ಬೆಂಗಳೂರು: ಯುವ ನಾಯಕ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರ ಜನಪರ ಕಾರ್ಯಕ್ರಮ ಮಾದರಿಯಾಗಿದೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಹೇಳಿದ್ದಾರೆ.
ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಅವರ ಹುಟ್ಟು ಹಬ್ಬಕ್ಕೆ ಶುಭಕೋರಿ ಮಾತನಾಡಿದ ಅವರು, ಹೊಸಕೋಟೆಯಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಶಾಸಕರು ಜನಸಾಮಾನ್ಯರ ಧ್ವನಿಯಾಗಿ, ಯುವ ಸಮುದಾಯದ ಪ್ರೇರಣಾ ಶಕ್ತಿಯಾಗಿ ಹೊರಹೊಮ್ಮಿದ್ದಾರೆ ಎಂದು ಬಣ್ಣಿಸಿದರು. ರಾಜ್ಯದಲ್ಲೇ ಮೊದಲ ಬಾರಿಗೆ ರೈತರಿಗೆ ಸಾಗುವಳಿ ಚೀಟಿ ಜೊತೆಗೆ ಪಹಣಿ ಮತ್ತು ಮಿಟೇಷನ್ ನೀಡಿದ ಹೆಗ್ಗಳಿಕೆ ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಇಂತಹ ರೈತಪರ ಕಾಳಜಿ, ಬಡವರು, ಶೋಷಿತರ ಪರ ಕೆಲಸ ಮಾಡುತ್ತಿರುವ ಶರತ್ ಬಚ್ಚೇಗೌಡ ಅವರು ಕ್ಷೇತ್ರದಲ್ಲಿ ಮತಷ್ಟುಅಭಿವೃದ್ಧಿ ಕೆಲಸ ಮಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಸಂಸದರಾದ ಬಿ. ಎನ್ ಬಚ್ಚೇಗೌಡ ಹಾಗೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಂಧುಗಳು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಸ್ಥಳೀಯ ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.