ನವದೆಹಲಿ: ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ 3 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಿರು ಗಾಳಿಯನ್ನೇ ಎಬ್ಬಿಸಿ ಕಾಂಗ್ರೆಸ್ ನಾಮಾವಶೇಷ ಮಾಡಿದೆ.
ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ, ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು, “ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತೀಯ ಜನತಾ ಪಕ್ಷವು ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ನಿರ್ಣಾಯಕವಾಗಿ ಸೋಲಿಸಿದೆ” ಎಂದು ಹೇಳಿದರು.
“ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆಗಳ ಮೂಲಕ ಮೋದಿಯವರು ಮಾತ್ರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಇಂದಿನ ಚುನಾವಣಾ ಫಲಿತಾಂಶಗಳು ತುಷ್ಟೀಕರಣ ಮತ್ತು ಜಾತಿ ಆಧಾರಿತ ರಾಜಕಾರಣದ ಯುಗ ಅಂತ್ಯಗೊಂಡಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಹೊಸ ಭಾರತವು ಕಾರ್ಯಕ್ಷಮತೆಯ ರಾಜಕೀಯವನ್ನು ಆಧರಿಸಿ ಮತ ಚಲಾಯಿಸುತ್ತದೆ.
ತಮ್ಮ ಅಪಾರ ಬೆಂಬಲಕ್ಕಾಗಿ ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದ ಜನರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಶಾ, ಬಿಜೆಪಿಯ ಅಭೂತಪೂರ್ವ ವಿಜಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದರು. ರಾಜಸ್ಥಾನದ ಜನತೆಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಶ್ಲಾಘನೆಗಳನ್ನು ಸಲ್ಲಿಸಿದ ಅವರು, “ಮೋದಿಯವರ ನೇತೃತ್ವದ ಬಿಜೆಪಿಗೆ ಭವ್ಯವಾದ ವಿಜಯವನ್ನು ದಯಪಾಲಿಸಿದ ರಾಜಸ್ಥಾನದ ಜನತೆಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ನಾನು ಅಭಿನಂದಿಸುತ್ತೇನೆ. ಈ ವಿಜಯವು ಮೋದಿಯವರ ನಾಯಕತ್ವದ ಮೇಲೆ ಜನರ ಅಚಲ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.”
ನರೇಂದ್ರ ಮೋದಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರದ ಕಲ್ಯಾಣ ನೀತಿಗಳು ಮತ್ತು ಉಪಕ್ರಮಗಳು ಮಧ್ಯಪ್ರದೇಶದ ಗಣನೀಯ ವಿಜಯಕ್ಕೆ ಕಾರಣವಾಗಿವೆ ಎಂದು ಶ್ರೀಯುತ ಅಮಿತ್ ಶಾ ಹೇಳಿದರು. “ಈ ವಿಜಯವು ಪ್ರಾಥಮಿಕವಾಗಿ ಉತ್ತಮ ಆಡಳಿತಕ್ಕೆ ಸಾರ್ವಜನಿಕರ ಅನುಮೋದನೆಯ ಫಲಿತಾಂಶವಾಗಿದೆ” ಎಂದರು.
ಇದಲ್ಲದೆ, ಬಿಜೆಪಿಯ ಯಶಸ್ಸಿಗೆ ಛತ್ತೀಸ್ಗಢದ ಜನತೆಗೆ ಧನ್ಯವಾದ ಅರ್ಪಿಸಿದ ಶಾ, “ಛತ್ತೀಸ್ಗಢದ ಬುಡಕಟ್ಟು, ಬಡ ಮತ್ತು ರೈತ ಸಮುದಾಯಗಳು ಬಿಜೆಪಿಗೆ ಗಮನಾರ್ಹ ಬಹುಮತವನ್ನು ನೀಡಿದ್ದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಲ್ಲಿ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದರು.
ತೆಲಂಗಾಣದ ಜನತೆಗೆ ಶಾ ಕೃತಜ್ಞತೆ ವ್ಯಕ್ತ
ತೆಲಂಗಾಣ ಜನತೆಯ ಉತ್ಸಾಹದ ಬೆಂಬಲಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ ಕೇಂದ್ರ ಗೃಹ ಸಚಿವರು, “ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ತೆಲಂಗಾಣದ ಅಭಿವೃದ್ಧಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ. ಜನರ ಸಹಕಾರದೊಂದಿಗೆ ನಾವು ನಿಸ್ಸಂದೇಹವಾಗಿ ತೆಲಂಗಾಣವನ್ನು ಸಮೃದ್ಧ ರಾಜ್ಯವನ್ನಾಗಿ ಮಾಡುತ್ತೇವೆ ಎಂದರು.
ಈ ಎಲ್ಲಾ ರಾಜ್ಯಗಳ ಮತದಾರರು ಭಾರತೀಯ ಜನತಾ ಪಕ್ಷಕ್ಕೆ ತಮ್ಮ ಆಶೀರ್ವಾದವನ್ನು ಧಾರೆಯೆರೆದಿದ್ದಕ್ಕಾಗಿ ಅಮಿತ್ ಶಾ ಅವರು ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಮೋದಿ ಸರ್ಕಾರ ಜಾರಿಗೊಳಿಸಿದ ಕಲ್ಯಾಣ ಖಾತರಿಗಳು ಮತ್ತು ಸಾರ್ವಜನಿಕ ಯೋಜನೆಗಳಲ್ಲಿ ಸಾರ್ವಜನಿಕರು ಸಂಪೂರ್ಣ ನಂಬಿಕೆಯನ್ನು ಪ್ರದರ್ಶಿಸಿದ್ದಾರೆ ಎಂದರು. ಭಾರತದ ಜನರು ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ರಾಜಕೀಯದಲ್ಲಿ ಮಾತ್ರ ವಿಶ್ವಾಸ ಹೊಂದಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಗಣನೀಯ ಬಹುಮತದ ಬಗ್ಗೆ ಶಾ ಅವರು ಪಕ್ಷದ ಕಾರ್ಯಕರ್ತರು ಮತ್ತು ಮೂರು ರಾಜ್ಯಗಳ ಜನರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದರು.