ಬೆಂಗಳೂರು: ಗುಣಶೀಲ ಆಸ್ಪತ್ರೆಗೆ ಸ್ರೀ ರೋಗ ಮತ್ತು ಸಂತಾನ ಸಾಪಲ್ಯ ಚಿಕಿತ್ಸೆಯಲ್ಲಿ 50 ವರ್ಷಗಳ ಸಾರ್ಥಕ ಸಂಭ್ರಮದ ಹಿನ್ನೆಲೆ ವಜ್ರ ಮಹೋತ್ಸವ ಆಚರಣೆಯನ್ನು ಮಾಡಿಕೊಂಡಿದೆ ಆಸ್ಪತ್ರೆಯ ಹೊಸ ರೂಪ ಮತ್ತು ಆಕ್ಸಾನ್ ಚೈಲ್ಡ್ ಡೆವಲಪ್ಮೆಂಟ್ ಸೆಂಟರ್ ಪ್ರಾರಂಭ ಮಾಡಲಾಗಿದೆ.
ಈ ಒಂದು ಕೇಂದ್ರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಉದ್ಘಾಟನೆ ಮಾಡಿ ಮಾತನಾಡಿ, ಗುಣಶೀಲ ಆಸ್ಪತ್ರೆಯು ಸಾಕಷ್ಟು ಹೆಗ್ಗಳಿಕೆ ಹಾಗೂ ಹೆಸರು ಮಾಡಿ ಅಂತ ಆಸ್ಪತ್ರೆಯಾಗಿದೆ. ಗುಣಸೇನಾ ಆಸ್ಪತ್ರೆಯು ಸಂತಾನೋತ್ಪತ್ತಿ ಸಂಬಂಧಿಸಿದ ಚಿಕಿತ್ಸೆಗಳು ಹಾಗೂ ಶ್ರೀ ರೋಗಗಳ ಚಿಕಿತ್ಸೆಯಲ್ಲಿ ಭಾರತದಲ್ಲಿಯೇ ಪ್ರಪ್ರಥಮ ಸ್ಥಾನದಲ್ಲಿದೆ ಅಲ್ಲದೆ ಗುಣಶೀಲ ಸರ್ಜಿಕಲ್ ಮತ್ತು ಮೆಟರ್ನಿಟಿ ಆಸ್ಪತ್ರೆಗೆ 50 ವರ್ಷಗಳು ತುಂಬಿದವೆ ಈ ಸಂಬಂಧ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ.
ಪ್ರಸ್ತುತ ಆಸ್ಪತ್ರೆಗಳು ಕಾರ್ಪೊರೇಟ್ ಕ್ಷೇತ್ರದಲ್ಲಿಯೇ ಹೆಚ್ಚು ಹೆಸರು ಗಳಿಸುತ್ತಿದ್ದಾರೆ ಆದರೆ ಸಮಾಜದ ಕಳಕಳಿ ಹಾಗೂ ಗುಣಮಟ್ಟದಲ್ಲಿ ಗುಣಶಿಲಾಸ್ಪತ್ರೆ ಹಿಂದಿನಿಂದಲೂ ಸಹ ಹೆಸರು ಮಾಡಿದೆ. ವಿಶೇಷವಾಗಿ ಮಕ್ಕಳಿಗೆ ಹಾರೈಕೆ ಕೇಂದ್ರ ಹಾಗೂ ಆಕ್ಸನ್ ಚೈಲ್ಡ್ ಡೆವಲಪ್ಮೆಂಟ್ ಸೆಂಟರ್ ಸಹ ಇದರಲ್ಲಿ ಇರುವುದು ಸಂಸ್ಥೆಗೆ ಮತ್ತಷ್ಟು ಹೆಸರು ತನಂತಾಗಿದೆ ಎಂದರು.
ಇನ್ನು ಗುಣಶೀಲ್ ಆಸ್ಪತ್ರೆಯ ಸರ್ಜಿಕಲ್ ಸೆಂಟರ್ ನ ವ್ಯವಸ್ಥೆ ನಿರ್ದೇಶಕಿ ಡಾಕ್ಟರ್ ಜೈವಿಕ ಗುಣಶೀಲ ಮಾತನಾಡಿ, 50 ವರ್ಷಗಳ ಸಾರ್ಥಕ ಮೆಟ್ಟಿಲುಗಳನ್ನು ಸಂಸ್ಥೆ ಮುನ್ನಡೆಸಿಕೊಂಡು ಬಂದಿರುವುದು ಹೆಗ್ಗಳಿಕೆಯ ವಿಷಯವಾಗಿದ್ದು ನನ್ನ ತಾಯಿ ಡಾ. ಸುಲೋಚನಾ ಗುಣಶೀಲ ಅವರು ಪ್ರಾರಂಭಿಸಿದ ಈ ಆಸ್ಪತ್ರೆ ಇಂದು ಸಾವಿರಾರು ಕುಟುಂಬಗಳು ಭವಿಷ್ಯವನ್ನು ಬದಲಿಸಿದೆ ದಕ್ಷಿಣ ಭಾರತದ ಮೊದಲ ಪ್ರಾಣಶಿಶು 1988ರಲ್ಲಿ ಜನಿಸಿದರಿಂದ ಆರಂಭಿಸಿ ಇವತ್ತಿನವರೆಗೆ ಗುಣಶೀಲ ಆಸ್ಪತ್ರೆಯ ಹೊಸ ಭರವಸೆ ನಾವಿನ್ಯತೆ ಹಾಗೂ ಕಾರುಣ್ಯತೆಯ ಪ್ರತಿಕವಾಗಿ ನಿಂತಿದೆ ಕಾಲಕಾಲಕ್ಕೆ ಜಾಗತಿಕ ಗುಣಮಟ್ಟದ ವೈದ್ಯಕೀಯ ತಂತ್ರಜ್ಞಾನಗಳನ್ನು ಅಳವಡಿಸಿ ಕೊಳ್ಳುತ್ತಾ ಬಂದಿದ್ದೇವೆ ಸಂತಾನೋತ್ಪತ್ತಿ ಮತ್ತು ಗರ್ಭಧಾರಣೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಸಮಸ್ಯೆಗಳಿಗೂ ಪರಿಹಾರ ನೀಡುವ ಪ್ರಯತ್ನ ನಮ್ಮ ಸಂಸ್ಥೆ ಮಾಡುತ್ತದೆ ಎಂದರು ಮನೆತನ ಹೊಂದಿರುವ ಪ್ರತಿಯೊಂದು ದಂಪತಿಯು ಮಗುವನ್ನು ಹೊಂದಲು ಸೂಕ್ತ ಚಿಕೆಸೆ ನೀಡುತ್ತಾ ಬಂದಿದೆ ಐಪಿಎಫ್ ನಿಂದ ಹಿಡಿದು ವಂಶವಾಗಿ ಪರೀಕ್ಷೆವರೆಗೂ ಒಂದೇ ಸೂರಿ ನಡೆಯಲಿ ಸೇವೆ ನೀಡುತ್ತಿದ್ದೇವೆ ಇದೀಗ ಹಾಕ್ಸಾನ್ ಚೈಲ್ಡ್ ಡೆವಲಪ್ಮೆಂಟ್ ಸೆಂಟರ್ ಮೂಲಕ ಮಗುವಿನ ಸಮಗ್ರ ಆರೋಗ್ಯ ಮತ್ತು ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತೇವೆ ಎಂದರು.
ಇನ್ನು ಗುಣಶೀಲ ಸರ್ಜಿಕಲ್ ಮತ್ತು ಮೆಟರ್ನಿಟಿ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ರಾಜಶೇಖರ್ ನಾಯಕ್ ಮಾತನಾಡಿ, ಗುಣಶೀಲ ಆಸ್ಪತ್ರೆ ಎರಡು ಮಿಷನ್ಗಳನ್ನು ಇಟ್ಟುಕೊಂಡಿದ್ದು ಗುಣಮಟ್ಟದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಮುಂಚೂಣಿ ಸಾಧಿಸಲು ಮುಂದಾಗಿದೆ. ಗುಣಶೀಲ ಆಸ್ಪತ್ರೆ ಕೇವಲ ಆಸ್ಪತ್ರೆಗಿಂತ ಹೆಚ್ಚಿನದಾಗಿ ಜ್ಞಾನ ಕರುಣೆ ಮತ್ತು ನಾವಿನ್ಯತೆಯ ಕೇಂದ್ರದ ರೀತಿಯಲ್ಲಿ ಸೇವೆ ನೀಡುತ್ತಾ ಬಂದಿದೆ ಈವರೆಗೆ ನಾವು 250ಕ್ಕೂ ಹೆಚ್ಚು ವೈದ್ಯರನ್ನು ಮತ್ತು ನೂರಕ್ಕೂ ಹೆಚ್ಚು ಬೃಣ ಶಾಸ್ತ್ರಜ್ಞರನ್ನು ತರಬೇತಿ ಕೊಡಿಸಿದ್ದೇವೆ ಈ ಮೂಲಕ ಡಾ. ಸುಲೋಚನಾ ಗುಣಶೀಲ ಅವರ ಪರಂಪರೆ ಮುಂದುವರೆಯುವಂತೆ ನೋಡಿಕೊಂಡು ಮುಂದಿನ ತಲೆಮಾರಿನ ವೃತ್ತಿಪರರನ್ನು ಸಜ್ಜುಗೊಳಿಸುತ್ತಿದ್ದೇವೆ ಎಂದರು ಮುಂದಿನ ಹಂತದಲ್ಲಿ ನಾವು ಕರ್ನಾಟಕದ ಎರಡು ಮತ್ತು ಮೂರನೇ ತರದ ನಗರಗಳಲ್ಲಿ ನಮ್ಮ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದ್ದೇವೆ ಎಂದರು.
ರಾಜ್ಯದ ಮೂಲೆ ಮೂಲೆಗಳಿಗೂ ಸುಧಾರಿತ ಸಂತಾನೋತ್ಪತ್ತಿ ಚಿಕಿತ್ಸೆಯ ಸೌಕರ್ಯಗಳು ತಲುಪಬೇಕು ಎಂಬ ಉದ್ದೇಶದಿಂದ 2024ರಲ್ಲಿ ಬಳ್ಳಾರಿಯಲ್ಲಿ ನಮ್ಮ ಘಟಕ ಆರಂಭಿಸುವ ಮೂಲಕ ಈ ಕನಸಿಗೆ ಸಾಕಾರದ ರೂಪ ನೀಡುವ ಕಾರ್ಯ ಆರಂಭವಾಗಿದೆ ನಮ್ಮ ಮುಖ್ಯ ಆಸ್ಪತ್ರೆ ಬಸವನಗುಡಿಯಲ್ಲಿದ್ದು ಇದು ಸಂತಾನ ಸಾಪಲ್ಯ ಚಿಗುತೆಯ ಯಾನದಲ್ಲಿ ಯಾವಾಗಲೂ ಕೇಂದ್ರ ಸ್ಥಾನದಲ್ಲಿ ಉಳಿಯಲಿದೆ ಕೋರಮಂಗಲ ಮತ್ತು ಬಳ್ಳಾರಿಯಲ್ಲಿರುವ ನಮ್ಮ ಘಟಕಗಳು ವಿಷದ ದರ್ಶನ ಸಂತಾನ ಸ್ಥಾಪನೆ ಸೌಕರ್ಯಗಳನ್ನು ಎಲ್ಲರಿಗೂ ಸಮೀಪದ ಸ್ಥಳದಲ್ಲೇ ಲಭಿಸುವಂತೆ ಮಾಡುವ ಗುರಿ ಹೊಂದಿದ್ದೇವೆ ಎಂದರು.
ಖ್ಯಾತ ತ್ರಿರೋಗ ತಜ್ಞ ದಿವಂಗತ ಡಾಕ್ಟರ್ ಸುಲೋಚನಾ ಗುಣಶೀಲ ಹಾಗೂ ಡಾಕ್ಟರ್ ಮಾವಹಳ್ಳಿ ಗುಣಶಿಲಾ ಅವರಿಂದ ಪ್ರಾರಂಭವಾಗಿದ್ದಂತಹ ಆಸ್ಪತ್ರೆ ಇಂದಿಗೂ ವಿವಿಧ ಹಂತಗಳಲ್ಲಿ ಹಾಗೂ ತಂತ್ರಜ್ಞಾನವನ್ನು ಕಾಲಕಾಲಕ್ಕೆ ಬಳಸಿಕೊಂಡು ಮುನ್ನಡೆಸುತ್ತಾ ಬಂದಿದ್ದೇವೆ.