ನವದೆಹಲಿ: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸುಮಾರು 17 ದಿನಗಳಿಂದ ಸಿಲುಕಿದ್ದ 41 ಕಾರ್ಮಿಕರ ಯಶಸ್ವಿ ರಕ್ಷಣೆ ಕಾರ್ಯಾಚರಣೆಯನ್ನು ಮಂಗಳವಾರ ಮಾಡಲಾಗಿದ್ದು, ಎಲ್ಲರೂ ಆರೋಗ್ಯವಾಗಿ ಹೊರ ಬಂದಿದ್ದಾರೆ.
ಕಳೆದ 17 ದಿನಗಳಿಂದ ಉತ್ತರ ಕಾಶಿಯಲ್ಲಿ ಸುರಂಗಡಿಂದ ಮೊದಲು 12 ಜನರ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ, ಕಾರ್ಮಿಕರು ಹೊರ ಬರುತ್ತಿದ್ದಂತೆ ಉತ್ತರಾಖಂಡ ಮುಖ್ಯಮಂತ್ರಿ ಕಾರ್ಮಿಕರಿಗೆ ಪುಷ್ಪ ಮಾಲೆ ಹಾಕಿ ಬರಮಾಡಿಕೊಂಡು ಅಪ್ಪಿಕೊಂಡರು.
ಸುರಂಗದಿಂದ ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸುತ್ತಿದ್ದಂತೆ ಸ್ಥಳೀಯರು ಸಿಲ್ಕ್ಯಾರಾ ಸುರಂಗದ ಹೊರಗೆ ಕಾಯುತ್ತಿದ್ದರು, ಕಾರ್ಮಿಕರು ಹೊರಗಡೆ ಬರುತ್ತಿದ್ದಂತೆ ಸಂತೋಷಕ್ಕೆ ಪಾರವೇ ಇರಲಿಲ್ಲ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಸುರಂಗ ಕೊರೆಯುವಾಗ ಕುಸಿದ ಮಣ್ಣು, ಕಾರ್ಮಿಕರು ಲಾಕ್
ಉತ್ತರಾಖಂಡ ಉತ್ತರ ಕಾಶಿಯಲ್ಲಿ ಬೃಹತ್ ಬೆಟ್ಟದ ಕೆಳಭಾಗದಲ್ಲಿ ರೈಲು ಸಂಚಾರ ಮಾಡಲು ಸುರಂಗ ಕೊರೆಯುವಾಗ ಮಾರ್ಘ ಮಧ್ಯೆ ಸುರಂಗದ ಒಂದು ಭಾಗವು ನವೆಂಬರ್ 12 ರಂದು ಕುಸಿದಿದೆ, ಸುರಂಗದ ಸಿಲ್ಕ್ಯಾರಾ ಭಾಗದಲ್ಲಿ 60 ಮೀಟರ್ ವಿಸ್ತಾರದಲ್ಲಿ ಅವಶೇಷಗಳು ಬೀಳುತ್ತಿತ್ತು, ಇದರಿಂದಾಗಿ 41 ಕಾರ್ಮಿಕರು ನಿರ್ಮಾಣ ಹಂತದಲ್ಲಿರುವ ಸುರಂಗದೊಳಗೆ ಸಿಕ್ಕಿಹಾಕಿಕೊಂಡರು.
ಕಾರ್ಮಿಕರ ರಕ್ಷಣೆಗೆ 17 ದಿನಗಳ ಕಾಲ ಆಮ್ಲಜನಕವನ್ನು ಪೈಪ್ ಗಳ ಮೂಲಕ ಒದಗಿಸಿ, ವಿವಿಧ ರೀತಿಯ ಪ್ರಯತ್ನಗಳನ್ನು ಮಾಡಿದರು, ಆದರೆ ಅದ್ಯಾವುದೂ ಫಲ ಕೊಡಲಿಲ್ಲ, ಆಸ್ಟ್ರೇಲಿಯಾದ ಅಂತರಾಷ್ಟ್ರೀಯ ಸುರಂಗ ತಜ್ಞರು ಕಾರ್ಮಿಕರ ರಕ್ಷಣೆ ಮಾಡುವ ಹಿನ್ನೆಲೆ ವಿವಿಧ ಆಯಾಮದಲ್ಲಿ ತಂತ್ರಜ್ಞಾನ ಬಳಸಿಕೊಂಡು ಪ್ರಯತ್ನಿಸಿದರು ಕೈಗೆಟಕಲಿಲ್ಲ, ಕೊನೆಯದಾಗಿ ಮನುಷ್ಯರ ಕೈಗಳ ಸಹಾಯದಿಂದ ಇಲಿಗಳ ರೀತಿ ಮಣ್ಣನ್ನು ಹೊರಗಡೆ ಹಾಕುತ್ತ ಕಾರ್ಮಿಕರು ಇದ್ದ ಜಾಗ ತಲುಪಿ ಯಶಸ್ವಿಯಾಗಿ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.
ಗಣ್ಯರ ಸಂತಸ
ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಿದ ತಂತ್ರಜ್ಞರಿಗೆ ಹಾಗೂ ಕಾರ್ಮಿಕರಿಗೆ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಅವರು ಶ್ಲಾಘಿಸಿದ್ದು ಇದು ದೇಶದ ಪ್ರತಿಯೊಬ್ಬರಿಗೂ ಭಾವನಾತ್ಮಕ ಕ್ಷಣವಾಗಿದೆ ಎಂದು ಹೇಳಿದರು.