ಬೆಂಗಳೂರು: ಮನುಷ್ಯನ ಅಂಗಾಂಗಳನ್ನು ದಾನಮಾಡುವ ರೀತಿಯೆ ಚರ್ಮವನ್ನು ದಾನ ಮಾಡಬಹುದು, ಶೇ.60 ಸುಟ್ಟ ಗಾಯಗಳಿಂದ ನರಳುತ್ತಿರುವ ರೋಗಿಗಳಿಗೆ ಅನುಕೂಲವಾಗಲೆಂದು, ವೇಗವಾಗಿ ಗುಣಪಡಿಸಲು ಆರೋಗ್ಯದಿಂದ ಕೂಡಿರುವ ಚರ್ಮ ದಾನವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಪ್ರೊ. ಹಾಗೂ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥೆ, ಪ್ರೊ. ಡಾ. ಸುಮಿತ ಅವರು ತಿಳಿಸಿದರು.
ವಿಕ್ಟೋರಿಯಾ ಆಸ್ಪತ್ರೆ ಪ್ಲಾಸ್ಟಿಕ್ ಸರ್ಜರಿ ವಿಭಾಗ,ರೋಟರಿ ಬೆಂಗಳೂರು ಮಿಡ್ ಟೌನ್ ಸಹಭಾಗಿತ್ವದಲ್ಲಿ ಆರೋಗ್ಯದ ಉಪಕ್ರಮವನ್ನು ನಡೆಸುತ್ತಿದ್ದು, ಸ್ಕಿನ್ ಬ್ಯಾಂಕ್ ಗೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಸ್ಕಿನ್ ಬ್ಯಾಂಕ್ ಗೆ ಜಾಗವನ್ನು ನೀಡಲಾಗಿದೆ ಎಂದರು. ಚರ್ಮದಾನ ಮಾಡಲು ಅರ್ಹವಾದ ಅಂಗ ಎಂದು ಗುರುತಿಸಲಾಗಿದೆ,
18 ವರ್ಷ ಮೇಲಿನವರು ಯಾರು ಬೇಕಾದರೂ ಚರ್ಮವನ್ನು ದಾನ ಮಾಡಬಹುದು, ಕೆಲವೊಂದು ಅಪಾಯಕಾರಿ ಕ್ಯಾನ್ಸರ್ ರೋಗಿಗಳು, ನಂಜು,HIV,HBC ಇಂದ ಕೂಡಿರುವ ಶವಗಳಿಂದ ಚರ್ಮದಾನ ಮಾಡಲು ಸೂಕ್ತವಲ್ಲ, ಇವುಗಳನ್ನು ಹೊರತುಪಡಿಸಿ ಇದಕ್ಕೆ ಯಾವುದೇ ರಕ್ತದ ಮಾದರಿ,ಕಾಯಿಲೆಗಳು ಚರ್ಮ ಕಸಿಗೆ ಅಡ್ಡಿಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಡಿಸಿದರು.
ವ್ಯಕ್ತಿಯೊಬ್ಬರು ಸಾವನ್ನಪ್ಪಿದ 6 ಗಂಟೆಗಳ ಒಳಗಾಗಿ , ಅಥವಾ ಶವವನ್ನು ಶೈತ್ಯಗಾರದಲ್ಲಿ ಇರಿಸಿದ್ದರೆ ಅಂತಹ ಚರ್ಮ ಪಡೆಯಬಹುದು, ಚರ್ಮ ದಾನವನ್ನು ಯಾರು ಬೇಕಾದರೂ ಮಾಡಬಹುದು, ವ್ಯಕ್ತಿ ಬದುಕಿರುವಾಗಲು, ಸಾವಿನ ನಂತರ ಕುಟುಂಬದವರ ಇಚ್ಛೆಯ ಅನುಸಾರ ಸ್ಕಿನ್ ದಾನ ಮಾಡಬಹುದು, ದೇಹದ ಕಾಲು,ತೊಡೆ, ಬೆನ್ನು ಭಾಗದಿಂದ ಮಾತ್ರ ಚರ್ಮವನ್ನು ತೆಗೆಯುವಾಗ ಯಾವುದೇ ನಂಜು, ರಕ್ತ, ವಿರೂಪ ಆಗದ ರೀತಿ ತೆಗೆಯಲಾಗುತ್ತದೆ. ತದನಂತರ ಚರ್ಮವನ್ನು 48 ದಿನಗಳ ಕಾಲ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ತದನಂತರ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ಹಾಕಲಾಗುತ್ತದೆ. ಈಗಾಗಲೇ ಕೇಂದ್ರದಲ್ಲಿ 209ಕ್ಕಿಂತ ಹೆಚ್ಚು ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ, ಒಬ್ಬರಿಗೆ ಚರ್ಮ ದಾನ ಮಾಡಿದರೆ 5 ವರ್ಷಗಳ ಕಾಲ ಬಳಸಬಹುದು, ನೇತ್ರ ದಾನದ ರೀತಿಯಲ್ಲಿ ಹೋಲುತ್ತದೆ.
ಯಾರಿಗೆ ಮಾಡಬಹುದು?ಎಸ್ಟು ಕರ್ಚು ಬೇಕಾಗುತ್ತದೆ?
ಸುಟ್ಟಗಾಯಗಳಿಂದ ಕೂಡಿರುವ 1 ಮತ್ತು 2ನೇ ಡಿಗ್ರೀ ಯವರಿಗೆ ಚರ್ಮ ಕಸಿ ಬೇಕಾಗಿಲ್ಲ, ಆದರೆ 2 ರಲ್ಲಿ ಆಳವಾಗಿರುವ 3 ಡಿಗ್ರೀ ಯಿಂದ ಬಳಲುತ್ತಿರುವವರಿಗೆ ಹಾಕಬಹುದು, ಒಂದು ಚರ್ಮವನ್ನು (one Harvest) ತೆಗೆಯಲು ಕನಿಷ್ಟ 15 ರಿಂದ 16 ಸಾವಿರ ಕರ್ಚು ತಗಲುತ್ತದೆ, ಅದೆಲ್ಲವನ್ನೂ ಸರ್ಕಾರವೇ ಭರಿಸುತ್ತದೆ, ಫಲಾನುಭವಿಗೆ ಹಾಕಲು ಯಾವುದೇ ಹಣ ತೆಗೆದುಕೊಳ್ಳುವುದಿಲ್ಲ, ಬಹುತೇಕವಾಗಿ ಸುಟ್ಟಗಾಯಗಳಿಂದ ಕೂಡಿರುವ ರೋಗಿಗಳಿಗೆ ಹೆಚ್ಚು ಚರ್ಮ ಕಸಿಯನ್ನು ಮಾಡಲಾಗುತ್ತದೆ, ಕೆಲವೊಂದು ಅಪಘಾತದಲ್ಲಿ ಹೆಚ್ಚು ಚರ್ಮ ಕಳೆದುಕೊಂಡಿರುವ ವರಿಗೆ ಮಾತ್ರ ಮಾಡುವ ಸಾಧ್ಯತೆ ಇರುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲಾ ಮಟ್ಟದಲ್ಲಿ ಚರ್ಮ ಸಂಗ್ರಹ ನಿಧಿ ಕೇಂದ್ರ ಮಾಡಲು ಸರ್ಕಾರದ ಜೊತೆ, ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಧಾರ ಮಾಡಲಾಗುತ್ತದೆ. ಈಗಿನ ಬೇಡಿಕೆಗಳಿಗೆ ತಕ್ಕಂತೆ ಪೂರೈಸುವ ಕೆಲಸ ಮಾಡಲಾಗುತ್ತದೆ. ಇಲ್ಲಿನ ತನಕ ಯಾವುದೇ ಚರ್ಮದ ರಫ್ತು, ಆಮದು ಮಾಡಿಕೊಂಡಿಲ್ಲ,
ರೋಟರಿ ಆಶೀರ್ವಾದ ಸ್ಕಿನ್ ಬ್ಯಾಂಕ್ ನ ಸಂಸ್ಥಾಪಕ ಅನಿಲ್ ಲಾಲಾ ಮಾತನಾಡಿ,ಭಾರತದಲ್ಲಿ ಒಟ್ಟು 17 ಚರ್ಮ ಸಂಗ್ರಹ ನಿಧಿ ಇದ್ದು, ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ಕೇಂದ್ರ ಇದ್ದು, ಇನ್ನೂ ಬೆಳಗಾವಿ ಮತ್ತು ಮಣಿಪಾಲ ದಲ್ಲಿ ಖಾಸಗಿಯಾಗಿ ನಡೆಯುತ್ತಿದೆ ಎಂದರು.
ರೋಟರಿ ಬೆಂಗಳೂರು 2016ರಲ್ಲಿ ಸ್ಥಾಪನೆಯಾಗಿದೆ, ಮುಂಬೈನ ರಾಷ್ಟ್ರೀಯ ಸುಟ್ಟ ಗಾಯಗಳ ಕೇಂದ್ರದ ಸಹಯೋಗದಲ್ಲಿ ಸುಟ್ಟಗಾಯಗಳಿಂದ ನರಳುತ್ತಿರುವವರಿಗೆ ನೆರವಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಾಧ್ಯಮ ಮೂಲಕ ತಿಳಿಸಲಾಗುತ್ತದೆ, ಇದರಿಂದ ಶೇ 60 ರಷ್ಟು ಜೀವಗಳನ್ನು ಉಳಿಸುವ ಕೆಲಸವಾಗುತ್ತದೆ ಎಂದರು. ವ್ಯಕ್ತಿಗಳು ಚರ್ಮವನ್ನು ದಾನ ಮಾಡಲು ವಿಕ್ಟೋರಿಯಾ ಆಸ್ಪತ್ರೆಗೆ ಮಾಹಿತಿ ನೀಡಬಹುದು, ಇದರ ಜೊತೆಗೆ ಚರ್ಮ ದಾನದ ನೂಂದವಣಿಯನ್ನು ಸಹಾ ಮಾಡಬಹುದಾಗಿದೆ, ದಾನದ ವಿವರವುಳ್ಳ ಕಾರ್ಡ್ ಸಹ ನೀಡಲಾಗುತ್ತದೆ.
ಚರ್ಮ ಕಸಿ ಬಗ್ಗೆ ಸಾರ್ವಜನಿಕರಿಂದ ಹಾಗೂ ರೋಗಿಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ, ಈ ಬಗ್ಗೆ ಸಾರ್ವಜನಿಕರಿಗೆ ಮುಟ್ಟಿಸುವ ಕೆಲಸವಾಗಬೇಕಿದೆ ಎಂದರು. ಅದು ಮಾಧ್ಯಮದಿಂದ ಮಾತ್ರ ಸಾಧ್ಯ ಎಂದರು.