ರಾಯಚೂರು: ಆಟವಾಡುವಾಗ ಗುಂಡು ಸೂಜಿ ನುಂಗಿದ್ದ ಬಾಲಕನಿಗೆ ರಿಮ್ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಹೊಟ್ಟೆ ಸೇರಿದ್ದ ಸೂಜಿಯನ್ನು ಹೀರ ತೆಗೆದಿದ್ದಾರೆ.
ಸಿರವಾರ ತಾಲೂಕಿನ ಮುಚ್ಚುಳ ಕ್ಯಾಂಪ್ ನ 13ವರ್ಷದ ಕು.ಶಿವಕುಮಾರ ತಂದೆ ದೇವರಾಜ ಎಂಬ ಬಾಲಕ ಶಾಲೆಯಲ್ಲಿ ಆಟವಾಡುವಾಗ ಗುಂಡು ಸೂಜಿಯನ್ನು ಬಾಯಿಯಲ್ಲಿ ಇಟ್ಟುಕೊಂಡಾಗ ಆಕಸ್ಮಿಕವಾಗಿ ನುಂಗಿ ಗುಂಡು ಸೂಜಿಯು ಬಲ ಶ್ವಾಸಕೋಶದೊಳಗಡೆ ಸೆರಿತ್ತು, ಚಿಕಿತ್ಸೆಗಾಗಿ ಬಾಲಕನನ್ನು ರಿಮ್ಸ್ ಬೋಧಕ ಆಸ್ಪತ್ರೆಗೆ ದಾಖಲಿಸಲಾಯಿತು. ದಾಖಲಾದ ಬಾಲಕನ ಶ್ವಾಸಕೋಶವನ್ನು ಕ್ಷ ಕಿರಣವನ್ನು ಮಾಡಿಸಿದಾಗ ಬಲ ಶ್ವಾಸಕೋಶದಲ್ಲಿ ಸೂಚನಾ ಫಲಕದ ಗುಂಡು ಇರುವುದು ಖಚಿತಪಡಿಸಿಕೊಂಡು, ಬ್ರಾಂಕೋಸ್ಕೋಪ್ ಮೂಲಕ ಗುಂಡು ಸೂಜಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶಸ್ತ್ರ ಚಿಕಿತ್ಸೆ ತಂಡದಲ್ಲಿ ಇಎನ್ಟಿ ನುರಿತ ತಜ್ಞ ವೈದ್ಯ ಡಾ. ಅರವಿಂದ್ ಸಂಗವಿ, ನುರಿತ ಅರವಳಿಕೆ ತಜ್ಞ ವೈದ್ಯ ಡಾ.ಕಿರಣ ನಾಯಕ, ಡಾಕ್ಟರ್ ಮಲ್ಲಿಕಾರ್ಜುನ್ .ಕೆ ಪಾಟೀಲ್, ಡಾ.ಸಿಂಧು ಪಿಜಿ, ಡಾ.ಇಂದುಮಣಿ, ನರ್ಸಿಂಗ್ ಅಧಿಕಾರಿ ಅಮರೇಶ್ ಸಕ್ರಿ, ಓಟಿ ತಂತ್ರಜ್ಞರಾದ ಲಿಂಗರಾಜ್, ಸುಮನ್ ಕ್ಲ್ಯಾರಿ, ನಾರಾಯಣ, ಶಂಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕ ಡಾ.ಬಸವರಾಜ ಪೀರಾಪುರ್, ರಿಮ್ಸ್ ಮೆಡಿಕಲ್ ಕಾಲೇಜ ಪ್ರಾಂಶುಪಾಲ ಡಾ.ಬಸವರಾಜ್ ಎಂ ಪಾಟೀಲ್, ವೈದ್ಯಕೀಯ ಅಧೀಕ್ಷಕರು ಡಾ.ಭಾಸ್ಕರ್ ಕೆಂಪೇಗೌಡ, ಇ ಎನ್ಟಿ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ್ ಹಾಗೂ ಅರವಳಿಕೆ ಮುಖ್ಯಸ್ಥ ಡಾಕ್ಟರ್ ನಂದನ್ ಪಡಶೆಟ್ಟಿ, ಓಟಿ ಇಂಚಾರ್ಜ್ ಶುಶ್ರುಷಕ ಮೇಲ್ವಿಚಾರಕಿ ಆಶಾ ಹುಂಬಿ ಅತ್ಯುತ್ತಮ ಉಪಕರಣಗಳನ್ನು ಆಸ್ಪತ್ರೆಗೆ ಒದಗಿಸಿ ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸಿದ್ದಕ್ಕೆ ಇವರಿಗೆಲ್ಲ ರೋಗಿಯ ಕುಟುಂಬಸ್ಥರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ರೋಗಿಯು ಆರಾಮವಾಗಿ ಶಸ್ತ್ರಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.