ಬೆಂಗಳೂರು: ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್ ನ ಭಾರತದ ಮುಂಚೂಣಿಯ ಫ್ಯಾಷನ್ ಬ್ರಾಂಡ್ ಪಂಟಲೂನ್ಸ್ ಫ್ಯಾಷನ್ ರೀಟೇಲ್ ವಾತಾವರಣವನ್ನೇ ಬದಲಾಯಿಸುವತ್ತ ಐತಿಹಾಸಿಕ ಹೆಜ್ಜೆ ಇರಿಸಿದ್ದು ಬೆಂಗಳೂರಿನ ಜೆ.ಪಿ.ನಗರದಲ್ಲಿ ತನ್ನ ಮೊದಲ ಆನ್ ಲೂಪ್ ಮಳಿಗೆ ಪ್ರಾರಂಭಿಸಿದೆ.
ಪಂಟಲೂನ್ಸ್ ಆನ್ ಲೂಪ್ ಮಳಿಗೆಯು ವಿನೋದದ, ವಿಶಿಷ್ಟ, ತಂತ್ರಜ್ಞಾನ-ಪ್ರಥಮ ಎಕ್ಸ್ ಪೀರಿಯೆನ್ಷಿಯಲ್ ಸ್ಟೋರ್ ಆಗಿದ್ದು ತಮ್ಮ ಕೆಲಸದಲ್ಲಿ ವಿನೋದ ಮತ್ತು ಉತ್ಸಾಹವನ್ನು ಬಯಸುವ ಯುವ ಮತ್ತು ಆಧುನಿಕ ಗ್ರಾಹಕರಿಗೆಂದೇ ವಿನ್ಯಾಸಗೊಳಿಸಲಾಗಿದೆ.
ಈ ಹೊಸ ಮಳಿಗೆಯು 70,000 ಚದರ ಅಡಿ ವಿಸ್ತೀರ್ಣ ಹೊಂದಿದ್ದು ಫ್ಯಾಷನ್ ಆಚೆಗೂ ಅನುಭವಗಳನ್ನು ವಿಸ್ತರಿಸುತ್ತಿದ್ದು ಉಡುಪು, ಪಾದರಕ್ಷೆ, ಕೈಗಡಿಯಾರಗಳು, ಸನ್ ಗ್ಲಾಸ್ ಗಳು, ಸೌಂದರ್ಯವರ್ಧಕಗಳು, ಬ್ಯಾಗ್ ಗಳು, ಆಭರಗಳು, ಎಥ್ನಿಕ್ ಗಳು, ಸೌಂದರ್ಯ ವರ್ಧಕ ಮತ್ತಿತರೆ 50ಕ್ಕೂ ಹೆಚ್ಚು ಫ್ಯಾಷನ್ ಬ್ರಾಂಡ್ ಗಳನ್ನು ಹೊಂದಿದೆ. ಇಡೀ ದೇಶದಲ್ಲಿಯೇ ಅತಿ ದೊಡ್ಡ , ಬೃಹತ್ ಮಳಿಗೆ ಯಾಗಿದೆ.
ಈ ಮಳಿಗೆಯು ಖ್ಯಾತ ಎಥ್ನಿಕ್ ವೇರ್ ಬ್ರಾಂಡ್ ಗಳಾದ ತಸ್ವ, ಜೇಪೋರ್ ಅಲ್ಲದೆ ಪಂಟಲೂನ್ಸ್ ನ ವಿಶೇಷ ಬ್ರಾಂಡ್ ಗಳಾದ ರಂಗಮಂಚ್, ಆಕೃತಿ, ಇಂಡಸ್ ರೂಟ್ ಇತ್ಯಾದಿ ಒಳಗೊಂಡಿವೆ. ಪುಮಾ ಮತ್ತು ಸ್ಕೆಚರ್ಸ್ ಅಲ್ಲದೆ ಗಿವಾ, ಕೊರಿಯಾದ ಚರ್ಮದ ಆರೈಕೆ ಬ್ರಾಂಡ್ ಕ್ವೆಂಚ್ ಎಲ್ಲವೂ ಒಂದೇ ಸೂರಿನಡಿ ಲಭ್ಯವಿವೆ. ಈ ಮಳಿಗೆಯು ಬೆಂಗಳೂರಿನಲ್ಲಿ ಮೊದಲ ಕೊಕೊ ಲೆನಿ ಕನ್ನಡಕಗಳ ಬ್ರಾಂಡ್ ಕೂಡಾ ಹೊಂದಿದೆ.
ಸ್ಮಾರ್ಟ್ ಟ್ರಯಲ್ ರೂಂಗಳು, ವಿಸ್ತಾರ ಪ್ರದೇಶ ಮತ್ತು ಕಸ್ಟಮೈಸೇಷನ್ ಜೋನ್ ಇದ್ದು ಹೀಟ್ ಟ್ರಾನ್ಸ್ ಫರ್ ತಂತ್ರಜ್ಞಾನ ಅಲ್ಲದೆ ಎಂಬ್ರಾಯಿಡರಿ ಮಾಡಲಾದ ಬ್ಯಾಡ್ಜ್ ಗಳು, ಕಸ್ಟಮೈಸ್ಡ್ ಬ್ಯಾಗ್ ಟ್ಯಾಗ್ ಗಳು ಮತ್ತಿತರೆ ಖರೀದಿ ಅನುಭವ ಉನ್ನತೀಕರಿಸುವ ಮೂಲಕ ತಡೆರಹಿತ ಬ್ರೌಸಿಂಗ್ ನೀಡುತ್ತವೆ ಮತ್ತು ನಿಮ್ಮ ಅಚ್ಚುಮೆಚ್ಚಿನ ಉಡುಪುಗಳನ್ನು ಟ್ರೈ ಮಾಡುವ ಅವಕಾಶ ನೀಡುತ್ತದೆ.
ಈ ಹೊಸ ಪರಿಕಲ್ಪನೆ ಪ್ರಾರಂಭ ಕುರಿತು ಪಂಟಲೂನ್ಸ್ ಸ್ಟೈಲ್ ಅಪ್ ಅಂಡ್ ಮಾರಿಗೋಲ್ಡ್ ಲೇನ್ ಸಿಇಒ ಸಂಗೀತಾ ಪೆಂಡೂರ್ಕರ್ ಮಾತನಾಡಿ, “ಪಂಟಲೂನ್ಸ್ ಹಲವು ವರ್ಷಗಳಿಂದ ಯುವ ಆಧುನಿಕ ಖರೀದಿದಾರರಿಗೆ ಫ್ಯಾಷನ್ ಮೈದಾನವಾಗಿದೆ. ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪಂಟಲೂನ್ಸ್ ಆನ್ ಲೂಪ್ ಅನ್ನು ಜೀವನಶೈಲಿ ಮತ್ತು ಫ್ಯಾಷನ್ ನ ಎಲ್ಲ ಅಂಶಗಳನ್ನೂ ನಿರೀಕ್ಷಿಸುವ ಜೆನ್ ಝೀ ಜನರಿಗೆ “ಗೋ-ಟು” ತಾಣವಾಗಿ ಪರಿಚಯಿಸಲು ಬಹಳ ಹೆಮ್ಮೆ ಪಡುತ್ತಿದ್ದೇವೆ. ಶೋ ರೂಂ ಗೆ ಬರು ಎಲ್ಲಾ ಗ್ರಾಹಕರಿಗೂ ವಿಶೇಷ ಅನುಭವ ನೀಡುತ್ತಿದೆ, ಗ್ರಾಹಕರೆ ತಮ್ಮ ವಸ್ತುಗಳನ್ನು ಪರಿಶೀಲಿಸಬಹುದು, ಆಧುನಿಕ ತಂತ್ರಜ್ಞಾನ ವನ್ನು ಬಳಸಿಕೊಂಡು ಮಳಿಗೆಯಲ್ಲಿ ಅಳವಡಿಸಲಾಗಿದೆ. ಮಳಿಗೆಯಲ್ಲಿ ರಂಗಸ್ಥಳದಂತೆ ರೂಪಿಸಲಾದ ಪಂಟಲೂನ್ಸ್ ಆನ್ ಲೂಪ್ ಗ್ರಾಹಕರಿಗೆ ಸರಿಸಾಟಿ ಇರದ ಖರೀದಿ ಅನುಭವ ನೀಡುತ್ತದೆ” ಎಂದರು.
ಲೂಪ್ ನಲ್ಲಿ ಜೀವಿಸುವ ಮುಂದಿನ ತಲೆಮಾರಿನ ಗ್ರಾಹಕರಿಗೆ ಪಂಟಲೂನ್ಸ್ ಆನ್ ಲೂಪ್ ಫನ್ ಲೂಪ್ ತಾಣವಾಗಿದ್ದು ಅವರು ಪದೇ ಪದೇ ಭೇಟಿ ನೀಡಬಹುದಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ಮಳಿಗೆ ತೆರೆಯುವ ಆಲೋಚನೆ ಇದೆ ಎಂದು ಅವರು ತಿಳಿಸಿದರು.