ಬೆಂಗಳೂರು: ಅಖಿಲ ಕರ್ನಾಟಕ ಗಾಣಿಗ ಸಂಘ ಸ್ಥಾಪನೆಯಾಗಿ 50 ವರ್ಷ ಸಂದ ಹಿನ್ನೆಲೆ ಸುವರ್ಣ ಮಹೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ರಾಜಶೇಖರ್ ತಿಳಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಘಕ್ಕೆ 50 ವರ್ಷ ಸಂದ ಹಿನ್ನೆಲೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ, ಇನ್ನೂ ಇಡೀ ವೇಳೆ ಅವರನ್ನು ಸನ್ಮಾನಿಸಲಿದ್ದೀವೆ, ಬೆಂಗಳೂರಿನ ಕನಕಪುರ ರಸ್ತೆಯಲ್ಲಿನ ಅವಲಹಳ್ಳಿಯಲ್ಲಿರುವ ಸಂಘದ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇನ್ನು ಮುಖ್ಯಮಂತ್ರಿಗಳಿಗೆ ಗಾಣಿಗ ಸಮಾಜದ ಅಭಿವೃದ್ದಿ, ಹಾಗೂ ನಿಗಮ ಮಂಡಳಿ ಅನುಷ್ಠಾನವನ್ನು ಶೀಘ್ರವಾಗಿ ಮಾಡಬೇಕು, ಅದೇರೀತಿ ಸಮುದಾಯದ ಕುಲ ಕಸುಬಾದ ಗಾಣ ದಿಂದ ಎಣ್ಣೆ ತೆಗೆಯುವುದರ ಬಗ್ಗೆ ಸರ್ಕಾರ ಗಮನ ನೀಡಿ ವಿಶೇಷ ಪ್ರಾತಿನಿಧ್ಯ ನೀಡಲು, ಹಾಗೂ ಅನುದಾನ ಕೊಡಲು ಸರ್ಕಾರಕ್ಕೆ ಒತ್ತಾಯ ಮಾಡಿದರು.
ರಾಜ್ಯದಲ್ಲಿ ಕೇವಲ ಸಮುದಾಯ 5 ರಿಂದ 6 ಲಕ್ಷ ಮಾತ್ರ ಜನಸಂಖ್ಯೆ ಹೊಂದಿದೆ. ಮುಂಬರುವ ಜಾತಿ ಜನಗಣತಿಯಲ್ಲಿ ಸಮುದಾಯದ ಸಂಖ್ಯೆ ನಿಜವಾಗಿಯೂ ತಿಳಿಯಲಿದೆ. ಇನ್ನು ರಾಜಕೀಯದ ಪ್ರಾತಿನಿಧ್ಯದ ಕೊರತೆ ಎದ್ದು ಕಾಣುತ್ತಿದೆ, ಸಣ್ಣ ಸಮುದಾಯ ವಾಗಿರುವ ಕಾರಣ ಗಾಣಿಗ ಜನರು ಚದುರಿ ಹೋಗಿದೆ, ಎಲ್ಲಿಯೂ ಒಂದುಗೂಡುತ್ತಿಲ್ಲ, ನಮ್ಮ ಸಮುದಾಯದ ಮಠಾಧೀಶರು ಕೇವಲ ಇಬ್ಬರು ಇರುವ ಕಾರಣ ಆಯಾ ಪ್ರಾಂತ್ಯಕ್ಕೆ ಸಮುದಾಯವನ್ನು ಸೀಮಿತಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಗ್ಗೂಡಿಸುವ ಕೆಲಸವಾಗಬೇಕು ಅದನ್ನು ಸ್ವಾಮೀಜಿಗಳ ನೇತೃತ್ವದಲ್ಲಿ ಮಾಡಲಾಗುತ್ತದೆ ಎಂದರು.
ಮುಖ್ಯ ಮಂತ್ರಿಗಳು ನೂತನ ಕಟ್ಟಡ ಉದ್ಘಾಟನೆ ಹಾಗೂ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ, ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಪೂರ್ಣಾನಂದ ಪುರಿ ಸ್ವಾಮೀಜಿ ವಹಿಸಲಿದ್ದಾರೆ, ಕಾರ್ಯಕ್ರಮಕ್ಕೆ ಸಚಿವ ರಾಮಲಿಂಗಾರೆಡ್ಡಿ,ಕೃಷ್ಣ ಬೈರೇಗೌಡ, ಶಿವರಾಜ್ ತಂಗಡಗಿ, ಡಿಕೆ ಸುರೇಶ್,ಎಂ ಕೃಷ್ಣಪ್ಪ ವಿಶೇಷ ಆಗಮನಾಕಾಂಶಿಗಳಾಗಿದ್ದರೆ ಎಂದರು.
ಇನ್ನು ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಉಮೇಶ್, ನರಸಿಂಹಯ್ಯ, ಟಿಡಿ ಪ್ರಕಾಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.