾಡಿದರು.
ಆಡಳಿತ ಮಂಡಳಿಯಲ್ಲಿ ಅನರ್ಹ ಸದಸ್ಯರಿದ್ದಾರೆ? ದುರಂತದ ಸಂಗತಿ!
ದುರಂತವೆಂದರೆ ಅಸ್ತಿತ್ವದಲ್ಲಿರುವ ಆಡಳಿತ ಮಂಡಳಿಯಲ್ಲಿ ನಾಲ್ಕು ಜನ ಅನರ್ಹ ಸದಸ್ಯರಿದ್ದಾರೆ, ಇಬ್ಬರು ವಕ್ಪ್ ಸಂಸ್ಥೆಯ ಅಂಗಡಿ ಬಾಡಿಗೆದಾರರಾಗಿದ್ದು ಮತ್ತೆ ಇಬ್ಬರು ವಕ್ಪ್ ಸಂಸ್ಥೆಗೆ ಬಾಕಿದಾರರು ಆಗಿದ್ದಾರೆ, ಹೀಗಾಗಿ ಅಧಿಕಾರಿಗಳೇ ಕಾನೂನು ಉಲ್ಲಂಘನೆ ಮಾಡಿದಂತಾಗಿದೆ ಎಂದರು. ವಕ್ಪ್ ಕಾಯ್ದೆ 1995 ಹಾಗೂ ಗುತ್ತಿಗೆ ಅದಿನಿಯಮ 2014ರ ವಿರುದ್ಧ ಆಗಿದ್ದರು ಸಹಾ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಪ್ರಸ್ತುತ ಸಂಸ್ಥೆಯ ಕಾರ್ಯದರ್ಶಿ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಕೇಳಿದರೆ ನಿಗದಿತ ಅವಧಿ ಮುಗಿದರು ಸಮಯ ಬೇಕು ಎಂದು ಉತ್ತರ ಬರೆಯುತ್ತಿದ್ದಾರೆ ಇದು ನಿಯಮಬಾಹಿರ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಅಧಿಕಾರಿಗಳು ಹಾಗೂ ಕಮಿಟಿಯಲ್ಲಿ ಇಷ್ಟೆಲ್ಲಾ ವ್ಯವಹಾರಗಳು ನಡೆಯುತ್ತಿದ್ದರು ಸಹ ಇದರ ಹಿಂದೆ ಪ್ರಭಾವಿಗಳು ಕೈವಾಡ ಇದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ತಿಳಿಸಿದರು. ಸಂಬಂಧಪಟ್ಟ ಒಕ್ಕೂ ಅಧಿಕಾರಿಗಳು ಹಾಗೂ ಇಲಾಖೆ ಕಮಿಟಿಯಲ್ಲಿ ಆಗಿರುವ ಹವ್ಯಾಸದ ಬಗ್ಗೆ ಸೂಕ್ತ ತನಿಖೆ ನಡೆಸಿ ಸಮಾಜದ ಬಾಂಧವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯವನ್ನು ಸಹ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರಾದ ಲಾಲ್ ಸಾಬ್ ಮುಲ್ಲಾ, ನೌಜವಾನ ಸಿರಪ್ ಕಮಿಟಿ ಸದಸ್ಯರಾದ ಸಾಹೇಬ್ ಲಾಲ್ ಜಾತಗೇರ್ ಉಪಸ್ಥಿತರಿದ್ದರು.