ಬೆಂಗಳೂರು: ಆಟೋ ಚಾಲಕರಿಗೆ ಸದಾ ಬೆನ್ನೆಲುಬಾಗಿ ಇರುತ್ತೇನೆ, ಆದರೆ ಬೇಡಿಕೆಗಳ ಬಗ್ಗೆ ನಾನು ಮಾತನಾಡಲ್ಲ ಎಂದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಜಯನಗರದ ಶಾಲಿನಿ ಮೈದಾನದಲ್ಲಿ ಟಿವಿಎಸ್ ಹಾಗೂ ಪೀಸ್ ಆಟೋ ಸಂಘದಿಂದ ಕನ್ನಡ ರಾಜ್ಯೋತ್ಸವ ದಿ.ಶಂಕರ್ ನಾಗ್ ಅವರ ದಿನ ದಿನಾಚರಣೆ ಹಿನ್ನೆಲೆ 10ನೇ ವರ್ಷದ ಆಟೋ ರಿಕ್ಷಾ ದಿನಾಚರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರೆಡ್ಡಿ ಅವರು ಉದ್ಘಾಟನೆ ಮಾಡಿದರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಶಂಕರ್ ನಾಗ್ ಅವರು ಎಲ್ಲರಿಗೂ ರೋಲ್ ಮಾಡೆಲ್, ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆ ಹಾರಿಸಲಾಯಿತು, ಅವರ ಒಂದೆರಡು ಸಿನಿಮಾದಲ್ಲಿ ಆಟೋ ಚಾಲಕರು ಹೇಗಿರಬೇಕು ಎಂದು ತೋರಿಸಿಕೊಟ್ಟಿದ್ದಾರೆ, ಅವರ ಮಾರ್ಗದರ್ಶನದಲ್ಲಿ ಚಾಲಕರು ನಡೆದುಕೊಳ್ಳಬೇಕು, ಅವರೊಬ್ಬ ವಿಶೇಷ ನಟ, ಅವರು ಚಿಕ್ಕ ವಯಸ್ಸಿನಲ್ಲೇ ತೀರಿಹೋದರು, ಆದರೆ ಅವರ ಆಟೋ ಬಗ್ಗೆ ಇದ್ದ ಪ್ರೇಮ ವಿಶೇಷ, ನಿಮ್ಮ ಬೇಡಿಕೆಗಳನ್ನು ಬಗ್ಗೆ ನಾನು ಮಾತನಾಡಲ್ಲಾ, ನಿಮ್ಮ ಪರವಾಗಿ ಇರುತ್ತೇನೆ, ಎಸ್ಟು ಸಹಾಯ ಮಾಡಲು ಹಾಗುತ್ತೋ ಅಷ್ಟು ಮಾಡುತ್ತೇನೆ ಎಂದು ತಿಳಿಸಿದರು.
ಆಟೋ ಚಾಲಕರು ಪ್ರಾಮಾಣಿಕವಾಗಿ ಹೆಸರು ಮಾಡಿರುತ್ತಾರೊ ಅಂತಹ ಪುರುಷ ಹಾಗೂ ಮಹಿಳಾ 7 ಜನ ಆಟೋ ಚಾಲಕರಿಗೆ ಚಿನ್ನದ ಪದಕ ನೀಡಲಾಯಿತು, 3 ಜನ ಮಹಿಳೆಯರು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಚಿನ್ನದ ಪದಕ ನೀಡಿ ಗೌರವಿಸಲಾಯಿತು, ಅಲ್ಲದೆ ಮಹಿಳಾ ಚಾಲಕರಿಗೆ ರಾಮಲಿಂಗಾರೆಡ್ಡಿ ಅವರು ಸ್ವತಃ ಸಮವಸ್ತ್ರವನ್ನೂ ಸಹಾ ನೀಡಲಾಯಿತು.
ಸಂಘದ ಅಧ್ಯಕ್ಷ ರಘು ಮಾತನಾಡಿ, ಪ್ರತಿ ವರ್ಷವೂ ಸಹಾ ಶಂಕರ್ ನಾಗ್ ಅವರ ಜನ್ಮ ದಿನದ ಅಂಗವಾಗಿ ವಿಶೇಷ ಕಾರ್ಯಕ್ರಮ ಮಾಡಲಾಗುತ್ತದೆ, ಮುಂದಿನ ವರ್ಷ ಅರಮನೆ ಮೈದಾನದಲ್ಲಿ ದೊಡ್ಡ ಕಾರ್ಯಕ್ರಮ ಮಾಡಲಾಗುತ್ತದೆ. ಎಲ್ಲಾ ಅಟೋ ಚಾಲಕರಿಗೆ ಮನವಿ ಎಂದರೆ ಗ್ರಾಹಕರಲ್ಲಿ ಮನವಿ ಮಾಡಿದರು.
ಸಮಾಜ ಸೇವಕಿ ಕವಿತಾ ಶ್ರೀನಾಥ್ ಅವರು ಮಾತನಾಡಿ, ಚಾಲಕರ 10 ಜನ ಮಕ್ಕಳಿಗೆ 30 ಸಾವಿರ ನೀಡಿದರು, ಆಟೋ ಚಾಲಕರ ಪರವಾಗಿ ಯಾವಾಗಲೂ ನಿಲ್ಲುತ್ತೇನೆ, ಮುಂದಿನ ದಿನಗಳಲ್ಲಿ ಆಟೋ ಚಾಲಕರಿಗೆ ನನ್ನಿಂದ ಎಸ್ಟು ಸಹಾಯ ವಾಗುತ್ತೂ ಅಷ್ಟು ಸಹಾಯ ಮಾಡುತ್ತೇನೆ ಎಂದರು.
ರಘು,ಪೀಸ್ ಆಟೋದ ಅಧ್ಯಕ್ಷ, ಆನಂದ್ , ನಾಗರಾಜು, ಶುವ ಶಂಕರ್, ಕವಿತಾ ಶ್ರೀನಾಥ್, ಯಮುನಾ, ಸಿಟ್ರಿಕ್ , ಗೇಲ್ ಸಂಸ್ಥೆ ಜ .ಮ್ಯಾ.ಜಯರಾಂ ಟಿವಿಎಸ್ ಸಂಸ್ಥೆಯ, ಟಿವಿಎಸ್ ಸಂಸ್ಥೆಯ ಇವಿಪಿ ಮತ್ತು ಕಮರ್ಷಿಯಲ್ ಬ್ಯುಸಿನೆಸ್ ನ ಮುಖ್ಯಸ್ಥ,ರಜತ್ ಗುಪ್ತ, ಜೈಚಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.