ಬೆಂಗಳೂರು: ಗಾರುಡಿಗ ಸಿನೆಮಾದ ದ್ವನಿ ಸುರುಳಿ ಬಿಡುಗಡೆಯಾಗಿದ್ದು, ಎಂವಿ ಫಿಲ್ಮ್ ಅವರ banner ಅಡಿಯಲ್ಲಿ ಚಿತ್ರ ಮೂಡಿಬರುತ್ತಿದೆ. ಸಿನಿಮಾದ ಮೊದಲ ಶೋಕಿಲಾಲ ಹಾಡು ಇದೀಗ ಬಿಡುಗಡೆಯಾಗಿದೆ.
ನಿರ್ಮಾಪಕ ಡಾ.ವೆಂಕಟಸ್ವಾಮಿ ಕವಿತಾ ಶ್ರೀನಾಥ್ ಅವರ ಸಂಬಂಧಿ, ಅವರು ಬಿಇ, ಎಂ ಬಿ ಎ, ಎಲ್ ಎಲ್ ಬಿ,phd, ಮುಗಿಸಿ, ಹಲವು ಕಡೆ ಕೆಲಸ ಮಾಡಿರುವ ಅನುಭವ ಇದೆ, ಇವೆಲ್ಲದರ ಮಧ್ಯೆ ಸಿನಿಮಾದ ಮೇಲೆ ಆಸಕ್ತಿ ಬಂದಿದ್ದೆ ವಿಶೇಷ ವಾಗಿದೆ.
ಚಾಮರಾಜಪೇಟೆಯ ಕಲಾವಿದರ ಸಂಘದ ಸಭಾಂಗಣದಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಂತ್ರ ಡಾ.ವೆಂಕಟಸ್ವಾಮಿ ಮಾತನಾಡಿ ನಾನು ವಿಜ್ಞಾನಿಯಾಗಿ ಕೆಲಸ ಮಾಡುತ್ತಿದೆ, ಸಡನ್ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟೆ, ಗಾರುಡಿಗ ಸಿನಿಮಾದ ನಿರ್ಮಾಪಕರು ಹಾಗೂ ನಟ ನನ್ನ ಹತ್ತಿರ ಬಂದರು, ಸಿನಿಮಾ ಇದೆ ನೋಡಿ ಸಹಾಯ ಮಾಡಿ ಎಂದು ಮುಂದೆ ಬದ್ರು, ಆದ್ರೆ ನನಗೆ ಸಿನಿಮಾ ಬಗ್ಗೆ ಏನಂದ್ರೆ ಏನು ಗೊತ್ತಿಲ್ಲ, ಏನು ಮಾಡುವುದು ತಿಳಿಯದಾಗಿತ್ತು, ನನಗೆ ಹೊಸ ಅನುಭವ ಎಂದು ತಿಳಿಸಿದರು.
ಗಾರುಡಿಗ’ ಸಿನಿಮಾದಲ್ಲಿ ಹಳ್ಳಿಯ ಯುವಕನಾಗಿ ಮಾಗಡಿ ಮೂಲದ ರುದ್ವಿನ್ ಅವರು ನಟಿಸಿದ್ದಾರೆ.ನಾಯಕಿಯಾಗಿ ಎರಡು ಶೇಡ್ಗಳು ಇರುವ ಪಾತ್ರದಲ್ಲಿ ಮಾನಸಾ ನಟಿಸಿದ್ದಾರೆ. ಅರ್ಚನಾ, ಅರ್ಜುನ್, ಸೋನು, ಮೋಹನ್, ಗಿರೀಶ್, ಸಂಜು ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಸೂಪರ್ ಸ್ಟಾರ್’ ರಜನಿಕಾಂತ್ ಅವರ ಆಪ್ತ ಗೆಳೆಯರಾದ ರಾಜ್ ಬಹದ್ದೂರ್ (Raj Bahadur) ಅವರು ಸಮಾರಂಭಕ್ಕೆ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದು ವಿಶೇಷ. ವಕೀಲರಾಗಿರುವ ಡಾ. ಎಂ. ವೆಂಕಟಸ್ವಾಮಿ ಅವರು ‘ಎಂ.ವಿ. ಫಿಲ್ಮ್ಸ್’ ಸಂಸ್ಥೆಯ ಮೂಲಕ ‘ಗಾರುಡಿಗ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಿಧ ಆರ್. ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಏನು ಈ ಸಿನಿಮಾದ ಕಥೆ ಎಂಬ ಬಗ್ಗೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ‘ರೈತನಾಗಿದ್ದವನು ನಗರಕ್ಕೆ ಬಂದು ತನ್ನ ಬುದ್ಧಿಶಕ್ತಿಯ ಬಲದಿಂದ ಒಂದು ಚಕ್ರವ್ಯೂಹವನ್ನು ಯಾವ ರೀತಿ ಭೇದಿಸುತ್ತಾನೆ ಎಂಬುದು ಈ ಚಿತ್ರದಲ್ಲಿದೆ’ ಎಂದು ತಂಡವರು ಹೇಳಿಕೊಂಡಿದ್ದಾರೆ.
ಎಂ. ಸಂಜೀವ್ ರಾವ್ ಅವರು ಸಂಗೀತ ನಿರ್ದೇಶನ, ಅನಿರುದ್ದ್-ಭರತ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಭಾರ್ಗವ್-ಚೆಲುವಮೂರ್ತಿ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ವಿಧ ಆರ್.ಎಂ. ಸಂಜೀವ್ ರಾವ್ ಸಾಹಿತ್ಯ ಬರೆದಿದ್ದಾರೆ.
ಕಾರ್ಯಕ್ರಮದಲ್ಲಿ ಸಿನಿಮಾದ ನಿರ್ದೇಶಕ, ಕಲಾವಿದರು, ಸಿಬ್ಬಂದಿ ವರ್ಗ,ಸಹಾ ಕಲಾವಿದರು, ಕವಿತಾ ಕಲ್ಪತರು ಸಂಸ್ಥೆಯ ಅಧ್ಯಕ್ಷೆ ಕವಿತಾ ಶ್ರೀನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.