ಬೆಂಗಳೂರು ಮಹಾನಗರದಲ್ಲಿ
ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸ
ಬೆಂಗಳೂರು: ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ನಗರದ
ರೇಸಕೋರ್ಸ ರೋಡ ಆನಂದರಾವ ಸರ್ಕಲ್ಲಿನಲ್ಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯ
ಸಭಾಂಗಣದಲ್ಲಿ ಮೇ 4 ಬೆಳಿಗ್ಗೆ 10 ಗಂಟೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ
ಸಮಾರಂಭ ಜರುಗಲಿದೆ.
ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಉದ್ಭಾಟನೆಗೊಳ್ಳುವ ಸಮಾರಂಭದಲ್ಲಿ ಮಾಜಿ ಮುಖ್ಯ ಮಂತ್ರಿ
ಎಸ್.ಎಂ.ಕೃಷ್ಣ ಅವರಿಗೆ ಸಂಸ್ಥೆಯಿ೦ದ ಪ್ರಥಮ ಬಾರಿಗೆ ಕೊಡಮಾಡುವ ಅತ್ಯುನ್ನತ “ಶ್ರೀ ಜಗದ್ಗುರು ರೇಣುಕ ಸಿರಿ”
ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕ್ಕಾಡೆಮಿ ಧಾರವಾಡದ ಡೀನ ಡಾ|ಎ.ಸಿ.ವಾಲಿ ಇವರು “ಶ್ರೀ ಜಗದ್ಗುರು ರೇಣುಕರ ಕ್ರಾಂತಿಗಳು’ ವಿಷಯವಾಗಿ ಉಪನ್ಯಾಸ ನೀಡುವರು. ಇದೇ ಸಂದರ್ಭದಲ್ಲಿ
ಸಿದ್ಧಾಂತ ಶಿಖಾಮಣಿ (ರೇಣುಕ ಗೀತೆ) ಗಂಥ ಬಿಡುಗಡೆಗೊಳ್ಳಲಿದ್ದು ಗ್ರಂಥ ಪರಿಚಯವನ್ನು ಶ್ರೀ ಬಸವೇಶ್ವರ ಕಾಲೇಜಿನ
ವಿಶ್ರಾಂತ ಪ್ರಾಂಶುಪಾಲ ಡಾ|ಸಿ. ಶಿವಕುಮಾರಸ್ವಾಮಿ ಗ್ರಂಥ ಪರಿಚಯ ಮಾಡುವರು. ತುಮಕೂರು ವಿ.ವಿ. ವಿಶ್ರಾಂತ
ಪ್ರಾಧ್ಯಾಪಕರಾದ ಡಾ।ಮೀನಾಕ್ಷಿ ಖಂಡಿಮಠ ಇವರು “ಆದಿ ಜಗದ್ಗುರು ಶ್ರೀ ರೇಣುಕರು ಮತ್ತು ವೀರಶೈವ ಸಿದ್ಧಾಂತ”
ಕುರಿತು ಉಪನ್ಕಾಸ ನೀಡುವರು.
ಇದೇ ಸ೦ದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರಿಂದ ವಿವಿಧ ವಿಶ್ವವಿದ್ಯಾಲಯಗಳಿಂದ ಅತ್ಯುನ್ನತ ಪದವಿ
ಪಡೆದ ಮಹಾಮಹೋಪಾಧ್ಯಾಯರಿಗೆ, ಎವಿಧ ಸ್ಪರ್ಧಾ/ಪರೀಕ್ಷೆಗಳಲ್ಲಿ ಅತ್ಯುನ್ನತ ಅಂಕ ಪಡೆದ ವಿದ್ಯಾರ್ಥಿ/
ವಿದ್ಯಾರ್ಥಿನಿಯರಿಗೆ ಪ್ರಶಂಸಾ ಪ್ರಮಾಣ ಪತ್ರ ಪ್ರದಾನ, ಸಂಸ್ಥೆಯ ಸಿಬ್ಬಂದಿಗೆ ಗುರುರಕ್ಷಾ ಕವಚ ಅನುಗ್ರಹಿಸುವ
ಕಾರ್ಯಕ್ರಮ ನಡೆಯುವುದು. ಈ ಸಮಾರಂಭದಲ್ಲಿ ಸರ್ವರೂ ಪಾಲ್ಗೊಳ್ಳುವಂತೆ ಸಂಸ್ಥೆಯ ಅಧ್ಯಕ್ಷರಾದ ಯು.ಎಂ.ಬಸವರಾಜ ವಿನಂತಿಸಿದ್ದಾರೆ.