ಬೆಂಗಳೂರು: ರಾಜ್ಯದಲ್ಲಿ ಸುಮಾರು 28 ಜನ ಮುಖ್ಯಮಂತ್ರಿಗಳು ರಾಜ್ಯವನ್ನು ಆಳಿ ಹೋಗಿದ್ದಾರೆ ಆದರೆ ದಿವಂಗತ ದೇವರಾಜ ಅರಸು ಭಿನ್ಮ ದಿನಾಚರಣೆಯನ್ನು ಮಾತ್ರ ರಜತ ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತದೆ, ಯಾರು ಮಾಡಲಾರದಂತ ಸಾಮಾಜಿಕ ಕ್ರಾಂತಿಯನ್ನು ಕೇವಲ ಎಂಟು ವರ್ಷದ ಅವಧಿಯಲ್ಲಿ ಈ ರಜದಲ್ಲಿ ಅರಸು ಅವರು ಮಾಡಿರುವುದು ಕವಿಸ್ತಾನಿಯ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವಕೀಲ ಸಂಘದ ಅಧ್ಯಕ್ಷ ಸುರೇಶ್ ಎಂ ಲಾತೂರ್ ಅವರು ತಿಳಿಸಿದರು.
ಬೆಂಗಳೂರಿನ ನಯನ ಸಭಾಂಗಣದಲ್ಲಿ ದಿವಂಗತ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಮಾತನಾಡಿದ ಅವರು, ದೇವರಾಜು ಅರಸು ಅವರನ್ನು ಹಿಂದುಳಿದ ವರ್ಗಗಳ ಹರಿಕಾರ ಬಡವರ ಬಂಧು ಬಡವರ ಕಣ್ಮಣಿ ಎಂದು 10 ಹಲವು ಹೆಸರುಗಳಿಂದ ಬಿರುದುಗಳಿಂದ ಕರೆಯುತ್ತಾರೆ ದೇಶದ ಜಾತಿ ವ್ಯವಸ್ಥೆಯಲ್ಲಿ ಎರಡು ಮೂರು ಜಾತಿಗಳನ್ನು ಬಿಟ್ಟರೆ ಉಳಿದವರೆಲ್ಲರೂ ಶೋಷಣೆಗೆ ಒಳಗಾದವರೆ ಅದರಲ್ಲಿ ಅತಿ ಶೋಷಣೆಗೆ ಒಳಗಾದವರು ಹಿಂದುಳಿದ ವರ್ಗದವರು ಮತ್ತು ದಲಿತರು. ದಲಿತರಿಗೆ ಸಂವಿಧಾನದ ರಕ್ಷಣೆ ಇದೆ ಅವರಿಗೆ ಎಲ್ಲಾ ರಂಗಗಳಲ್ಲಿ ಶೈಕ್ಷಣಿಕ ರಾಜಕೀಯ ಸಾಮಾಜಿಕ ಮೀಸಲಾತಿ ಇರುವುದರಿಂದ ಪ್ರಗತಿಯನ್ನು ಕಾಣುತ್ತಿರುವವರು ಹಿಂದುಳಿದ ವರ್ಗಗಳಿಗೂ ಸಹಿತ ಮೀಸಲಾತಿಯನ್ನು ಕೊಡಬಹುದು ಎಂದು ಸಂವಿಧಾನ ಹೇಳಿದರು ಸಹಿತ ಅವಕಾಶಗಳನ್ನು ಸರ್ಕಾರಗಳು ನಿರ್ಣಯಿಸಿದಾಗ ಮಾತ್ರ ಸಿಗುತ್ತದೆ ಈ ದೇಶದಲ್ಲಿ ಮತ್ತು ರಾಜ್ಯದಲ್ಲಿ ಮೇಲ್ವರ್ಗದ ಜನ ಪ್ರತಿನಿಧಿಗಳೇ ಹೆಚ್ಚಾಗಿರುವುದರಿಂದ ಹಿಂದುಳಿದ ವರ್ಗಕ್ಕೆ ಸರಿಯಾದ ಮೀಸಲಾತಿಯನ್ನು ಕೊಡಲಿಲ್ಲ ಇದರಿಂದ ಶೇಕಡ 52 ರಷ್ಟು ಇರುವ ಹಿಂದುಳಿದ ವರ್ಗಗಳ ಜನತೆಗೆ ಅನ್ಯಾಯವಾಗಿದೆ.
ಹಿರಿಯ ವಕೀಲರು ಹಾಗೂ ಮಾಜಿ ಶಾಸಕ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಹೆಚ್ ಕಾಂತರಾಜ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ,ದೇಶದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಹಲವಾರು ಕ್ರಾಂತಿ ಪುರುಷರು ಹೋರಾಟಗಳನ್ನು ಈ ಹಿಂದೆ ಮಾಡಿಕೊಂಡು ಇದ್ದಾರೆ ಅದರಲ್ಲಿ ಜಗಜ್ಯೋತಿ ಬಸವೇಶ್ವರ ಗೌತಮ ಬುದ್ಧ ಜ್ಯೋತಿಬಾಪುಲೆ ನಾರಾಯಣ ಗುರು ಡಾ. ಬಿಆರ್ ಅಂಬೇಡ್ಕರ್ ರಾಮ್ ಮನೋಹರ್ ಲೋಹಿಯಾ ಹೀಗೆ 10 ಹಲವಾರು ಮಹಾ ನಾಯಕರುಗಳು ಜಾತಿ ವ್ಯವಸ್ಥೆ ವಿರುದ್ಧವಾಗಿ ಜೀವನಪರ್ಯಂತ ಹೋರಾಟ ಮಾಡಿದವರು ಇಂತಹ ಮಹಾನ್ ಪುರುಷರ ಹೋರಾಟಕ್ಕೂ ಸಹ ಲೆಕ್ಕಿಸಿದರೆ ಇದುವರೆಗೂ ನಾವು ಬದಲಾವಣೆಯನ್ನು ಕಾಣುತ್ತಿಲ್ಲ ಜಾತಿ ವ್ಯವಸ್ಥೆಯಲ್ಲಿ.
ಮಾಜಿ ಮೇಯರ್ ಅದಾ ಪಿ ಆರ್ ರಮೇಶ್ ಮಾತನಾಡಿ, ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಕ್ಕೆ ಕೊಟ್ಟಂತಹ ಕೊಡುಗೆ ಇಂದಿಗೂ ಅವಿಸ್ಮರಣೀಯ, ದಲಿತ ವರ್ಗದವರು ಅವರನ್ನು ಪೂಜಿಸುತ್ತಾರೆ ಯಾರಿಗೂ ಅನ್ಯಾಯ ಮಾಡಿಲ್ಲ ಅವರ ಕಾಲ ಅವಧಿಯಲ್ಲಿ ಸದೃಢವಾದಂತಹ ಆಡಳಿತ ವ್ಯವಸ್ಥೆ ಇತ್ತು ರಾಜ್ಯದಲ್ಲಿ 28ಕ್ಕಿಂತ ಹೆಚ್ಚು ಮುಖ್ಯಮಂತ್ರಿಗಳು ರಾಜ್ಯವನ್ನು ಆಳಿ ಹೋಗಿದ್ದಾರೆ ಆದರೆ ಅರಸು ಅವರ ರಾಜಕೀಯ ವಿಚಾರಧಾರೆಗಳೇ ಬೇರೆ ಎಂದರು.
ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಬೇಕಾದರೆ ವಕೀಲರುಗಳಿಂದ ಮಾತ್ರ ಸಾಧ್ಯ ಎಂಬುದು ಕಾಣಬರುತ್ತದೆ ಎಲ್ಲ ಹೋರಾಟಗಳಲ್ಲಿಯೂ ಸಹ ವಗಿಲೆ ಮುಂಚೂಣಿಯಲ್ಲಿ ಇದ್ದಾರೆ ಅದರಲ್ಲಿ ಮಹಾತ್ಮ ಗಾಂಧೀಜಿ ಬಾಬು ರಾಜೇಂದ್ರ ಪ್ರಸಾದ್ ಜವಹರಲಾಲ್ ನೆಹರು ಸರ್ದಾರ್ ವಲ್ಲಭಭಾಯಿ ಪಟೇಲ್ ಇಂತಹ ಅಗ್ರಗಣ್ಯರು ಸಾಲಿನಲ್ಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಪ್ಪ ಕೆ ಕರೆನ್ಸಿ ಕೆಜಿ ಶಿವಣ್ಣ ಹಾಗೂ ಸಂಘದ ಉಪಾಧ್ಯಕ್ಷರುಗಳು ಜಂಟಿ ಕಾರ್ಯದರ್ಶಿಗಳು ನಿರ್ದೇಶಕರುಗಳು ಹಾಗೂ ಹಿಂದುಳಿದ ವರ್ಗದ ನಾಯಕರುಗಳು ಹಾಗೂ ಹಿಂದುಳಿದ ವರ್ಗದವರು ಹಾಗೂ ಅನೇಕ ವಕೀಲರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.