ಬೆಂಗಳೂರು: ನಗರದ ಜೆಪಿ ನಗರದಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡ, ನಾಯಕ, ಸಮಾಜಸೇವಕ ಶ್ರೀ ಸ್ಟಾರ್ ಗುರುದೇವ್ ಅವರಿಗೆ 55ನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳನ್ನು ಆಚರಿಸಲಾಯಿತು.
ಗುರುದೇವ್ ಅವರು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಜೆಪಿ ನಗರದಲ್ಲಿ ಕಾಂಗ್ರೆಸ್ ನಲ್ಲಿ ತೊಡಗಿಕೊಂಡು ಜನೋಪಯೋಗಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಬಡವರು, ನಿರ್ಗತಿಗಳು, ಕೂಲಿಕಾರ್ಮಿಕರು, ಕ್ಷೇತ್ರದ ರಸ್ತೆಗಳು, ಒಳ ಚರಂಡಿ, ಕಸ ಹೀಗೆ ಹತ್ತು ಹಲವು ಕೈಂಕರ್ಯದಲ್ಲಿ ತೊಡಗಿಕೊಂಡು ಕ್ಷೇತ್ರದ ಜನತೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಕಾರಣಿಬೂತರಾಗಿದ್ದರೆ.
ಇನ್ನು ಜೆಪಿ ನಗರದ 24ನೇ ಮುಖ್ಯ ರಸ್ತೆಯಲ್ಲಿರುವ ಅವರ ಕಚೇರಿಯಲ್ಲಿ ಬೃಹತ್ ಕೇಕ್ ಕತ್ತರಿಸುವ ಮೂಲಕ ಅಭಿಮಾನಿಗಳೊಂದಿಗೆ ಬರ್ತಡೇ ವಿಶೇಷವಾಗಿ ಆಚರಿಸಿಕೊಂಡರು. ಇದರ ಜೊತೆಗೆ ಕ್ಷೇತ್ರದ ಬಡವರಿಗೆ, Bpl ಕಾರ್ಡ್ ಹೊಂದಿದವರಿಗೆ ಸಹಕಾರ ಇಲಾಖೆಯ ಬ್ಯಾಂಕ್ ನಿಂದ 5 ಲಕ್ಷದ ವರೆಗೆ ಸುಮಾರು 500ಕ್ಕಿಂತ ಹೆಚ್ಚು ಆರೋಗ್ಯ ವಿಮೆಯ ಕಾರ್ಡ್ ಅನ್ನು ಗುರುದೇವ್ ಅವರು ಪಾಲಾನುಭವಿಗಳಿಗೆ ನೀಡಿದರು.
ಗುರುದೇವ್ ಅವರ ಹುಟುಹಬ್ಬಕ್ಕೆ ಅವರ ಕಚೇರಿಯಲ್ಲಿ ಸಾರ್ವಜನಿಕರಿಗೆ ಅನ್ನದಾನವನ್ನು ಮಾಡಿದರು, ಈ ವೇಳೆ ಫಲಾನುಭವಿಗಳು ಗುರುದೇವ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಗುರುದೇವ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಹಿತೈಷಿಗಳು, ಕೈ ಕಾರ್ಯಕರ್ತರು, ಸಾರ್ವಜನಿಕರು,ಸ್ನೇಹಿತರು ಆಗಮಿಸಿ ಹೂ ಗುಚ್ಛ ನೀಡುವ ಮೂಲಕ ಶುಭ ಕೋರಿದರು.
ಇನ್ನು ಶ್ರೀ ಸ್ಟಾರ್ ಗುರುದೇವ್ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಉಮೇಶ್ ಗೌಡ, ಸುನಿಲ್ ಕುಮಾರ್, ಸಮಾಜ ಸೇವಕರಾದ ಅಲ್ತಾಫ್ ಸೇರಿದಂತೆ ನೂರಾರು ಜನರು ಕಾಂಗ್ರೆಸ್ ಮುಖಂಡರು,ಭವಿಷ್ಯದ ಬಿಬಿಎಂಪಿ ಕಾರ್ಪೊರೇಟರ್ ಆಕಾಂಕ್ಷಿ, ಗುರುದೇವ್ ಅವರ ಆಪ್ತ ಸ್ನೇಹಿತರು ಅವರಿಗೆ ಶುಭ ಹಾರೈಸಿದರು.