ಬೆಂಗಳೂರು: ಆರ್ಯ ಈಡಿಗ 26 ಪಂಗಡಗಳು ಒಂದೇ ಎಂದು ತೋರಿಸುವ ಹಿನ್ನೆಲೆ , ನಮ್ಮ ಸಂಖ್ಯಾಬಲವನ್ನು ಸರ್ಕಾರಿ ಕ್ಕೆ ತೋರಿಸುವ ಹಿನ್ನೆಲೆ ಬೃಹತ್ ಮಠದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ. ಎಂ ತಿಮ್ಮೇಗೌಡ ಅವರ ತಿಳಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 1995 ರಲ್ಲಿ ನಡೆದ ಮೂರನೇ ಸಮಾವೇಶದಲ್ಲಿ ನಿರ್ಧರಿಸಿದಂತೆ ಒಂದು ಸಮುದಾಯ ಒಂದೇ ಜಾತಿ ಎಂಬ ಘೋಷವಾಕ್ಯದೊಂದಿಗೆ ಮುಂದುವರೆದು ಇಂದು ನಾವೆಲ್ಲ 26 ಪಂಗಡಗಳು ಒಂದೇ ಎಂದು ತೋರಿಸಲು ಮುಂದಾಗಿದ್ದೇವೆ ನಮ್ಮ ಸಂಖ್ಯಾಬಲವನ್ನು ಸರ್ಕಾರಕ್ಕೆ ತೋರಿಸುವ ಸಲುವಾಗಿ ಹಾಗೂ ಸರ್ಕಾರದ ಸೌಲಭ್ಯಗಳನ್ನು ಸಮುದಾಯಕ್ಕೆ ಒದಗಿಸುವ, ಹಿಂದುಳಿದ ನಮ್ಮ ಸಮುದಾಯಕ್ಕೆ ಸರಕಾರ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ , ಸಮುದಾಯದ ಎಲ್ಲಾ ಮುಖಂಡರೊಂದಿಗೆ ಚರ್ಚಿಸಿ ಡಿಸೆಂಬರ್ 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಂಘದ ಅಮೃತ ಮಹೋತ್ಸವ ಹಾಗೂ ಗೃಹತ್ ಜಾಗೃತಿ ಸಮಾವೇಶದಲ್ಲಿ ಸರ್ಕಾರದ ಮುಂದೆ ತಮ್ಮ ಸಮಸ್ಯೆಗಳನ್ನು ಇಡುವುದಾಗಿ ಅವರು ತಿಳಿಸಿದರು.
1958 ರಿಂದ 1995 ರವರೆಗೆ 3 ಸಮ್ಮೇಳನಗಳನ್ನು ಸಂಘದಿಂದ ಮಾಡಲಾಗಿದ್ದು, ಸಂಘದ ಹಿರಿಯ ಮುತ್ತುಗಳ ಮುಂದಾಳತ್ವದಲ್ಲಿ ಈ ಒಂದು ಸಮಾವೇಶಗಳ ನಡುವೆ, ಈಗಾಗಲೇ ನಾವು ಬಹಳಷ್ಟು ಮುಖಂಡರುಗಳನ್ನು ಕಳೆದುಕೊಂಡಿದ್ದೇವೆ ಎಂದರು.
ಅಮೃತ ಮಹೋತ್ಸವ ಮತ್ತು ಬೃಹತ್ ಜಾಗೃತ ಸಮಾವೇಶಕ್ಕೆ ಸಮುದಾಯದ ಎಲ್ಲಾ ಸ್ವಾಮೀಜಿಗಳು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಹಾಗೂ ಸಮುದಾಯದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಸೇರಿದಂತೆ ಸಮಾಜದ ಎಲ್ಲ ಶಾಸಕರು, ಚಿತ್ರರಂಗದ ನಟ-ನಟಿಯರು ಅದರ ಜೊತೆ ಎಲ್ಲಾ ಜಿಲ್ಲೆಗಳ ಹಾಗೂ ತಾಲೂಕು ಸಂಘಗಳ ಮುಖಂಡರು ಹಾಗೂ ಕುಲಬಾಂಧವರು ಈ ಒಂದು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಇದೆ ವೇಳೆ ತಿಳಿಸಿದರು.
ಅಮೃತ ಮಹೋತ್ಸವ ಹಾಗೂ ಬೃಹತ್ ಜಾಗೃತ ಸಮಾವೇಶದಲ್ಲಿ, ಸಂಘದ ಹಾಗೂ ಸಮುದಾಯದ ವತಿಯಿಂದ ಸರ್ಕಾರದ ಮುಂದೆ ಸಮುದಾಯಕ್ಕೆ ಆಗುತ್ತಿರುವ ತೊಂದರೆಗಳು, ಸಮಸ್ಯೆಗಳು ಹಾಗೂ ಅಭಿವೃದ್ಧಿ ವಿಚಾರಗಳ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ತಿಮ್ಮೇಗೌಡ ಅವರು ಇದೆ ವೇಳೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಟಿ ಶಿವಕುಮಾರ್ ,ಎಸ್ ಎಚ್ ಪದ್ಮರವಿಂದ್ರ, ಪ್ರಧಾನ ಕಾರ್ಯದರ್ಶಿ ಎಚ್ ಡಿ ಮೋಹನ್ ದಾಸ್ ,ಜಂಟಿ ಕಾರ್ಯದರ್ಶಿ ಜಿ ಓ ಕೃಷ್ಣ ಆರ್ಪಿ ಪ್ರಕಾಶ್, ವಾಸನ್ ಸೇರಿದಂತೆ ಇನ್ನಿತರರು ಇದೆ ವೇಳೆ ಉಪಸ್ಥಿತರಿದ್ದರು.