ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 9 ಸಾವಿರ ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಂಡು 7.38 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಬಿ.ಎಸ್.ಡಬ್ಲ್ಯೂ.ಎಂ.ಎಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕರೀಗೌಡ ರವರು ತಿಳಿಸಿದ್ದಾರೆ.
ನಗರದಾದ್ಯಂತ ಏಕ ಬಳಕೆ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ ಕೂಡ, ಅಕ್ರಮವಾಗಿ ಏಕ ಬಳಕೆ ಪ್ಲಾಸ್ಟಿಕ್ ಕವರ್ಗಳನ್ನು ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ *ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಅಧಿಕಾರಿಗಳು ಉತ್ಪಾದಕರು ಹಾಗೂ ದಾಸ್ತಾನುದಾರರ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ* ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಪ್ಲಾಸ್ಟಿಕ್ ವಶಕ್ಕೆ ಪಡೆದು, ಕೆ.ಆರ್.ಮಾರುಕಟ್ಟೆಯಲ್ಲಿ ಒಂದು ಗೋಡೌನ್ ಸೀಜ್ ಮಾಡಲಾಗಿದೆ.
*ಪರಿಶೀಲನೆಯ ವೇಳೆ ನಿಯಮಾನುಸಾರ ದಂಡ ವಿಧಿಸಿ ಸಂಗ್ರಹಿಸಲಾದ ದಂಡದ ವಿವರ ಈ ಕೆಳಗಿನಂತಿದೆ:*
*ಕೆ.ಆರ್. ಮಾರುಕಟ್ಟೆ:*
ಕೆ.ಆರ್ ಮಾರುಕಟ್ಟೆ ವ್ಯಾಪ್ತಿಯ ಎ ಬ್ಲಾಕ್ ನಲ್ಲಿ 3 ಪ್ರಕರಣಗಳಿಂದ 29 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 30,000/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ. ಜೊತೆಗೆ ವೆಂಡರ್ಸ್ ಸಿ ಬ್ಲಾಕ್ ನಲ್ಲಿ 22 ಪ್ರಕರಣಗಳಿಂದ 6310 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 3500/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.
*ಅವೆನ್ಯೂ ರಸ್ತೆ:*
ಅವೆನ್ಯೂ ರಸ್ತೆ ವ್ಯಾಪ್ತಿಯ ಬಿ ಬ್ಲಾಕ್ ನಲ್ಲಿ 17 ಪ್ರಕರಣಗಳಿಂದ 300 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 40,000/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.
*ಕಲಾಸಿಪಾಳ್ಯ:*
ಕಲಾಸಿಪಾಳ್ಯದಲ್ಲಿ 24 ಪ್ರಕರಣಗಳಿಂದ 150 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 45,900/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.
*ಯಶವಂತಪುರ ಮಾರುಕಟ್ಟೆ:*
ಯಶವಂತಪುರ ಮಾರುಕಟ್ಟೆಯಲ್ಲಿ 27 ಪ್ರಕರಣಗಳಿಂದ 110 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 61,800/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.
*ಪೀಣ್ಯ ಕೈಗಾರಿಕಾ ಪ್ರದೇಶ:*
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 27 ಪ್ರಕರಣಗಳಿಂದ 450 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 1,00,500/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.
*ದಾಸರಹಳ್ಳಿ (ಮ್ಯಾನುಪಾಕ್ಚರಿಂಗ್) ಪ್ರದೇಶ:*
ದಾಸರಹಳ್ಳಿ (ಮ್ಯಾನುಪಾಕ್ಚರಿಂಗ್) ಪ್ರದೇಶದಲ್ಲಿ 01 ಪ್ರಕರಣಗಳಿಂದ 218 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 50,000/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.
*ಚಾಮರಾಜಪೇಟೆ ಹಾಗೂ ಇತರೆ ಪ್ರದೇಶ:*
ಚಾಮರಾಜಪೇಟೆ-ಮಕ್ಕಳಕೂಟ, ಅಕ್ಕಿಪೇಟೆ, ಬಳೆಪೇಟೆ ಪ್ರದೇಶದಲ್ಲಿ 37 ಪ್ರಕರಣಗಳಿಂದ 2,000 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದಿದ್ದು, ರೂ. 4,07,000/- ಗಳ ದಂಡದ ಮೊತ್ತವನ್ನು ವಸೂಲಾತಿ ಮಾಡಲಾಗಿದೆ.
*ಒಟ್ಟಾರೆಯಾಗಿ 158 ಪ್ರಕರಣಗಳಿಂದ 9,567 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದು ರೂ. 7,38,700* ಗಳ ದಂಡದ ಮೊತ್ತವನ್ನು ವಸೂಲಿ ಮಾಡಿ, ಸಾರ್ವಜನಿಕರು ಹಾಗೂ ಮಾರಾಟಗಾರರು ಏಕ ಬಳಕೆ ಪ್ಲಾಸ್ಟಿಕ್ ಬಳಸದಂತೆ ಹಾಗೂ ಬಟ್ಟೆಯ ಚೀಲಗಳನ್ನು ಬಳಸಿ ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸಹಕರಿಸುವಂತೆ ಮನವಿ ಮಾಡಿದರು.