ಬೆಂಗಳೂರು: ಭಾರತೀಯ ಫುಟ್ಬಾಲ್ನ ಚಿತ್ರಣವನ್ನು ಮರು ಕಳಿಸುವ ನಿಟ್ಟಿನಲ್ಲಿ ಕರ್ನಾಟಕ ಪ್ರೀಮಿಯರ್ ಫುಟ್ಬಾಲ್ ಕ್ಲಬ್ ಅಕಾಡೆಮಿಯಾದ kickstart, FC, ಸುಪ್ರಸಿದ್ಧವಾದ ಇಂಗ್ಲಿಷ್ ಪ್ರೀಮಿಯಂ ಲೀಗ್ ತಂಡವಾದ ಟೋಟನ್ ಹ್ಯಾಂ ಹಾಟ್ ಸ್ಟಾರ್ ಫುಟ್ಬಾಲ್ ಕ್ಲಬ್ ನೊಂದಿಗೆ ಸಹಭಾಗಿತ್ವ ಹೊಂದಿತು.
ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡು ತಂಡಗಳ ಜರ್ಸಿಯನ್ನು ಬಿಡುಗಡೆ ಮಾಡಿ ಮಾತನಾಡಿದ Kickstar Fc ಯ ಸಂಸ್ಥಾಪಕ ಮತ್ತು ಸಿಇಒ ಲಕ್ಷ್ಮಣ್ ಭಟ್ಟರಯ್, ಭಾರತದಲ್ಲಿ ಪುಟ್ಬಾಲ್ ಅಭಿವೃದ್ಧಿಗೆ ಮಾನದಂಡಗಳನ್ನು ಹೆಚ್ಚಿಸುವ, ಮತ್ತು ನಮ್ಮ ಅಕಾಡೆಮಿಗೆ ಪ್ರಯೋಜನಗಳನ್ನು ಪಡೆಯುವುದು ಮಾತ್ರವಲ್ಲದೆ, ಫುಟ್ಬಾಲ್ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದರು.
ಟೋಟನ್ ಹ್ಯಾಮ್ ಹಾಟ್ಸ್ಟರ್ ನಿಂಡಿಗಿನ ಸಹಯೋಗವು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡಯ್ಯಲು ,kick shart ಫುಟ್ ಬಾಲ್ ಆಡಳಿತ ಮಂಡಳಿಯ ನಾಯಕತ್ವವು ಅಖಿಲ ಭಾರತ ಮಟ್ಟದಲ್ಲಿ ಕಾಲ್ಚೆಂಡು ನ್ನು ಪ್ರೋತ್ಸಾಹಿಸುವ ಬದ್ಧತೆಯನ್ನು ತೋರಿಸುತ್ತದೆ ಎಂದರು.
ಈಗಾಗಲೇ ಪ್ರಶಂಸನೀಯ ದಾಖಲೆ ಹೊಂದಿರುವ ಕ್ಲಬ್ನ ಮಹಿಳಾ ತಂಡವು ಇತ್ತೀಚೆಗೆ ಭಾರತೀಯ ಮಹಿಳಾ ಲೀಗ್ ಪಂದ್ಯಾವಳಿಯಲ್ಲಿ ರನ್ನರ್ಸ್ ಅಪ್ ಅಗಿದೆ. Kickstart FC, ಯಾವಾಗಲೂ ವಿವಿಧ ವರ್ಗಗಳಾದ್ಯಂತ ಆಟಗಾರ ಬೆಳವಣಿಗೆಗೆ ಒತ್ತು ನೀಡುತ್ತಾ ಬಂದಿದೆ. ಆದ್ದರಿಂದಲೇ ಈ ಸಹಭಾಗಿತ್ವವು ಕರ್ನಾಟಕ ರಾಜ್ಯದಲ್ಲಿ ಕ್ಲಬ್ನ ಪ್ರಯತ್ನಗಳನ್ನು ಇನ್ನಷ್ಟು ಬಲಪಡಿಸಿ ಅನುವುಗೊಳಿಸಲಿದೆ ಎಂದರು.ಟೋಟನ್ ಹ್ಯಾಮ್ ಹಾಟ್ಸ್ಟರ್ ನ ಯುವತಂಡಗಳೊಂದಿಗೆ ತರಬೇತಿ ಪಡೆದುಕೊಳ್ಳಲು ಯುಕೆ ಗೆ ಪ್ರಯಾಣ ಬೆಳೆಸುವ ಅವಕಾಶ ಪಡೆದುಕೊಳ್ಳಲಿದೆ.
ಎರಡು ಕ್ಲಬ್ ಗಳಿಗೂ ಪ್ರಯೋಜನವಾಗಿರುವ ಹಿನ್ನೆಲೆ ಸ್ಪರ್ಧಾತ್ಮಕ ಸ್ಪರ್ಧೆಯ ಮೂಲಕ ಯುವ ತಂಡಗಳನ್ನು ಬಲಪಡಿಸಲು ಪ್ರೇರಣೆಯಾಗುತ್ತದೆ.
Kickstar,Fc ಯ ಸಂಸ್ಥಾಪಕ ಹಾಗೂ ಮುಖ್ಯಸ್ಥ ಶೇಖರ್ ರಾಜನ್ ಮಾತನಾಡಿ,ಟೋಟನ್ ಹ್ಯಾಮ್ ಹಾಟ್ಸ್ಟರ್ ನೊಂದಗಿನ ಸಹಭಾಗಿತ್ವ ಮಾಡಿಕೊಂಡಿರಲು ನಮಗೆ ಹರ್ಷವಾಗುತ್ತದೆ ಎಂದರು. ಟೋಟನ್ ಹ್ಯಾಮ್ ಹಾಟ್ಸ್ಟರ್ ನಿಂದ ಕಲಿಯುವುದು ಬಹಳಷ್ಟಿದ್ದು, ಅವೆಲ್ಲವುಗಳನ್ನು ಅಳವಡಿಸಿಕೊಳ್ಳಲು ಕಾತುರರಾಗಿದ್ದೇವೆ ಎಂದು ತಿಳಿಸಿದರು.
ಟೋಟನ್ ಹ್ಯಾಮ್ ಹಾಟ್ಸ್ಟರ್ FC ನ ರಾಯಭಾರಿ ಲೆಡ್ಲಿ ಕಿಂಗ್ ಮಾತನಾಡಿ, ಈ ಕ್ರೀಡೆ ಜಾಗತಿಕ ಮಟ್ಟದಲ್ಲಿ ಹೆಚ್ಚು ಆಕರ್ಷಣೆಯಾಗಿದೆ, ತರಬೇತುಗಾರರಿಗೆ ಉತ್ತಮ ಕಲಿಕಾ ವಿಧಾನವಾಗಿದೆ,ಭಾರತೀಯ ಫುಟ್ಬಾಲ್ ಕ್ಷೇತ್ರದ ಮೇಲೆ ಧನಾತ್ಮಕ ಮತ್ತು ಸುದೀರ್ಘ ಪರಿಣಾಮ ಬೀರಲಿದೆ, ಯುವ ಆಟಗಾರರಿಗೆ ನಮ್ಮ ತರಬೇತುದಾರರಿಗೆ ವಿಶೇಷವಾಗಿದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಶಾಸಕರು ಹಾಗೂ Kickstar,fc ಯ ಮುಖ್ಯಸ್ಥರಾದ ಎನ್ ಎ ಹ್ಯಾರಿಸ್, ವಿಸ್ವೊಲ್ಡ್ ಅರ್ದೆಲಿಸ್ ಸೇರಿದಂತೆ ಇತರರು ಹಾ
ಜರಿದ್ದರು.