ಬೆಂಗಳೂರು : ಫೇಸ್ ಬುಕ್ ನಲ್ಲಿ ಜಾತಿ ನಿಂದನೆ ಪ್ರಕರಣದ ಆದರದ ಮೇಲೆ ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಬಂಧನವಾಗಿದೆ.
ಕನ್ನಡ ಪರ ಹೋರಾಟಗಾರ ಹರೀಶ್ ಕುಮಾರ್ ಬೈರಪ್ಪ ಅವರಿಗೆ ಜಾತಿ ನಿಂದನೆ ಆರೋಪದ ಮಾಡಿದ್ದಾರೆಂದು ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಭದ ಪೊಲೀಸರು ಕೆರೆಹಳ್ಳಿಯನ್ನು ಬಂಧಿಸಿದ್ದಾರೆ.
ಫೇಸ್ ಬುಕ್ ನಲ್ಲಿ ಜಾತಿ ನಿಂದನೆ ಬಗ್ಗೆ ಪೊಸ್ಟ್ ಹಾಕಿದ್ದ ಪುನೀತ್ ಕೆರೆಹಳ್ಳಿ , ಪೊಲೀಸರು ಕೇಸ್ ದಾಖಲಿಸಿಕೊಂಡು ಅರೆಸ್ಟ್ ಮಾಡಿ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ತದನಂತರ 17ನೇ ಸಿಟಿ ಸಿವಿಲ್ ಕೋರ್ಟ್ ಗೆ ಹಾಜರುಪಡಿಸಿದ ಪೊಲೀಸರು.
ವಿವಿಧ ಠಾಣೆಯಲ್ಲಿ ದೂರು:
ಬೇರೆ ಬೇರೆ ಆರೋಪಗಳ ಅಡಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪುನೀತ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಹ ಸಲ್ಲಿಸಿದ್ದಾರೆ. ಕೊಲೆ ಪ್ರಕರಣವೊಂದರಲ್ಲಿ ಬಂಧನ ಮಾಡಲಾಗಿತ್ತು. ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮಾಧ್ಯಮದಲ್ಲಿ ಪ್ರಕಟವಾದ ವರದಿಯನ್ನು ನಾನು ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದೆ. ಈ ಪೋಸ್ಟ್ ನಂತರ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಬೈರಪ್ಪ ಹರೀಶ್ಕುಮಾರ್ ಉಲ್ಲೇಖಿಸಿದ್ದರು.