ಬೆಂಗಳೂರು: ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡುವ ಕಾಲಘಟ್ಟ ಇದೊಂದು ಪ್ರಮುಖ ದಿನವಾಗಿದ್ದು, ವಿದ್ಯಾರ್ಥಿಗಳ ಮುಂದಿನ ಜೀವನದ ನಡೆ-ನುಡಿ, ಕೆಲಸ ಕಾರ್ಯಗಳನ್ನು ಹೇಗೆಲ್ಲಾ ರೂಪಿಸಿಕೊಳ್ಳುತ್ತಾರೆ ಎಂಬುದು ಬಹಳ ಮುಖ್ಯ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಸ್. ಅಹಲ್ಯ ರವರು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಬಸವನಗುಡಿಯಲ್ಲಿರುವ ಬಿಎಮ್ಎಸ್ ಮಹಿಳಾ ಸ್ವಯತ್ತ ಮಹಾವಿದ್ಯಾಲಯಲ್ಲಿ ಪದವಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಡಾ. ಎಸ್. ಅಹಲ್ಯ ರವರು ಸಂಸ್ಕೃತ ಶ್ಲೋಕದೊಂದಿಗೆ ಪದವೀಧರರನ್ನು ಉದ್ದೇಶಿಸಿ ಮಾತನಾಡಿ, ಯುವ ಪದವೀಧರರನ್ನು ಪೋಷಿಸಿದ ಪೋಷಕರನ್ನು ಮೊದಲು ಶ್ಲಾಘಿಸಿದರು. ಇದು ವಿದ್ಯಾರ್ಥಿಗಳ ಜೀವನದ ಪ್ರಮುಖ ದಿನವಾಗಿದೆ ಎಂದು ಹೇಳಿದರು. ಆದರೆ ಪಾಶ್ಚಿಮಾತ್ಯರು ಪದವಿ ದಿನದ ಸಂಪ್ರದಾಯವನ್ನು ಯಾರು ಪ್ರಾರಂಭಿಸಲಿಲ್ಲ, ಮತ್ತು ಎಲ್ಲಿಯೂ ಮಾಡುತ್ತಿಲ್ಲ. ತೈತ್ತಿರೀಯ ಉಪನಿಷತ್ತುಗಳಲ್ಲಿ ಉಲ್ಲೇಖಿಸಿದಂತೆ ಇದು ಭಾರತೀಯರ ಪರಿಕಲ್ಪನೆಯಾಗಿದೆ, ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಶಿಕ್ಷಕರು,ಗುರು ಹಿರಿಯರು ಜೀವನದಲ್ಲಿ ಹೇಗೆಲ್ಲ ನಡೆದುಕೊಳ್ಳಬೇಕು ಎಂಬುದನ್ನು ವಿವರವಾಗಿ ತಿಳಿಸಿದರು.
ಈ ಸಮಾರಂಭದಲ್ಲಿ ತಮ್ಮ ಶೈಕ್ಷಣಿಕ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪದವಿ ವಿದ್ಯಾರ್ಥಿಗಳ ಗಮನಾರ್ಹ ಸಾಧನೆಗಳನ್ನು ಗೌರವಿಸಲಾಯಿತು. ಕಲೆ,ವಾಣಿಜ್ಯ, ವಿಜ್ಞಾನ, ಬಿಬಿಎಂ,ಬಿಸಿಎ, ಎಂಸಿಎ ಸೇರಿದಂತೆ ಇತರ ವಿಭಾಗಗಳಲ್ಲಿ ವಿಧ್ಯಾಭ್ಯಾಸವನ್ನು ಮುಗಿಸಿದ 800ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಪದವಿಯನ್ನು ಪಡೆದುಕೊಂಡರು.
ನೂತನವಾಗಿ ಪದವೀಧರರಿಗೆ PDC ಗಳನ್ನು ನೀಡಲಾಯಿತು, ಮತ್ತು ಇದು ಎಲ್ಲಾ ಪದವೀಧರರ ಮುಂದಿನ ಉಜ್ವಲ ಭವಿಷ್ಯದ ನಿರೀಕ್ಷೆಯೊಂದಿಗೆ ಶೈಕ್ಷಣಿಕ ಸಾಧನೆಯ ಸ್ಮರಣೀಯ ಆಚರಣೆ ಮಾಡಲಾಯಿತು.ಬಿಎಂಎಸ್ ಮಹಿಳಾ ಸ್ವಾಯತ್ತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಸುಂಧರಾ ಡಿ ಇ ರವರು ಗಣ್ಯರನ್ನು ಸ್ವಾಗತಿಸಿದರು.
ಬಿಎಮ್ಎಸ್ ಶಿಕ್ಷಣ ದತ್ತಿಯ ಧರ್ಮದರ್ಶಿಗಳಾದ ಹಾಗೂ ಬಿಎಂಎಸ್ ಮಹಿಳಾ ಮಹಾವಿದ್ಯಾಲಯದ ಅಧ್ಯಕ್ಷರಾದ ಡಾ.ಬಿ.ಎಸ್. ರಾಗಿಣಿ ನಾರಾಯಣ್ ರವರು ಸಮಾರಂಭದ ಗೌರವಾನ್ವಿತ ಅಧ್ಯಕ್ಷತೆಯನ್ನು ವಹಿಸಿದ್ದರು.ಗೌರವ ಅತಿಥಿಗಳಾಗಿ ಬಿಎಂಎಸ್ ಶಿಕ್ಷಣ ದತ್ತಿಯ ಧರ್ಮದರ್ಶಿಗಳಾದ ಅವಿರಾಮ್ ಶರ್ಮಾ ರವರು, ಬಿಎಂಎಸ್ ಶಿಕ್ಷಣ ದತ್ತಿಯ ಆಡಳಿತ ನಿರ್ದೇಶಕರಾದ ವಿಂಗ್ ಕಮಾಂಡರ್ ಆರ್.ಎ. ರಾಘವನ್ ರವರು, ಬಿಎಂಎಸ್ ಆಸ್ಪತ್ರೆ ದತ್ತಿಯ ಅಧ್ಯಕ್ಷರಾದ ಗೌತಮ್ ವಿ ಕಲತ್ತೂರ್ ರವರು ಉಪಸ್ಥಿತರಿದ್ದರು.
ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಬಿಎಂಎಸ್ ಶಿಕ್ಷಣ ದತ್ತಿಯ ಉಪ ನಿರ್ದೇಶಕರಾದ ಪ್ರಸಾದ್ ರವರು, ಹಣಕಾಸು ಅಧಿಕಾರಿಗಳಾದ ಬಿಎಸ್ ಸಂಜೀವ ರವರು, ಹಿರಿಯ ಹಣಕಾಸು ವ್ಯವಸ್ಥಾಪಕರಾದ ಅನಿರ್ಬನ್ ಶರ್ಮಾ ರವರು, ಬಿಎಮ್ಎಸ್ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಡಾ. ಸುರೇಶ್ ರವರು, ಬಿಎಂಎಸ್ ಮಹಿಳಾ ಸ್ವಯತ್ತ ಮಹಾವಿದ್ಯಾಲಯದ ಉಪ ಪ್ರಾಂಶುಪಾಲಕರಾದ. ಗಾಯತ್ರಿ ಎ ರವರು, ಶೈಕ್ಷಣಿಕ ಡೀನ್ ರಾದ ಡಾ. ರೀಟಾ ಭಟ್ಟಾಚಾರ್ಜಿ ರವರು ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.