ಬೆಂಗಳೂರು: ರಾಜ್ಯದಲ್ಲಿಯೇ ಬೆಂಗಳೂರಿನ ಬಿಟಿಎಂ ವಿಧಾನಸಾಭಾ ಕ್ಷೇತ್ರದ ಆಡುಗೋಡಿಯ ಸಿಎಆರ್ ವಸತಿ ಸಮುಚ್ಚಯದಲ್ಲಿರುವ ಸರ್ಕಾರಿ ಪ್ರಾಥಮಿಕ ಮಾದರಿ ಶಾಲೆ ಇತರೆ ಸರ್ಕಾರಿ ಶಾಲೆಗಳಿಗಿಂತ ಭಿನ್ನವಾಗಿದೆ ಎಂದು ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಶಾಲೆ ಆಡಳಿತ ಮಂಡಳಿಯ ಸದಸ್ಯ ಬಿ ಮೋಹನ್ ಅವರು ತಿಳಿಸಿದರು.
ರಾಜ್ಯದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಶಾಲೆಗೆ ಭೇಟಿ ನೀಡಿ, ಶಾಲೆಯ ಮಾದರಿಯಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯಲ್ಲಿರುವ ಆಧುನಿಕ ಪ್ರಜೆಕ್ಟರ್ ಅಡವಳಿಕೆ, ವಿಜ್ಞಾನ ಪ್ರಯೋಗಾಲಯ. ಮಕ್ಕಳಿಗೆ ಕಂಪ್ಯೂಟರ್ ಕಲಿಸುವ ಕೇಂದ್ರ, ಈಜು ಕೊಳ,ಮಕ್ಕಳಿಗೆ ಆಟವಾಡಲು ಬೃಹತ್ ಮೈದಾನ. ಹೀಗೆ ಹತ್ತು ಹಲವು ಅಭಿವೃದ್ಧಿಯಾಗಿರುವುದನ್ನು ಕಂಡು ಮಂತ್ರಿಗಳು ಶಹಭಾಷ್ ಹೇಳಿದರು.
ಇದೇ ವೇಳೆ ಮೋಹನ್ ಮಾತನಾಡಿ, ಬಿಟಿಎಂ ಕ್ಷೇತ್ರದ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗರೆಡ್ಡಿಯವರು ಈಗಾಗಲೇ ಕ್ಷೇತ್ರದಲ್ಲಿ 22 ಸರ್ಕಾರಿ ಶಾಲೆಗಳ ನ್ನು ದತ್ತು ಪಡೆದುಕೊಂಡಿದ್ದು, ಒಂದೊಂದಾಗಿ ಅಭಿವೃದ್ಧಿ ಮಾಡಲು ಕ್ಷೇತ್ರದ ಮುಖಂಡರಿಗೆ ಸೋಚನೆಯನ್ನು ನೀಡಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆ ರಾಜ್ಯದಲಿ ಯೇ ಮಾದರಿಯನ್ನಾಗಿ ಮಾಡಲಾಗಿದೆ, ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಯನ್ನು ಮಾಡಲಾಗಿದೆ. ಇದು ರಾಜ್ಯದಲ್ಲಿಯೇ ಎಲ್ಲಿಯೂ ಇಂತಹ ಸೌಲಭ್ಯಗಳು ಕಾಣಬರುವುದಿಲ್ಲ ಎಂದರು.
ಆಡುಗೋಡಿಯ ಪೊಲೀಸ್ ಕ್ವಾರ್ಟಸ್ ನಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಹಾಗೂ ಇಂಗ್ಲೀಷ್ ಮಾದ್ಯಮದಲ್ಲಿದ್ದು, ಯಾವುದೇ ಜಾತಿಬೇದ, ವರ್ಗ.ತಾರತಮ್ಯ ಮಾಡದೆ ಸಮಾಜದ ಕಟ್ಟಕಡೆಯ ವರ್ಗಕ್ಕೂ ಶಿಕ್ಷಣ ಕೊಡುವ ಉದ್ದೇಶದಿಂದ ರಾಜ್ಯದಲ್ಲಿಯೇ ಮಾದರಿ ಶಾಲೆಯನ್ನಾಗಿ ಮಾಡಲಾಗಿದೆ. ಅದೇ ರೀತಿ ಗುಣಮಟ್ಟದ ಶಿಕ್ಷಣ ಕೊಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಇನ್ನು ಇದೇ ವೇಳೆ ಪೊಲೀಸ್ ಕ್ವಾರ್ಟಸ್ ನಲ್ಲಿ ಸಾರ್ವಜನಿಕ ಗಂಥಾಲಯ ಇಲಾಖೆಯ ಅಡಿಯಲ್ಲಿ ಬರುವ ನಗರ ಕೇಂದ್ರ, ಕೇಂದ್ರ ವಲಯ ಗ್ರಂಥಾಲಯ ಆಡುಗೋಡಿ ಶಾಖೆಯನ್ನು ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಅವರು ಉದ್ಘಾಟ ನೆ ಮಾಡಿದರು. ಈ ವೇಳೆ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಬಸವರಾಜ್ ಹೊಸಮನಿ, ಶಾಲೆಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.