ಬೆಂಗಳೂರು: ಬೆಂಗಳೂರು ನಗರವನ್ನು ಸ್ವಚ್ಚ ಸುಂದರವಾಗಿ ಇಡಲು ಪೌರ ಕಾರ್ಮಿಕರ ಶ್ರಮದ ಪಾತ್ರ ಬಹಳ ಮುಖ್ಯವಾಗಿದೆ, ಅವರನ್ನು ಗೌರವದಿಂದ ಕಾಣಬೇಕು ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಪೌರ ಕಾರ್ಮಿಕರ ಬಗ್ಗೆ ಇರುವ ಅಭಿಮಾನ, ಕಾಳಜಿಯನ್ನು ವ್ಯಕ್ತಪಡಿಸಿದರು.
ಬಿಟಿಎಂ ಲೇಔಟ್ ಕ್ಷೇತ್ರದ ಸದ್ದುಗುಂಟೆ ಪಾಳ್ಯದ ಪಾರ್ಕ್ ಮುಂದೆ ನೂರಾರು ಜನ ಪೌರ ಕಾರ್ಮಿಕರಿಗೆ ದೀಪಾವಳಿ ಹಬ್ಬದ ಹಿನ್ನೆಲೆ ಸಿಹಿ ತಿಂಡಿ, ಹೊಸ ಬಟ್ಟೆ,ಕಂಚಿನ ದೀಪ ಉಡುಗೊರೆ ನೀದುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕವಿತಾ ಶ್ರೀನಾಥ್ ಹಾಗೂ ಶ್ರೀನಾಥ್ ಅವರು ಕವಿತಾ ಕಲ್ಪತರು ಸಂಸ್ಥೆಯ ತಂಡದಿಂದ ವಿವಿಧ ರೀತಿಯಲ್ಲಿ ಎಲೆ ಮರೆ ಕಾಯಿಗಳಂತೆ ಸಮಾಜವೇ ಮಾಡಿಕೊಂಡು ಬರುತ್ತಿದ್ದಾರೆ,
ಅವರ ಕಾರ್ಯಗಳೆಲ್ಲವೂ ಪ್ರತಿಯೊಂದು ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತದೆ. ಕವಿತಾ ಶ್ರೀನಾಥ್ ಹಾಗೂ ಶ್ರೀನಾಥ್ ಅವರಿಗೆ ಪೌರ ಕಾರ್ಮಿಕರಿಗೆ ಇರುವ ಕಾಳಜಿ ಅವರು ಮಾಡುತ್ತಿರುವ ಕಾಯಕದಲ್ಲಿ ಎದ್ದು ಕಾಣುತ್ತದೆ, ಕವಿತಾ ಅವರ ಕುಟುಂಬದವರ ಕಾರ್ಯ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.
ಇಡೀ ನಗರವನ್ನು ಸ್ವಚ್ಛವಾಗಿ ಇಡಲು ಪೌರ ಕಾರ್ಮಿಕರ ಶ್ರಮ ಬಹಳ ದೊಡ್ಡದು, ಅವರನ್ನು ನಾವು ಗೌರವದಿಂದ ಕಾಣಬೇಕು ಎಂದರು. ಪೌರ ಕಾರ್ಮಿಕರ ಬಗ್ಗೆ ಶ್ರೀನಾಥ್ ಕುಟುಂಬಕ್ಕೆ ಇದ್ದ ಕಾಳಜಿ ಇಲ್ಲಿ ನೋಡಬಹುದು, ನೂರ್ಕಾಲ ಅವರ ಕಾಯಕ ಮುಂದುವರೆಸಿಕೊಂಡು ಹೋಗಲಿ ಎಂದು ಹಾರೈಸಿದರು.
ಈ ವೇಳೆ ಕರ್ನಾಟಕ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಕವಿತಾ ಕಲ್ಪತರು ಫೌಂಡೇಶನ್ ನ ಸಂಸ್ಥಾಪಕರಾದ ಡಾ.ಕವಿತಾ ಶ್ರೀನಾಥ್ ಮಾತನಾಡಿ, ಫೌಂಡೇಶನ್ ವತಿಯಿಂದ ಪ್ರತಿ ವರ್ಷ ಹಬ್ಬಗಳಿಗೆ ಸಿಹಿ ತಿಂಡಿ ಹಾಗೂ ಹೊಸ ಬಟ್ಟೆ ನೀಡುವ ಪರಿಪಾಠವನ್ನು ಮಾಡಿಕೊಂಡು ಬರುತ್ತಿದ್ದೇವೆ, ದೀಪಾವಳಿಯಂದು ಸಹಾ ಪೌರ ಕಾರ್ಮಿಕರಿಗೆ ಕಾಳಜಿ ಇರುವುದರಿಂದ ವಿಶೇಷವಾಗಿ ಉಡುಗೊರೆಯನ್ನು ನೀಡಿ ಗೌರವಿಸುವ ಕೆಲಸವನ್ನು ಮಾಡುತ್ತಿದ್ದೇನೆ.
ಪ್ರತಿಯೊಂದು ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ ಅವರ ಮಾರ್ಗ ದರ್ಶನದಲ್ಲಿ ನಡೆಸಿಕೊಂಡು ಬರುತ್ತಿದ್ದೇವೆ ಎಂದರು. ನನ್ನ ಕಾರ್ಯಗಳಿಗೆ ಇಡೀ ಕುಟುಂಬವೇ ನನ್ನ ಬೆನ್ನ ಹಿಂದೆ ನಿಂತಿದೆ, ಅವರ ಸಹಕಾರ ಇಲ್ಲದಿದ್ದರೆ ಏನು ಮಾಡಲು ಸಾಧ್ಯವಾಗುತ್ತಿರಲಿಲ್ಲ, ಅವರು ನನಗೆ ಶಕ್ತಿಯಾಗಿ ನಿಂತಿದ್ದಾರೆಂದು ತಿಳಿಸಿದರು.
ಇನ್ನು ಇದೇ ವೇಳೆ ಪಟಾಕಿ ಹಚ್ಚಿ ಮಾಲಿನ್ಯ ಮಾಡುವ ಬದಲು ದೀಪಾಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ ಎಂದು ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಎಸ್ ಎಂಟರ್ಪ್ರೈಸಸ್ ಮಾಲೀಕರಾದ ಶ್ರೀನಾಥ್ ಅವರು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಕವಿತಾ ಕಲ್ಪತರು ತಂಡದವರು, ಬಿಬಿಎಂಪಿ ಪೌರ ಕಾರ್ಮಿಕರು ಇದೇ ವೇಳೆ ಉಪಸ್ಥಿತರಿದ್ದರು.