ಬೆಂಗಳೂರು: ಫ.ಗು. ಹಳಕಟ್ಟಿ ವಚನ ಅಧ್ಯಯನ ಕೇಂದ್ರದಿಂದ ಗುರು ಸಿದ್ದರಾಮೇಶ್ವರರ ವಚನಗಳ ಸಮಗ್ರ ಸಂಪುಟವನ್ನು ಪ್ರಕಟಿಸಿ, ನೊಳಂಬ ಲಿಂಗಾಯತ ಸಂಘದ 15 ಸಾವಿರ ಸದಸ್ಯರಿಗೂ ತಲುಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಭರವಸೆ ನೀಡಿದರು.
ನೊಳಂಬ ಲಿಂಗಾಯತ ಸಂಘದ ವತಿಯಿಂದ ಅರಮನೆ ಮೈದಾನದಲ್ಲಿ ಬುಧವಾರ ನಡೆದ ಸಿದ್ದರಾಮೇಶ್ವರರ 852 జయంతి ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
”ಸಿದ್ದರಾಮೇಶ್ವರರ ವಚನಗಳಿಗೆ ಸಂಬಂಧಿ ಸಿದಂತೆ ಈಗಾಗಲೇ 10 ಸಾವಿರ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಶರಣರು ರಚಿಸಿರುವ ವಚನಗಳ ಸಂಶೋಧನಾ ಕಾರ್ಯ ನಡೆಯು ತ್ತಿದ್ದು, ಅದರಲ್ಲಿ ಬರುವ ಇನ್ನೂ ಹೆಚ್ಚಿನ ವಚನ ಗಳನ್ನು ಒಟ್ಟುಗೂಡಿಸಿ ಸಮಗ್ರ ವಚನ ಸಂಪುಟ ಪ್ರಕಟಿಸಲಾಗುವುದು,” ಎಂದು ತಿಳಿಸಿದರು.
”ಸಿದ್ದರಾಮೇಶ್ವರರು ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವವನ್ನು ಉಳಿಸಿ, ಬೆಳೆಸಿದ್ದಾರೆ. ದೇವಸ್ಥಾನ, ಕೆರೆಕಟ್ಟೆ ಜಮೀನಿಗೆ ನೀರಾವರಿ ಸೌಕರ್ಯ ವ್ಯವಸ್ಥೆ ಮಾಡುವ ಮೂಲಕ ಅವರು ಬಸವಣ್ಣನವರ ಕಾಯಕ ಸಮಾಜ ನಿರ್ಮಾಣದ ಕನಸು ನನಸು ಮಾಡುವಲ್ಲಿ ಸಾಕಷ್ಟು ಶ್ರಮಿಸಿದವರು. ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಅವಿಭಜಿತ ವಿಜಯಪುರ ಭಾಗಗಳಲ್ಲಿ ಸಿದ್ಧರಾಮೇಶ್ವರರ ಪ್ರಭಾವ ಇಂದಿಗೂ ಗಾಢವಾಗಿದೆ. ಇತ್ತಗುರು ಸಿದ್ದರಾಮೇಶ್ವರರ ಹೆಸರು ಅಜರಾಮರ
ಸಮಷ್ಟಿ ಹಿತಕ್ಕಾಗಿ ಮಿಡಿದ ಗುರು ಸಿದ್ದರಾಮೇಶ್ವರರ ಹೆಸರು ಅಜರಾಮರವಾಗಿದೆ. ಸಮ-ಸಮಾಜಕ್ಕಾಗಿ ಅವರು ಮಾಡಿದ ಕಾರ್ಯವನ್ನು ಹಳ್ಳಿ ಹಳ್ಳಿಗೂ ತಲುಪಿಸುವ ಕೆಲಸವಾಗಬೇಕು. ಅದಕ್ಕಾಗಿ ರಾಜ್ಯ ಸರಕಾರ ಮುಂಬರುವ ಬಜೆಟ್ ನಲ್ಲಿ ಪ್ರತಿ ಕ್ಷೇತ್ರದಲ್ಲಿ ಒಂದು ಬೃಹತ್ ಕೆರೆ ನಿರ್ಮಾಣ ಮಾಡುವ ಯೋಜನೆ ಘೋಷಿಸಬೇಕು. ಆ ಕೆರೆಗಳಿಗೆ ಸಿದ್ದರಾಮೇಶ್ವರರ ನಾಮಕರಣ ಮಾಡಬೇಕು ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.
ತುಮಕೂರಿನ ಭಾಗದಲ್ಲಿ ನೊಳಂಬ ಲಿಂಗಾಯತ ಸಮುದಾಯವು ಸಿದ್ಧರಾಮೇಶ್ವರರ ಮೇಲೆ ಅತೀವ ಭಕ್ತಿ ಹೊಂದಿ, ಅವರ ಹೆಸರನ್ನು ಶಾಶ್ವತ ಗೊಳಿಸಿದೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಗಮನಕ್ಕೆ ಬಂದಿದೆ,” ಎಂದು ಮೆಚ್ಚುಗೆವ್ಯಕ್ತಪಡಿಸಿದರು. ವ್ಯಕ್ತಗೊಳರು ಲಿಂಗಾಯತ ಸಮುದಾಯದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ಬಡವಾ ಗಿದ್ದು, ಅಗತ್ಯ ಸಹಾಯ-ಸಹಕಾರ ನೀಡಲಾಗು ವುದು,’ ಎಂದು ಭರವಸೆ ನೀಡಿದರು.
ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, “ಉಪನಿಷತ್ತುಗಳ ಕಾಲದಲ್ಲಿ ಸತ್ಯ ದರ್ಶನಕ್ಕಾಗಿ ನಡೆದ ಚರ್ಚೆ, ಸಂವಾದ ಸಂಗತಿಗಳು ಮತ್ತೆ ಭಾರತದಲ್ಲಿ ನಡೆದಿದ್ದು, 12ನೇ ಶತಮಾನದ ಬಸವಣ್ಣನವರ ಕಾಲದಲ್ಲಿ ಸಂಸ್ಕೃತಿ, ಪರಂಪರೆಯ ಜ್ಞಾನ ಅಳವಾಗಿ ಅರಿತುಕೊಂಡಿದ್ದ ಬಸವಣ್ಯ ಅಲ್ಲಮಪ್ರಭುಗಳು, ಸಮಾಜ ಸುಧಾರಣೆಗೆ ಟೊಂಕ ಕಟ್ಟಿ ನಿಂತು ದೊಡ್ಡ ಕ್ರಾಂತಿಯನ್ನೇ ಮಾಡಿದರು,” ಎಂದರು.
ಗವಿಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ‘ಸಮಾಜವನ್ನು ಆಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆ ತಂದು ನಿಲ್ಲಿಸಿದ್ದ ಶರಣರ ಜಯಂತಿಗಳನ್ನು ಒಂದು ದಿನಕ್ಕೆ ಸೀಮಿತಗೊಳಿಸಬಾರದು. ಪ್ರತಿ ದಿನ ವಚನಗಳನ್ನು ಓದುವ ಮೂಲಕ ಅವರನ್ನು ನಿತ್ಯವೂ ಸ್ಮರಿಸಬೇಕು,” ಎಂದು ಕರೆ ನೀಡಿದರು.
ತಿಪಟೂರಿನ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಬೇಲೂರಿನ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಶಾಸಕರಾದ ಕೆ. ಷಡಕ್ಷರಿ, ಎಚ್.ಡಿ. ತಮ್ಮಯ್ಯ, ಎಚ್.ಕೆ. ಸುರೇಶ್, ಮಾಜಿ ಶಾಲ ಆಶೋಕ್ ಖೇಣಿ, ಎಸ್.ಎಂ. ನಾಗರಾಜ್, ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎನ್.ಸಿದ್ಧ ಹನ್ಸ್, ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎ ಷಡಾಕ್ಷರಿ ಹಾಗೂ ಸಂಘದ ಪದಾಧಿಕಾರಿಗಳು