ಬೆಂಗಳೂರು: ರಾಜ್ಯದಲ್ಲಿರುವ ವಕೀಲರ ಸಂಘಗಳ ನಿರ್ವಹಣೆಗಾಗಿ ಮುಖ್ಯ ಮಂತ್ರಿಗಳು ವಕೀಲರ ಸಂಘಗಳಿಗೆ ವಾರ್ಷಿಕ ಅನುದಾನ ಬಿಡುಗಡೆ ಮಾಡ ಬೇಕು ಎಂದು ಕರ್ನಾಟಕ ವಕೀಲರ ಪರಷತ್ ನ ಅಧ್ಯಕ್ಷರಾದ ಮಿಟ್ಟಲ್ ಕೋಡ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 196 ವಕೀಲರ ಸಂಘಗಳಿದ್ದು, ವಕೀಲರ ಸಂಘಗಳ ನಿರ್ವಹಣೆಗಾಗಿ ಜಿಲ್ಲಾ ವಕೀಲರ ಸಂಘಕ್ಕೆ 70,000 (ಎಪ್ಪತ್ತು ಸಾವಿರ) ಹಾಗೂ ತಾಲ್ಲೂಕು ವಕೀಲರ ಸಂಘಗಳ ನಿರ್ವಹಣೆಗಾಗಿ ಪ್ರತಿವರ್ಷ 40,000 (ನಲವತ್ತು ಸಾವಿರ) ರೂ ಗಳಂತೆ ಕರ್ನಾಟಕ ಸರ್ಕಾರ ಅನುದಾನ ಮಂಜೂರು ಮಾಡುತ್ತಾ ಬಂದಿದೆ.
ಆದರೆ 2019-2020 ಸಾಲಿನಲ್ಲಿ ಕೋವಿಡ್ ಮಹಾಮಾರಿ ಬಂದಾಗಿನಿಂದ ಇವತ್ತಿನವರೆಗೂ ಕರ್ನಾಟಕ ಸರ್ಕಾರದಿಂದ ವಕೀಲರ ಪರಿಷತ್ ಗೆ ಯಾವುದೇ ನಿರ್ವಹಣೆ ಹಣ ಬಿಡುಗಡೆ ಮಾಡಿರುವುದಿಲ್ಲ. ಕರ್ನಾಟಕ ರಾಜ್ಯದಲ್ಲಿರುವ ಜಿಲ್ಲಾ ಮತ್ತು ತಾಲ್ಲೂಕು ವಕೀಲರ ಸಂಘಗಳ ನಿರ್ವಹಣೆ ಮಾಡುವುದು ತುಂಬಾ ಕಷ್ಟವಾಗಿರುತ್ತದೆ.
ಆದ್ದರಿಂದ ತಾವುಗಳು ಕೂಡಾ ವಕೀಲರಾಗಿದ್ದರಿಂದ, ವಕೀಲರ ತೊಂದರೆಗಳನ್ನು ಅರ್ಥಮಾಡಿಕೊಂಡು ಶೀಘ್ರದಲ್ಲಿ ವಕೀಲರ ಸಂಘಗಳಿಗೆ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.