ಚಿತ್ರದುರ್ಗ: ಲೈಂಗಿಕ ದೌರ್ಜನ್ಯದ ಪ್ರಕರಣದ ಆರೋಪಿಯಾಗಿ ಜೈಲಿನಲ್ಲಿದ್ದ ಚಿತ್ರದುರ್ಗದ ಮುರುಘಾಮಠದ ಡಾ. ಶಿವಮೂರ್ತಿ ಸ್ವಾಮೀಜಿಗೆ ಇದ್ದಿಗ ಷರತ್ತು ಬದ್ದ ಜಾಮೀನು ನೀಡಿ ಕೋರ್ಟ್ ರಿಲೀಸ್ ಮಾಡಿದೆ.
ಮುರುಘಾ ಮಠದ ಶ್ರೀಗಳಿಗೆ 7 ಶರತ್ತುಗಳನ್ನ ವಿಧಿಸಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿ ಬಿಡುಗಡೆ ಮಾಡಿದೆ. ಅದರಲ್ಲಿ ಶ್ರೀಗಳು ಚಿತ್ರದುರ್ಗಕ್ಕೆ ಬರುವಂತಿಲ್ಲ, ಪಾಸ್ಪೋರ್ಟ್ ಕೋರ್ಟ್ ವಶಕ್ಕೆ, ಹಿಂದೆ ಮಾಡಿದ ಕೃತ್ಯಗಳನ್ನು ಮಾಡುವಂತಿಲ್ಲ, ಇಬ್ಬರ ಶ್ಯುರಿಟಿ ಕೊಡಬೇಕು,ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣಕ್ಕೆ ಹಾಜರಾಗಬೇಕು, ಯಾವುದೇ ಸಾಕ್ಷ್ಯ ನಾಶ ಮಾಡುವಂತಿಲ್ಲ, ಬೆದರಿಕೆ ಹಾಕುವಂತಿಲ್ಲ ಎಂದು ಷರತ್ತುಗಳನ್ನು ವಿಧಿಸಿದೆ.
ಶ್ರೀಗಳಿಗೆ ಬುಧವಾರವೇ ಜಾಮೀನು ಸಿಗಬೇಕಾಗಿತ್ತು, ಆದರೆ ಅದನ್ನು ಗುರುವಾರಕ್ಕೆ ಮುಂದೂಡಿ ಇಂದು ಜಾಮೀನು ನೀಡಿ ಬಿಡುಗಡೆ ಮಾಡಿದೆ.
ಲೈಂಗಿಕ ದೌರ್ಜ್ಯನಕ್ಕೆ ಸಂಬಂಧಿಸಿದಂತೆ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಿ ಚಿತ್ರದುರ್ಗ ಜೈನಲ್ಲಿ ಬಂಧಿಯಾಗಿದ್ದರು.