ಬೆಂಗಳೂರು: ಉಕ್ಕಿನ ಮಹಿಳೆ, ದೇಶದ ಮೊದಲ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು 106ನೇ ಹುಟ್ಟುಹಬ್ಬ ಜೆಪಿ ನಗರದಲ್ಲಿ ಕಾಂಗ್ರೆಸ್ ಮುಖಂಡರು ವಿಶೇಷವಾಗಿ ಆಚರಣೆ ಮಾಡಿದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಗುರುದೇವ್ ಅವರು ಕ್ಷೇತ್ರದ ಕಾಂಗ್ರೆಸ್ ಕಚೇರಿಯಲ್ಲಿ 300ಕ್ಕಿಂತ ಹೆಚ್ಚು ಮಹಿಳೆಯರಿಗೆ ಸೀರೆಗಳ ನ್ನು ಹಂಚುವ ಮೂಲಕ ಇಂದಿರಾ ಗಾಂಧಿ ಅವರ ಬರ್ತಡೆಯನ್ನು ವಿಭಿನ್ನವಾಗಿ ಆಚರಿಸಿದರು. ಅದಕ್ಕಿಂತ ಮೊದಲು ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಇದೇ ವೇಳೆ ಇಂದಿರಾಗಾಂಧಿ ಅವರ ಕೆಲಸ ಕಾರ್ಯಗಳು, ಅವರು ಮಾಡಿರುವ ಜ ನೋಪಯೋಗಿ ಕೆಲಸಗಳು, ಬಡವರು, ಕಾರ್ಮಿಕರ ಬಗ್ಗೆ ಇದ್ದ ಕಾಳಜಿಯನ್ನು ಕಾರ್ಯಕರ್ತರಿಗೆ, ಸಾರ್ವಜನಿಕರಿಗೆ ತಿಳಿಸಿದರು.
ದೇಶ, ರಾಜ್ಯದ ಮಹಿಳೆಯರು ಇಂದಿರಾ ಗಾಂಧಿಯವರ ಸದ್ಭಾವನೆಗಳನ್ನು ಬೆಳಸಿಕೊಂಡು ದೇಶಕ್ಕೆ, ರಾಜ್ಯಕ್ಕೆ ಕೊಡುಗೆ ನೀಡುವ ಕೆಲಸ ಮಾಡಬೇಕೆಂದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರೂ, ಸಮಾಜ ಸೇವಕರು, ಉದ್ಯಮಿಗಳಾದ ಸು ನಿಲ್. ಅಪಾರವಾದ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.