ಬೆಂಗಳೂರು :ಅನ್ಬಾಕ್ಸಿಂಗ್ BLR ಫೌಂಡೇಶನ್ ವತಿಯಂದ ದಿನಾಂಕ 01-12-2023 ರಿಂದ 11-12-2023 ರ ವರೆಗೆ ಅನ್ಬಾಕ್ಸಿಂಗ್ ಬೆಂಗಳೂರು ಹಬ್ಬವನ್ನು ಆಯೋಜಿಸಲಾಗಿದೆ.
ಈ ಹಬ್ಬದಲ್ಲಿ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ನೃತ್ಯ, ಸಂಗೀತ, ವಿನ್ಯಾಸ, ಸಾಹಿತ್ಯ, ತಂತ್ರಜ್ಞಾನ, ಪರಂಪರೆ, ದೃಶ್ಯ ಕಲೆಗಳು, ಆಹಾರ ಕರಕುಶಲ ಇತ್ಯಾದಿಗಳನ್ನು ಒಳಗೊಂಡಂತೆ ವೈವಿಧ್ಯಮಯ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಹಬ್ಬದ ಆಚರಣೆಯ ಸಂದರ್ಭದಲ್ಲಿ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳನ್ನು ಗುರುತಿಸಿ, ಕಟ್ಟಡಗಳ ಮೇಲೆ ರಾಷ್ಟ್ರೀಯ ಹಾಗೂ ರಾಜ್ಯದ ಭಾವುಟಕ್ಕೆ ಹೊಂದಿಕೆಯಾಗುವಂತೆ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗುವುದು.
ಈ ಹಬ್ಬವನ್ನು ಖಾಸಗಿ ಮತ್ತು ಸರ್ಕಾರಿ ಸಹ ಭಾಗಿತ್ವದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಹಬ್ಬವನ್ನು ಯಶಸ್ವಿ ಆಚರಣೆ ಮಾಡುವುದು ಆದ್ಯ ಕರ್ತವ್ಯವಾಗಿರುತ್ತದೆ ಎಂದು ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.