ಬೆಂಗಳೂರು: ಮಂಗಳೂರಿನಲ್ಲಿ ನಡೆದ 19ನೇ ರಾಷ್ಟ್ರೀಯ ಮಾಸ್ಟರ್ ಈಜು ಸ್ಪರ್ಧೆಯಲ್ಲಿ ಡಾ. ಅಗರ್ವಾಲ್ ಹಾಸ್ಪಿಟಲ್ಸ್ ಜೀನ್ ರಿಸರ್ಚ್ ಫೌಂಡೇಶನ್ ನ ವೈದ್ಯಕೀಯ ನಿರ್ದೇಶಕರಾದ ಡಾ. ಸುನಿತಾ ರಾಣಾ ಅಗರ್ವಾಲ್ ಅವರು 4 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಈ ಸಂಬಂಧ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿ ಈಜುಕೊಳದಲ್ಲಿ ನಾನು ಪ್ರತಿನಿತ್ಯ ಈಜುವ ಅಭ್ಯಾಸವನ್ನು ಮಾಡುತ್ತಿದ್ದೆ, ಹೀಗಾಗಿ ಮಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ನನಗೆ ಯಾವುದೇ ರೀತಿಯಾದಂತಹ ಕಷ್ಟ ಆಗಲಿಲ್ಲ, ನನಗೆ ಪ್ರತಿಸ್ಪರ್ಧೆ ನಾಲ್ಕು ಜನ ಆಗಿದ್ದರು ಸಹ ನಾನು ಈಜುವುದರಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಬೀಳಲಿಲ್ಲ ನನ್ನ ಸಾಧನೆಯನ್ನು ನಾನು ಮಾಡಿದ್ದೇನೆ ಎಂದರು.
ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಈಜುಗಾರರಿಗೆ ತರಬೇತಿ ನೀಡಿದ ಈಜು ತರಬೇತಿದಾರ ಬುಶನ್ ನಾಲ್ಕು ಚಿನ್ನದ ಪದಕವನ್ನು ಗೆದ್ದಿರುವ ಡಾ.ಸುನಿತಾ ಅಗರ್ವಾಲ್ ಅವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು, ಸುನಿತಾ ಅವರು ಒಬ್ಬ ವೈದ್ಯರಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ ಅದರ ಜೊತೆಗೆ ವಿಲ್ಸನ್ ಗಾರ್ಡನ್ ನಲ್ಲಿರುವ ರೀ ಸೆಂಟರ್ ಈಜುಕೊಳದಲ್ಲಿ ಅವರು ತಮ್ಮ ಅಭ್ಯಾಸವನ್ನು ಮಾಡಿ ಉತ್ತಮ ಅಸಾಧನೆ ಮಾಡಿದ್ದಾರೆ.
1 ನಿಮಿಷ 21 ಸೆಕೆಂಡ್ ನಲ್ಲಿ 100 ಮೀ ಈಜಿ ಸಾಧಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಸುನಿತಾ ಅವರು ಈಜುವ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ, ಯಾವ ಯುವಕರಿಗೂ ಕಡಿಮೆ ಇಲ್ಲದಂತೆ ಇಳಿ ವಯಸ್ಸಿನಲ್ಲಿ ಹೆಚ್ಚು ಸಾಧನೆ ಯಲ್ಲಿ ಮಾಡುತ್ತಿರುವುದನ್ನು ನೋಡಬಹುದಾಗಿದೆ.
ಮೇ ನಲ್ಲಿ ನಡೆದ ಕೊರಿಯಾ ಜಿಯೂನ್ ಬುಕ್ ನಲ್ಲಿ ನಡೆದ ಅಸಿಯೋ ಪೆಸಿಫಿಕ್ ಮಾಸ್ಟರ್ ಈಜು ಸ್ಪರ್ಧೆಯಲ್ಲಿ ಸುನಿತಾ ಒಂಬತ್ತು ಚಿನ್ನ ಒಂದು ಬೆಳ್ಳಿ ಪದಕವನ್ನು ಗಿರಿಧಾರೆ ಅಲ್ಲಿ ಅವರು 50 ಮಾಸ್ಟರ್ ಬಟರ್ಫ್ಲೈ 49 ಸೆಕೆಂಡ್ ಮತ್ತು 500 42 ಸೆಕೆಂಡುಗಳಲ್ಲಿ ಗೆದ್ದಿದ್ದಾರೆ 2018 ರಲ್ಲಿ ಪೆನಾಂಗ್ ನಲ್ಲಿ ನಡೆದ ಕೊನೆಯ ಅಸಿಯೋ ಪೆಸಿಫಿಕ್ ಮಾಸ್ಟರ್ ಈಜು ಸ್ಪರ್ಧೆಯಲ್ಲಿ ಅವರು ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ ಎಂದರು.