ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದ ಪ್ರಸ್ತುತ ಅಧ್ಯಕ್ಷರಾದ ಎಸ್ ರವಿಕುಮಾರ್ ರವರು ನಿಗಮದ ಯೋಜನೆಗಳಡಿ ಮುಖ್ಯವಾಗಿ ಭೂಒಡೆತನ ಯೋಜನೆಯಡಿ ಶೇ.60 ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ಮತ್ತು ವಿಡಿಯೋ ತುಣುಕುಗಳು ಲಭ್ಯವಾಗಿವೆ ಎಂದು ಭಾರತೀಯ ಭೋವಿ ಸಮಾಜ ಸೇವಾ ಸಂಘ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಕೆ ವೆಂಕಟೇಶ್ ಮೌರ್ಯವರು ತಿಳಿಸಿದರು.
ಈ ಸಂಬಂಧ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದವರು,ಕರ್ನಾಟಕದಲ್ಲಿ ಭೋವಿ ಜನಾಂಗದವರು ಸಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಭೋವಿ ಜನಾಂಗದ ಕಲ್ಯಾಣಕ್ಕಾಗಿ ಹಾಗೂ ಭೋವಿ ಜನರ ಸಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವ ಆಶಯದೊಂದಿಗೆ ಕರ್ನಾಟಕದ ಘನ ಸರ್ಕಾರವು ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುತ್ತದೆ.
ಈ ಹಿಂದೆ 2021-22 ಹಾಗೂ 2022-23 ಸಾಲಿನಲ್ಲಿ ನಿಗಮದ ಅಧಿಕಾರಿಗಳಿಂದಲೇ ಬಾರಿ ಭ್ರಷ್ಟಚಾರ ನಡೆದಿದ್ದು, ಅರ್ಹ ಫಲಾನುಭವಿಗಳಿಗೆ ಯಾವುದೇ ಸೌಲಭ್ಯಗಳು ಸಿಗದೇ ಯೋಜನೆಗಳಿಂದ ವಂಚಿತರಾಗಿರುತ್ತಾರೆ. ಭೋವಿ ನಿಗಮದಲ್ಲಿ ಅಧಿಕಾರಿಗಳು ತಮ್ಮ ಮಧ್ಯವರ್ತಿಗಳ ಮೂಲಕ ಸುಮಾರು 85.00ಕೋಟಿಗಳು ಅವ್ಯವಹಾರವಾಗಿರುತ್ತದೆ ಮತ್ತು ಇದರ ಬಗ್ಗೆ ಎಸ್ಐಟಿ ತನಿಖೆ ಪ್ರಗತಿಯಲ್ಲಿರುತ್ತದೆ.
ನಿಗಮದಿಂದ ವಿವಿಧ ಸಾಲ ಸೌಲಭ್ಯಗಳ ಯೋಜನೆ
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಭೋವಿ ಜನಾಂಗದವರಿಗೆ ನೇರಸಾಲ ಯೋಜನೆ, ಉದ್ಯಮಶಿಲತಾ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಮೈಕ್ರೋಕ್ರೆಡಿಟ್ ಯೋಜನೆಗಳು ಹೀಗೆ ಹಲವಾರು ಯೋಜನೆಗಳಿದ್ದು, ಭೂ ಒಡೆತನ ಯೋಜನೆಯು ಸಹ ಪ್ರಮುಖ ಯೋಜನೆಯಾಗಿದೆ. ಭೋವಿ ಅಭಿವೃದ್ಧಿ ನಿಗಮದ ಪ್ರಸ್ತುತ ಅಧ್ಯಕ್ಷರಾದ ಎಸ್ ರವಿಕುಮಾರ್ ರವರು ನಿಗಮದ ಯೋಜನೆಗಳಡಿ ಮುಖ್ಯವಾಗಿ ಭೂಒಡೆತನ ಯೋಜನೆಯಡಿ ಶೇ.60 ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿರುವುದು ಹಾಗೂ ಅದಕ್ಕೆ ಸಂಬಂಧಿಸಿದಂತೆ ದಾಖಲೆ ಪತ್ರಗಳು ಇವೆ ಎಂದು ಅವರು ತಿಳಿದಿದ್ದರು.
ಪ್ರಸ್ತುತ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಭೋವಿ ಸಮುದಾಯದವರೇ ಆದ ರವಿಕುಮಾರ್ ರವರು ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಜನಾಂಗದ ಕಲ್ಯಾಣಕ್ಕೆ ಮಾರಕವಾಗುವ ರೀತಿಯಲ್ಲಿ, ಪಸೆರ್ಂಟೇಜ್ ಮಾತನಾಡಿ ಲಂಚ ಸ್ವೀಕರಿಸುತ್ತಿರುವುದು ಭೋವಿ ಸಮುದಾಯಕ್ಕೆ ನೋವು ಉಂಟಾಗುತ್ತಿದೆ.
ಅಲ್ಲದೇ ಭೋವಿ ಸಮುದಾಯದವರೇ ಆದ ಶ್ರೀ.ಎಸ್.ರವಿಕುಮಾರ್ರವರು ನಿಗಮದ ಅಧ್ಯಕ್ಷರಾಗಿ ಸಮಾಜದ ಅಭಿವೃದ್ಧಿ ಕೆಲಸಗಳಿಗೆ ಮುಂದಾಗದೆ. ಈ ರೀತಿ ಸಮಾಜಕ್ಕೆ ದ್ರೋಹ ಬಗೆಯುವ ಕೆಲಸಕ್ಕೆ ಮುಂದಾಗಿರುವುದು ಅವಮಾನವೀಯ ಹಾಗೂ ವಿಶಾಧನೀಯ ಸಂಗತಿಯಾಗಿದೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ಈ ರೀತಿ ಅಧ್ಯಕ್ಷರು ತಮ್ಮ ಸ್ವಂತ ಅಭಿವೃದ್ಧಿಯನ್ನು ನೋಡಿಕೊಳ್ಳುತ್ತಿದ್ದು, ಅರ್ಹ ಭೋವಿ ಜನಾಂಗದ ಬಡ ಫಲಾನುಭವಿಗಳಿಗೆ ದ್ರೋಹವೆಸಗುತ್ತಿದ್ದಾರೆ.
ನೊಂದ/ವಂಚಿತ ಫಲಾನುಭವಿಗಳು ಯಾರೂ ನೇರವಾಗಿ ಅವರನ್ನು ಪ್ರಶ್ನೆ ಮಾಡದ ರೀತಿಯಲ್ಲಿ ಅವರ ಚೀಲಗಳ ಮೂಲಕ ಹೆದರಿಸಿ ದಬ್ಬಾಳಿಕೆ ಮಾಡಿ ಫಲಾನುಭವಿಗಳನ್ನು ಸುಮ್ಮನಿರುಸುತ್ತಾರೆ ಹಾಗೂ ಫಲಾನುಭವಿಗಳಿಂದ ಲಂಚವನ್ನು ಸ್ವೀಕರಿಸಿದ ನಂತರ ಅಧಿಕಾರಿಗಳಿಗೆ ಹಣ ಬಿಡುಗಡೆ ಮಾಡಲು ಸೂಚಿಸುತ್ತಾರೆ.
ಆದ್ದರಿಂದ ಶ್ರೀ ಎಸ್ ರವಿಕುಮಾರ್ ಇವರನ್ನು ನಿಗಮದ ಅಧ್ಯಕ್ಷರ ಹುದ್ದೆಯಿಂದ ಈ ಕೂಡಲೇ ರಾಜೀನಾಮೆ ಕೊಡಿಸಿ ಬಂಧಿಸಿ, ಅವರ ವಿರುದ್ಧ ಕಾನೂನು ರೀತಿ ಸೂಕ್ತ ತನಿಖೆ ಮಾಡಿ ಶಿಸ್ತು ಕ್ರಮಕೈಗೊಳ್ಳಲು ಹಾಗೂ ನಿಗಮಕ್ಕೆ ಪ್ರಾಮಾಣಿಕತೆ, ಮಾನವೀಯತೆ ಹೊಂದಿದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಕೋರುತ್ತೇವೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟವನ್ನು ಮಾಡುತ್ತೇವೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮವಹಿಸಿ ನಿಗಮದ ಹೊಸ ಅಧ್ಯಕ್ಷರನ್ನು ನೇಮಿಸಬೇಕೆಂದು ಕೋರುತ್ತೇವೆ.
ಮುಖ್ಯಮಂತ್ರಿ ಡಿಸಿಎಂ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮನವಿ
ಭೋವಿ ಅಭಿವೃದ್ಧಿ ಅಧ್ಯಕ್ಷರು ಕೆಲವೊಂದು ಯೋಜನೆಗಳಿಗೆ ಲಂಚದ ರೂಪದಲ್ಲಿ ಬೆಂಗಳೂರಿನ ಕುಮಾರ ಕೃಪ ಗೆಸ್ಟ್ ಹೌಸ್ ನಲ್ಲಿ ಬೇಡಿಕೆ ಇಟ್ಟಿರುವ ವಿಡಿಯೋ ತುಣುಕುಗಳು ಇವೆ ಈ ಸಂಬಂಧ ಸುದರ ರವಿಕುಮಾರ್ ಅವರೇ ವಿಡಿಯೋ ಬಗ್ಗೆ ಒಪ್ಪಿಕೊಂಡಿರುತ್ತಾರೆ ಇದನ್ನು ಮನಗಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ನಿಗಮದ ಅಧ್ಯಕ್ಷರನ್ನು ಅಮಾನತ್ತು ಮಾಡಿ ದಕ್ಷ ಅಧ್ಯಕ್ಷರನ್ನು ನಿಗಮಕ್ಕೆ ನೇಮಕ ಮಾಡಿಕೊಳ್ಳಬೇಕು. ರವಿಕುಮಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಶಿಕ್ಷೆಗೆ ಒಳಪಡಿಸಬೇಕಾಗಿದೆ ಎಂದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಿಗಮದ ಅಧ್ಯಕ್ಷರುಗಳು ಜಾಗರೂಕರ ಆಗಿರಬೇಕು ಯಾವುದೇ ಹಣ ಆಮಿಷಗಳಿಗೆ ಲಂಚ ಗಳಿಗೆ ಒಳಗಾಗಬಾರದು, ಈ ಸಂಬಂಧ ಸ್ಟಿಂಗ್ ಆಪರೇಷನ್ಗಳು ನಡೆಯುತ್ತವೆ ಎಂಬ ಸೂಕ್ಷ್ಮ ಸಂದೇಶವನ್ನು ಸಭೆ ಕರೆದು ನಿಗಮದ ಅಧ್ಯಕ್ಷರುಗಳಿಗೆ ಸೂಚನೆಯನ್ನು ಸಹ ಈಗಾಗಲೇ ನೀಡಿದರು ಇವೆಲ್ಲವೂ ಸಹ ನಿಗಮಗಳ ಅಧ್ಯಕ್ಷರುಗಳ ದುರ್ಬಲ ಆಡಳಿತ ಹೇಗೆ ಇರುತ್ತದೆ ಎಂಬುದು ತೋರಿಸುತ್ತದೆ ಎಂದರು.
ಭೂವಿ ಜನಾಂಗದ ಮಂತ್ರಿಯಾಗಿರುವ ಶಿವರಾಜ್ ತಂಗಡಿಗೆಯವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಲ್ಲಿ ಮನವಿಯನ್ನು ಸಹ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅವರ ಮನೆಯ ಮುಂದೆ ಹಾಗೂ ಅವರ ವಿರುದ್ಧ ಧರಣಿಯನ್ನು ಸಹ ನಡೆಸಬೇಕಾಗುತ್ತದೆ ಎಂದರು. ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸುತ್ತೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರು ಹಾಗೂ ಸಂಘದ ರಾಜ್ಯಾಧ್ಯಕ್ಷರಾದ ಬಿ ಎಂ ಜಗನ್ನಾಥ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಇದೆ ವೇಳೆ ಉಪಸ್ಥಿತರಿದ್ದರು.