ಬೆಂಗಳೂರು: ರಾಷ್ಟ್ರದಲ್ಲಿ ಸುಮಾರು 25 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಮಾದಿಗ ಮಾದಾರ,ಚಮ್ಮಾರ ಅರುಂಧತೀಯ ಮೂಚಿ, ಸಮಗಾರ ಡೋಹರ ಮುಂತಾದ ಹೆಸರಿನಲ್ಲಿ ಕರೆಸಿಕೊಳ್ಳುವ ಬಹುಸಂಖ್ಯಾತ ಮಾದಿಗ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಹಾಗು ಹಕ್ಕುಗಳ ಒತ್ತಾಯವನ್ನೂ ಸರ್ಕಾರಕ್ಕೆ ಮಾಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ಆದಿ ಜಾಂಬವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ಎನ್ ಮುತ್ತುರಾಜ್ ಅವರು ಆಗ್ರಹಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎರಡು ಸರ್ಕಾರಗಳು ಸಹ ಮಾದಿಗ ಸಮುದಾಯಗಳಿಗೆ ಯಾವುದೇ ರೀತಿಯ ಅನುಕೂಲಗಳನ್ನು ಮಾಡಿಕೊಟ್ಟಿಲ್ಲ ಹಲವು ಬಾರಿ ಮನವಿಗಳನ್ನು ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆಗೆ ಬಂದಾಗ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಆಶ್ವಾಸನೆ ನೀಡಿದರು, ಫಲಕಾರಿಯಾಗಿಲ್ಲ, ಸಹ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆಯುತ್ತಿದ್ದರು ಸಹ ಯಾವುದೇ ನಮ್ಮ ಹಕ್ಕು ಹೊತ್ತಾಯಾಗಳಿಗೆ ಕಿಮ್ಮತ್ತು ನೀಡಿಲ್ಲ.
ಇದುವರೆಗೂ ರಾಜ್ಯವನ್ನು ಆಳಿದ ಸರ್ಕಾರಗಳು ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಸರ್ವರಿಗೂ ಸಾಮಾಜಿಕ ನ್ಯಾಯ ನೀಡುವುದಾಗಿ ಹೇಳಿ ಜನಸಂಖ್ಯೆಗೆ ಅನುಗುಣವಾಗಿ ನಮ್ಮ ಸಮುದಾಯಕ್ಕೆ ನೀಡಬೇಕಾದ ಪಾಲನ್ನು ನೀಡದೇ ವಂಚಿಸುತ್ತೇವೆ ಎಂದು ಆರೋಪಿಸಿದರು. ಈಗಿನ ಸರ್ಕಾರವು ಆದಿಜಾಂಬವ ಸಮುದಾಯದವರಿಗೆ ನೀಡಬೇಕಾದ ಪಾಲನ್ನು ನೀಡದೆ ರಾಜ್ಯದಲ್ಲಿ ಈ ಸಮುದಾಯದ ಮತದಾರರನ್ನು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆಂದನ್ನು ಮರೆತಿದ್ದಾರೆ.
ಮಾದಿಗ ಸಮುದಾಯವು ಚರ್ಮ ಉದ್ಯೋಗಿ ಮತ್ತು ಸಫಾಯಿ ಕರ್ಮಚಾರಿಗಳಾಗಿ ಹೀನಾಯ ರೀತಿಯಲ್ಲಿ ಜೀವಿಸುತ್ತಿರುವ ಸಮುದಾಯಕ್ಕೆ ಒಂದು ಸೂರುಗಳನ್ನು ನೀಡದೆ ಅನ್ಯಾಯ ಮಾಡಿದ್ದಾರೆ. ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು. ನಿಗಮಂಡಳಿಗಳಲ್ಲಿ ಸಾಲ ಸೌಲಭ್ಯಗಳಿಗೆ ಅನುದಾನ ನೀಡಿಲ್ಲ, ಈ ಸಮುದಾಯದವರ ಮೇಲೆ ನಿರಂತರವಾಗಿ ಅಕ್ರಮ, ದೌರ್ಜನ್ಯಗಳು ನಡೆಯುತ್ತಲೇ ಬಂದಿದೆ, ಇವುಗಳನ್ನು ಹತ್ತಿಕ್ಕುವುದರಲ್ಲಿ ಸರಕಾರ ವಿಫಲವಾಗಿದೆ ಎಂದರು.
ಹೀಗಾಗಿ ಮಾದಿಗ ಸಮುದಾಯದ ವಿವಿಧ ಬೇಡಿಕೆಗಳು ಹಾಗೂ ಹಕ್ಕು ಒತ್ತಾಯಾಗಳಿಗೆ ಆಗ್ರಹಿಸಿ ಡಿಸೆಂಬರ್ 11ರಂದು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ನಡೆಸಲಿದ್ದರೆ, ಕೋಡಿಹಳ್ಳಿ ಆದಿ ಜಾಂಬವ ಬೃಹನ್ ಮಠದ ಪೀಠಾಧ್ಯಕ್ಷರಾದ ಶ್ರೀ ಬ್ರಹ್ಮಾನಂದ ಮುನಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ರಾಜ್ಯಮಟ್ಟದ ಪದಾಧಿಕಾರಿಗಳ ಸಮಾವೇಶ ನಡೆಸಿ ಸಭೆಯಲ್ಲಿ ಕೆಲಸ ಹಕ್ಕು ಒತ್ತಾಯ ನಿರ್ಣಯಗಳನ್ನು ಅಂಗೀಕರಿಸಲಾಗುವುದು ಎಂದು ತಿಳಿಸಿದರು.
ಪ್ರಮುಖ ಬೇಡಿಕೆಗಳಾದ:
2012ರ ನ್ಯಾಯಮೂರ್ತಿ ಏಜೆ ಸದಾಶಿವ ಆಯೋಗ ವರದಿಯಲ್ಲಿ ಮಾದಿಗ ಸಮುದಾಯಕ್ಕೆ ಶಿಫಾರಸು ಮಾಡಿರುವ ಶೇ6ರ ಪ್ರತ್ಯೇಕ ಮೀಸಲಾತಿಯನ್ನು ಅನುಷ್ಠಾನಗೊಳಿಸಬೇಕು.
ಆದಿ ಜಾಂಬವ ಸಮುದಾಯಕ್ಕೆ ಶೇಕಡ 0. 75ರ ಮೀಸಲಾತಿ ನೀಡಬೇಕು, ಸಮುದಾಯದ ಅಭಿವೃದ್ಧಿ ಮಾಡುವ ಹಿನ್ನೆಲೆ ಮಂಜೂರು ಮಾಡಿದ್ದ ಹಾಗೂ ಅತಿಕ್ರಮಣ ಕೊಳಕಾಗಿರುವ ಜಮೀನನ್ನು ಬಿಡಿಸಿಕೊಳ್ಳಬೇಕು.
ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡಿರುವ ಸಮುದಾಯದವರಿಗೆ ರಾಜ್ಯದಲ್ಲಿ 50,000 ನಿವೇಶನಗಳನ್ನು ನೀಡಬೇಕು, ಬಗರು ಹುಕುಂ ಸಾಗುವಳಿ ಮಾಡುತ್ತಿರುವವರಿಗೆ ಸಾಗುವಳಿ ಚೀಟಿ ನೀಡಬೇಕು.
ದಲಿತರ ಮೇಲೆ ನಡೆಯುತ್ತಿರುವ ದೌರ್ಜನಗಳನ್ನು ತಡೆಗಟ್ಟಲು ಮಧ್ಯ ಪ್ರದೇಶದಲ್ಲಿರುವಂತೆ ಪ್ರತ್ಯೇಕ ಪೊಲೀಸ್ ಠಾಣೆಗಳನ್ನು ನಿರ್ಮಿಸಬೇಕು.
ರಾಜ್ಯದಲ್ಲಿ ಶ್ರೀಮಂತರು ಪಟ್ಟಭದ್ರಾ ಹಿತಾಸಕ್ತಿಗಳು ವಶಪಡಿಸಿಕೊಂಡಿರುವ ದಲಿತರ ಜಮೀನುಗಳನ್ನು ದೀನ ದುರ್ಬಲರಿಗೆ ಹಂಚಿಕೆ ಮಾಡಬೇಕು.
ಆದಿ ಜಾಂಬವ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ನಿಗಮ ಮಂಡಳಿಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು, ಜೊತೆಗೆ ರಾಜಕೀಯ ಸ್ಥಾನಮಾನಗಳನ್ನು ನೀಡಬೇಕು.
ಹೀಗೆ ಹತ್ತು ಹಲವು ಬೇಡಿಕೆಗಳು ಹಾಗೂ ಹಕ್ಕು ಒತ್ತಾಯ ಗಳನ್ನೂ ಸರ್ಕಾರಕ್ಕೆ ಸಮುದಾಯದ ಸಂಘಟನೆಗಳಿಂದ ಸಲ್ಲಿಸಿ ಸರ್ಕಾರದ ಗಮನವನ್ನು ಸಹ ಸೆಳೆಯಲಾಯಿತು, ಪತ್ರಿಕೆಗೋಷ್ಠಿಯಲ್ಲಿ ಸಂಘಟನೆಯ ಹಲವು ಮುಖಂಡರು ಸಹ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೇ ಮನವಿ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಂಬುದ್ವೀಪ ಸಿದ್ದರಾಜು, ಬಿಆರ್ ಮುನಿರಾಜು, ಆರ್ ಕೆ ದೇವರಾಜು, ಜೀವನ ಹಳ್ಳಿ ನಾರಾಯಣ, ಲಕ್ಕ ಸ್ವಾಮಿ ಸೇರಿದಂತೆ ಸಂಘಟನೆಯ ಹಲವು ಪದಾಧಿಕಾರಿಗಳು, ಸ್ವಾಮೀಜಿ ಉಪಸ್ಥಿತರಿದ್ದರು.