ಬೆಂಗಳೂರು : ಜುಲೈ 2022 ರಿಂದ ಜುಲೈ 2024ರ (25 ತಿಂಗಳ) ಅವಧವೆ ನಿವೃತ್ತರಾದ ಅಧಿಕಾರಿಗಳು ನೌಕರರು 7ನೇ ವೇತನ ಆಯೋಗದಲ್ಲಿ ಸರ್ಕಾರ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಭಿನ್ನವಾದ ಆರ್ಥಿಕ ಸೌಲಭ್ಯ ನೀಡಿರುವುದು ಘನ ಘೋರ ಅನ್ಯಾಯವಾಗಿದೆ. ಇದರಿಂದ ಡಿ ದರ್ಜೆ ನೌಕರರಿಗೆ ಕನಿಷ್ಠ 8 ಲಕ್ಷ, ಅಧಿಕಾರಿ ವರ್ಗದವರಿಗೆ ಗರಿಷ್ಠ 22 ಲಕ್ಷದವರೆಗೆ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು ಇದರ ಗೌರವ ಅಧ್ಯಕ್ಷರಾದ ಐವನ್ ಡಿಸೋಜ ಅವರು ತಿಳಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಮಿತಿ ವತಿಯಿಂದ ಧರಣಿ ನಡೆಸಲಾಯಿತು. ಈ ಒಂದು ಪ್ರತಿಭಟನೆಯಲ್ಲಿ ಡಿಸೋಜಾ ಅವರು ಭಾಗವಹಿಸಿ ಮಾತನಾಡಿದರು 2022 ರಿಂದ ಕಾಲ್ಪನಿಕವಾಗಿ ವೇತನ ಪರಿಷ್ಕರಣೆ ಮಾಡಿ ಆದೇಶಿಸಿರುವುದು ಸರ್ಕಾರದ ನಿರ್ಧಾರಕ್ಕೆ ಸಂತೋಷದ ವಿಷಯ ಆದರೆ ನಗದು ರೂಪದಲ್ಲಿ 2024 ರಿಂದ ಅನ್ವಯವಾಗುವಂತೆ ಆದೇಶ ಮಾಡಿರುವುದರಿಂದ ಈ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ನಿವೃತ್ತಿ ಪಿಂಚಣಿ ಹೊಸ ವೇತನದಂತೆ ನಿಗದಿಪಡಿಸಲು ಆದೇಶಿಸಲಾಗಿದೆ. ಆದರೆ ಡಿಸಿ ಆರ್ ಜಿ, ಕಮ್ಯುಟೇಷನ್, ಇಎಲ್ ನಗದೀಕರಣ ಸೌಲಭ್ಯಗಳನ್ನು 6ನೇ ವೇತನದ ಆಯೋಗದ ಅಡಿ ಪಡೆಯುತ್ತಿದ್ದ ಮೂಲವೇತನದ ಮೇಲೆ ಪಾವತಿಸುತ್ತೀರಿ, ಇದರಿಂದ ಸುಮಾರು 26500 ನಿವೃತ್ತ ನೌಕರರು ಆರ್ಥಿಕವಾಗಿ ವಂಚಿತರಾಗುತ್ತಿದ್ದಾರೆ ಎಂದರು.
ನಿವೃತ್ತ ನೌಕರರು ನ್ಯಾಯಯುತವಾಗಿ ಅವರಿಗೆ ಬರಬೇಕಾದಂತಹ ಹಾಗೂ ಕೆಲಸಕ್ಕೆ ಸೇರುವ ವೇಳೆ ಸರ್ಕಾರದ ನಿಯಮದಂತೆ ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ, ಅದಕ್ಕೆ ಪೂರಕವಾಗಿ ನೀವು ಅಂದರೆ ಸರ್ಕಾರ ಮಾಡಬೇಕಾಗಿದೆ, ಅದು ನಿಮ್ಮ ಜವಾಬ್ದಾರಿ ಬೇರೆ ಯಾವುದೋ ನೆಪ ಹೇಳಿಕೊಂಡು ನಮಗೆ ಬರಬೇಕಾಗಿದ್ದ ಸೌಲಭ್ಯಗಳನ್ನು ವಂಚಿಸುತ್ತಿರುವುದು ಸರಿಯಾದ ಕ್ರಮವಲ್ಲ ಇದು ನಿವೃತ್ತ ನೌಕರರಿಗೆ ಮಾಡುತ್ತಿರುವ ಅನ್ಯಾಯ ಹಾಗೂ ದ್ರೋಹವಾಗಿದೆ ಎಂದರು.
ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಜ್ಯ ಮಹಾ ಪ್ರಧಾನ ಸಂಚಾಲಕರಾದ ಡಾ. ಎಂ ಪಿ ಎಂ ಷಣ್ಮುಖಯ್ಯ ಮಾತನಾಡಿ, ಸರ್ಕಾರದಲ್ಲಿ ಇರುವ ಆದೇಶದ ರೀತಿ ನಮಗೆ ನ್ಯಾಯಯುತವಾಗಿ ಬೇಡಿಕೆ ಪೂರೈಸಬೇಕು, ಈ ಸಂಬಂಧ ಫ್ರೀಡಂ ಪಾರ್ಕಿನಲ್ಲಿ ರಾಜ್ಯದಲ್ಲಿರುವ 2000 ಕ್ಕಿಂತ ಅಧಿಕ ನಿವೃತ್ತ ನೌಕರರು ಧರಣಿ ನಡೆಸಬೇಕಾದಂತಹ ಪರಿಸ್ಥಿತಿ ಬಂದು ಒದಗಿದೆ ಸರ್ಕಾರ ಅರ್ಥಮಾಡಿಕೊಳ್ಳಬೇಕು ನಿವೃತ್ತರಾದವರಿಗೆ ಯಾವ ರೀತಿ ನಡೆದುಕೊಳ್ಳಬೇಕೆಂಬ ಬಗ್ಗೆ ಹರಿವಿರಬೇಕು ಎಂದರು.
ಸುಮಾರು 25 ರಿಂದ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತರಾದಂತಹ ನೌಕರರಿಗೆ ಸಂದೆಕಾಲದಲ್ಲಿ ಆರ್ಥಿಕವಾಗಿ ವಂಚಿತರಾಗಿರುವುದರಿಂದ ಬಹಳ ತೊಂದರೆಯಾಗುತ್ತದೆ ಆದ್ದರಿಂದ 2022 ರಿಂದ ನಿವೃತ್ತ ಸೌಲಭ್ಯಗಳಾದ ಡಿಸಿ ಅರ್ಜಿ ಕಮ್ ಇಎನ್ ನಾಗರೀಕರಣ ಸೌಲಭ್ಯಗಳನ್ನು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ 2022 ರಿಂದ ಪೂರ್ವ ಅನ್ವಯವಾಗುವಂತೆ ನಿಗದಿಯಾದ ಮೂಲವೇತನದ ಆಧಾರದಂತೆ ನೀಡುವಂತೆ ಪರಿಷ್ಕೃತ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ಒತ್ತಾಯವನ್ನು ಮಾಡಿದರು.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ರಾಜ್ಯ ಜಿಲ್ಲಾಧ್ಯಕ್ಷರುಗಳು ಪದಾಧಿಕಾರಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ಒತ್ತಾಯವನ್ನು ಮಾಡಿದರು.