ಬೆಂಗಳೂರು: ನಾವು ಒಂದು ಸಂಸ್ಥೆಯ ಉತ್ಪನ್ನಗಳಿಗೆ ರಾಯಬಾರಿ ಆಗುವ ಮುನ್ನ ಅದರ ಆಳ ಅಗಲ, ವಸ್ತುನಿಷ್ಟತೆ ನೋಡಿಕೊಂಡು ಜಾಹೀರಾತಿನಲ್ಲಿ ನಟಿಸಬೇಕು ಎಂದು ನಟ ಹಾಗೂ ಇಂದಿರಾಸ್ ಆಹಾರ ಉತ್ಪನ್ನ ಸಂಸ್ಥೆಯ ರಾಯಭಾರಿ ನೀನಾಸಂ ಸತೀಶ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ವಿವಿಧ ರುಚಿಕರ ಇಂದಿರಾಸ್ ರಸಂ ಪೇಸ್ಟ್ ಉತ್ಪನ್ನಗಳನ್ನು. ಬಿಡುಗಡೆ ಮಾಡಿ ಮಾತನಾಡಿದ ಅವರು, ಸಮಾಜದ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು ಒಂದು ಸಂಸ್ಥೆಯ ಉತ್ಪನ್ನಗಳಿಗೆ ರಾಯಭಾರಿಯಾಗಿ ಹೋಗುವ ಮೊದಲು ಅದರ ಪ್ರಾಮಾಣಿಕತೆಯನ್ನು ನೋಡಬೇಕು, ಒಂದು ವೇಳೆ ಉತ್ಪನ್ನವು ಸರಿಯಿಲ್ಲದಿದ್ದರೆ ಸಮಾಜದಲ್ಲಿ ನಾವು ಉತ್ತರವನ್ನು ಕೊಡಬೇಕಾಗುತ್ತದೆ, ಹಾಗೂ ನಾನು ಇಂದಿರಾಸ್ ನ ಎಲ್ಲಾ ಆಹಾರದ ಉತ್ಪನ್ನಗಳನ್ನು ಮನೆಗೆ ತರಿಸಿಕೊಂಡು ರುಚಿಯನ್ನು ನೋಡಿದ ನಂತರ ಅದರಲ್ಲಿ ನಾನು ಒಬ್ಬನಾಗಿ ಭಾಗಿಯಾಗುದ್ದೇನೆ ಎಂದರು.
ಎಫ್ಕೆಸಿಸಿಐ ಕರ್ನಾಟಕ ರಾಜ್ಯ ಮಂಡಳಿಯ ಅಧ್ಯಕ್ಷ ಮತ್ತು ಇಂದಿರಾ ಸಂಸ್ಥೆಯ ಸಲಹೆಗಾರ ಉಲ್ಲಾಸ್ ಕಾಮತ್ ಮಾತನಾಡಿ, ನಾನು ಹಲವು ವರ್ಷಗಳಿಂದ ಇಂದಿರಾ ಫುಡ್ ಸಂಸ್ಥೆಯನ್ನು ಬಲ್ಲವನಾಗಿದ್ದೇನೆ “ನಾನು ಬ್ರಾಂಡ್ ಅನ್ನು ಇಷ್ಟಪಡುತ್ತೇನೆ. ಇದು, ಧೈರ್ಯ ಮತ್ತು ದೃಢನಿಶ್ಚಯದ ಮೂಲಕ ಮಾರುಕಟ್ಟೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ಜನರಿಗೆ ಇಷ್ಟಪಡುವುದನ್ನು ನೀಡಿದೆ, ಸಮಗ್ರ ಆರೋಗ್ಯಕರ, ಬಳಸಲು ಸುಲಭ, ಗುಣಮಟ್ಟದ, ಸ್ಥಳೀಯ ಅಹಾರವು ನಿಮ್ಮ ಜೀವ ಮತ್ತು ಹೊಟ್ಟೆಯನ್ನು ತುಂಬಿಸುತ್ತಿದೆ. ನಾವೀಗ ಒಟ್ಟಾಗಿ ಈ ಯಶಸ್ಸಿನ ಕಥೆಯ ಪ್ರಯಾಣವನ್ನು ಮುನ್ನಡೆಸೋಣ” ಎಂದು ಸಲಹೆಯಿತ್ತರು.
ಇಂದಿರಾ ಫುಡ್ ಸಂಸ್ಥೆಯ ಅಧ್ಯಕ್ಷೆ ಇಂದಿರಾ ಮಾತನಾಡಿ, ಸಣ್ಣ ಸಣ್ಣ ಅಡುಗೆ ಉತ್ಪನ್ನಗಳನ್ನು ತಯಾರಿಸಿಕೊಂಡು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ, ಅದಕ್ಕೆ ನಾಡಿನ ಜನತೆ ಕಾರಣ, ಆಧುನಿಕ ತಂತ್ರಜ್ಞಾನ,ಹೊಸ ಉತ್ಪಾದಕತೆಯನ್ನು ಬಳಸಿಕೊಂಡು ವಿವಿದ ರೀತಿಯ ಆಹಾರಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ, ಈಗಾಗಲೇ ರಾಗಿ ಉತ್ಪನ್ನ, ರಡಿ ಟು ಈಟ್ ,ವಿವಿಧ ತರದ ಪೇಸ್ಟ್ ಗಳು, ನೈಸರ್ಗಿಕ ಮಸಾಲೆಗಳು ಸಂಸ್ಥೆಯಿಂದ ತಯಾರಿಸಿದ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಅತಿ ವೇಗವಾಗಿ ಮಾರಾಟವಾಗುತ್ತಿವೆ, ನಾವು ಗುಣಮಟ್ಟಕ್ಕೆ ಮೊದಲು ಆಧ್ಯತೆ ನೀಡಲಾಗುತ್ತದೆ, ಜನರ ಆರೋಗ್ಯದ ದೃಷ್ಟಿಯಲ್ಲಿ ಇರಿಸಿಕೊಂಡು ಆಹಾರವನ್ನು ತಯಾರಿಸಲಾಗುತ್ತದೆ ಎಂದರು.
ವಿಸ್ತರಣಾ ಯೋಜನೆಗಳ ಬಗ್ಗೆ ಮಾತನಾಡಿದ ಇಂದಿರಾ ಫುಡ್ ನ ನಿರ್ದೇಶಕ ವಿಜಯ್.ಸಿ, ಇಂದಿರಾ ಫುಡ್ ಮುಂದಿನ ಬೆಳವಣಿಗೆ ಎದುರಿಸಲು ಬಲವಾದ ನೆಲೆಯಲ್ಲಿದೆ. ಸ್ಥಳೀಯ ಬ್ರಾಂಡ್ಡ್ ಈ ಕ್ಷೇತ್ರದಲ್ಲಿ ಎತ್ತರಕ್ಕೆ ಏರಿರುವುದನ್ನು ನೋಡಲು ಸಂತೋಷವಾಗಿದೆ. ನಾಡಿನ ಜನರಿಗೆ ಆರೋಗ್ಯಕರವಾದ ಆಹಾರ ನೀಡುವುದೇ ನಮ್ಮ ಮುಖ್ಯ ಗುರಿಯಾಗಿದೆ, ಮಾರುಕಟ್ಟೆಯನ್ನೂ ಅರ್ಥ ಮಾಡಿಕೊಂಡು, ಜನರಿಗೆ ಇಷ್ಟವಾಗುವ ರೀತಿ ಆಹಾರ ಉತ್ಪನ್ನಗಳನ್ನು ನೀಡಲಾಗಿದೆ, ಸ್ವದೇಶದಲ್ಲಿ ಉತ್ಪನ್ನಗಳು ತಯಾರಾಗುತ್ತಿದ್ದು, ಇಲ್ಲಿಯೇ ಮಾರಾಟ ಮಾಡಲಾಗುತ್ತಿದೆ, ಬಳಸಲು ಸುಲಭ,ಗುಣಮಟ್ಟದಿಂದ ಕೂಡಿದ್ದು, ವಾರ್ಷಿಕ 45 ಕೋಟಿ ವಹಿವಾಟು ಹೊಂದಿದೆ, ಹೊಸ ಉತ್ಪನ್ನಗಳನ್ನು ವೇಗವಾಗಿ ವಿಸ್ತರಿಸಲು ಮುಂದಾಗಿದ್ದೇವೆ, ಸಂಸ್ಥೆಯು 250 ಜನರಿಗೆ ಉದ್ಯೋಗ ನೀಡಿದೆ, ಯೋಜನೆ ವಿಸ್ತರಣೆ ಭಾಗವಾಗಿ ಮುಂದೆ 100 ಜನರಿಗೆ ಕೆಲಸ ಕೊಡಲು ಮುಂದಾಗಿದೆ ಎಂದು ತಿಳಿಸಿದರು.
ಇಂದಿರಾ ವುಡ್ ಪ್ರೈವೇಟ್ ಲಿಮಿಟೆಡ್ ನಾಲ್ಕು ಉತ್ಪನ್ನ ವಿಭಾಗಗಳಲ್ಲಿ ತನ್ನ ವ್ಯವಹಾರವನ್ನು ನಡೆಸುತ್ತಿದೆ. ರಾಗಿ ಉತ್ಪನ್ನಗಳು, ಹುಣಸೆ, ಸಾಂದ್ರಣ ಮತ್ತು ಟೊಮೆಟೊ ಪೇಸ್ಟ್ಗಳು, ಇನ್ಸ್ಟಂಟ್ ರಸಂ ಪೇಸ್ಟ್ಗಳು, ಕೆಚಪ್, ಜಾಮ್ ಮತ್ತು ಉಪ್ಪಿನಕಾಯಿ ಇಂದಿರಾ ಪುಡ್ಸ್ ಇದಿಗ ಇಂದಿರಾಸ್, ಸ್ವಿಟ್ ಮತ್ತು ಪಿಂಗಾಣಿಗಳೆಂಬ 3 ಬ್ಯಾಂಡ್ಗಳನ್ನು ಹೊಂದಿದ್ದು, ಅದರ ಅಡಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಕಂಪನಿಯು ಪ್ಯಾಕೇಜ್ ಮಾಡಿದ ಜನಪ್ರಿಯ ಆಹಾರ ಬ್ಯಾಂಡ್ಗಳಿಗೆ ನಿರ್ದಿಷ್ಟ ಪೇಸ್ಟ್ ಆಧಾರಿತ ಉತ್ಪನ್ನಗಳೊಂದಿಗೆ ಖಾಸಗಿ ಲೇಬಲ್ ವಿಭಾಗದಲ್ಲಿಯೂ ಸಹ ಮಾರಾಟದಲ್ಲಿದೆ ಮತ್ತು ಯುಎಸ್, ಯುಕೆ, ನೆದರ್ಲ್ಯಾಂಡ್ಸ್, ಜರ್ಮನಿ, ನ್ಯೂಜಿಲೆಂಡ್ ಮತ್ತು ಮಧ್ಯಪ್ರಾಚ್ಯದಂತಹ ದೇಶಗಳಿಗೆ ಬೃಹತ್ ಉತ್ಪನ್ನಗಳು ಮತ್ತು ಸ್ವಂತ ಉತ್ಪನ್ನಗಳನ್ನು ರಫ್ತು ಮಾಡುತ್ತದೆ, ಪ್ರಸ್ತುತ ಎಲ್ಲಾ ಉತ್ಪನ್ನಗಳನ್ನು ಬೆಂಗಳೂರಿನ ಹೊರವಲಯದಲ್ಲಿರುವ ಯಲಚೇನಹಳ್ಳಿ ಮತ್ತು ಜಿಗಣಿಯಲ್ಲಿರುವ ಎರಡು ಅತ್ಯಾಧುನಿಕ ತಂತ್ರಜ್ಞಾನವುಳ್ಳ ಘಟಕಗಳಲ್ಲಿ ತಯಾರಿಸಲಾಗುತ್ತದೆ.