ಬೆಂಗಳೂರು: ಅರ್ಥಶಾಸ್ತ್ರದ ಮುಖಮುಖಿ ದೈನಂದಿನ ಜೀವನದಲ್ಲಿ ಅರ್ಥಶಾಸ್ತ್ರ ಎಂಬ ವಿಷಯದ ಬಗ್ಗೆ ನಾಳೆ ಕನಕಪುರ ರಸ್ತೆ ಇಂಡಸ್ ಬಿಸಿನೆಸ್ ಅಕಾಡೆಮಿಯಲ್ಲಿ ಇಕೋಫ್ಲುಯೆನ್ಸ- 23 ಅರ್ಥಶಾಸ್ತ್ರ ಸಂಶೋಧನಾ ಚಾಂಪಿಯನ್ ಶಿಪ್ ನಡೆಯಲಿದೆ ಎಂದು ಇಂಡಸ್ ಬಿಜಿನೆಸ್ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕರು ಹಾಗೂ ಇಕೋಫ್ಲುಯೆನ್ಸದ ತಾಂತ್ರಿಕ ಅಧ್ಯಕ್ಷರಾದ ಪ್ರೊ. ಪ್ರಶಾಂತ್ ಕುಲಕರ್ಣಿ ಅವರು ತಿಳಿಸಿದರು.
ಇಂಡಸ್ ಬಿಜಿನೆಸ್ ಅಕಾಡೆಮಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮ್ಮೇಳನವನ್ನು ಆರ್ ಎಸ್ ಶುಕ್ಲಾ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರೂ, ಭಾರತೀಯ ಅರ್ಥಶಾಸ್ತ್ರ ಸಂಘದ ಸಾಮಾನ್ಯ ಕಾರ್ಯದರ್ಶಿಗಳಾದ ಡಾ. ರವೀಂದ್ರ ಬ್ರಹ್ಮೆ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.
ಅರ್ಥಶಾಸ್ತ್ರದ ಬಗ್ಗೆ ಚಾಂಪಿಯನ್ ಶಿಪ್ ಕಾರ್ಯಕ್ರಮ ಭಾರತದಲ್ಲಿಯೇ ಮೊದಲನೇ ಬಾರಿಗೆ ಬೆಂಗಳೂರಲ್ಲಿ ನಡೆಯುತ್ತಿದೆ, ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರು ಸಹ ಅರ್ಥಶಾಸ್ತ್ರದ ಬಗ್ಗೆ ಸಾಮಾನ್ಯ ಜನರಿಗೂ ಅರ್ಥವಾಗಬೇಕು, ಆ ನಿಟ್ಟಿನಲ್ಲಿ ಭಾಷಣವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಬೆಳಿಗ್ಗೆ 10 ರಿಂದ ಸಂಜೆ 7:00 ರವರಿಗೆ ಕಾರ್ಯಕ್ರಮ ನಡೆಯಲಿದೆ, ಭಾಷಣಕ್ಕೆ ಕೇವಲ 8 ನಿಮಿಷಗಳನ್ನು ಮಾತ್ರ ಕೊಡಲಾಗುತ್ತದೆ, ಸ್ಪರ್ಧೆಗೆ ವಿದ್ಯಾರ್ಥಿಗಳು ದಲಿತರು ಭಾಗವಹಿಸಬಹುದಾಗಿದೆ, ಇದನ್ನು ಅವಲೋಕಿಸಲು ತೀರ್ಪುಗಾರರು ಸಹ ಇರ್ತಾರೆ ಎಂದರು.
ಸ್ಪರ್ಧಿಗೆ ಒಟ್ಟು 50 ಜನ ನೊಂದಣಿ ಮಾಡಿಕೊಂಡಿದ್ದು, ಅದರಲ್ಲಿ ಅವರ ವಿಷಯ ಆಧಾರಿತಗಳ ಮೇಲೆ 20 ಜನರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ, ಇದರಲ್ಲಿ ಅಂತಿಮ ಘಟ್ಟಕ್ಕೆ 10 ಜನರನ್ನು ಆಯ್ಕೆ ಮಾಡಿ ಅಂತಿಮ ಸುತ್ತಿನಲ್ಲಿ ಹಣಾಹಣಿ ನಡೆಯಲಿದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಮೊದಲನೇ ಬಹುಮಾನ 20,000, ಎರಡನೇ ಬಹುಮಾನ 15 ಸಾವಿರ, ಮೂರನೇ ಬಹುಮಾನ 10 ಸಾವಿರ ನೀಡಲಾಗುತ್ತದೆ.
ಇನ್ನು ಚಾಂಪಿಯನ್ ಶಿಪ್ ನಲ್ಲಿ ತೀರ್ಪುಗಾರರಾಗಿ ಡಾ. ವಿಜಯಲಕ್ಷ್ಮಿ, ಡಿಎಸ್ ವೆಂಕಟೇಶ, ಪುಟ್ಟಸ್ವಾಮಿ, ಪದ್ಮನಿ ರಾವ್, ಆರ್ ಎಸ್ ದೇಶಪಾಂಡೆ ಸೇರಿದಂತೆ ಒಟ್ಟು ಒಂಬತ್ತು ಜನರು ತೀರ್ಪುಗಾರರಾಗಿ ಆಗಮಿಸಲಿದ್ದಾರೆ, ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ ಅರ್ಥಶಾಸ್ತ್ರ ಬಗ್ಗೆ ಸಾಮಾನ್ಯ ಜನರಿಗೆ ತಪ್ಪು ಕಲ್ಪನೆ ಇದೆ, ಇದೊಂದು ಕಷ್ಟಕರವಾದ ವಿಷಯ ಎಂಬ ಭಾವನೆ ಇದೆ, ಇಂಥ ವಿಚಾರಗಳನ್ನು ತೊಡಗಿಸುವ ನಿಟ್ಟಿನಲ್ಲಿ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಸ್ಪರ್ಧೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಮುಂದಿನ ಮಾತನಾಡಿದವರು ಸರ್ಕಾರ ಇಲ್ಲಿವರೆಗೂ ಸಹ ಹಾರ್ದಿಕ ವಿಚಾರದ ಬಗ್ಗೆ ಯಾವುದೇ ರೀತಿಯಾದಂತಹ ಜಾಗತಿಕ ,ದೊಡ್ಡ ಮಟ್ಟದಲ್ಲಿ ಸಮಾವೇಶಗಳು, ಸಭೆಗಳನ್ನು ಮಾಡಿಲ್ಲ ಯಾರು ಸಹ ಈ ಒಂದು ಕಾರ್ಯಕ್ರಮಗಳಿಗೆ ಮುಂದ ಬರುತ್ತಿಲ್ಲ, ಬೆಂಗಳೂರು ಐಟಿ ಹಬ್ಬ ಹಾಗಿರುವ ಕಾರಣ ಆರ್ಥಿಕ ವಿಚಾರದ ಬಗ್ಗೆ ಯಾರು ಸಹ ಗಮನ ನೀಡುತ್ತಿಲ್ಲದಿರುವುದು ವಿಪರ್ಯಾಸದ ಸಂಗತಿ ಆಗಿದೆ ಎಂದರು.
ಅರ್ಥಶಾಸ್ತ್ರದ ಚಾಂಪಿಯನ್ ಶಿಪ್ ಕಾರ್ಯಕ್ರಮಕ್ಕೆ ರಾಜ್ಯ ರಾಷ್ಟ್ರಮಟ್ಟದ ಪರಿಣಿತರು ಭಾಗವಹಿಸಲಿದ್ದಾರೆ, ಇದೊಂದು ವಿಶೇಷವಾದಂತಹ ಕಾರ್ಯಕ್ರಮವಾಗಿದ್ದು, ಮುಂದಿನ ದಿನಗಳಲ್ಲಿ ಅರ್ಥಶಾಸ್ತ್ರದ ಬಗ್ಗೆ ವಿಶೇಷ ಜಾಗತಿಕ ಮಟ್ಟದಲ್ಲಿ, ರಾಜ್ಯ , ರಾಷ್ಟ್ರ ಮಟ್ಟದಲ್ಲಿ ಸಭೆ ಸಮಾವೇಶಗಳನ್ನು, ಕಾರ್ಯಗಾರಗಳನ್ನು ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಇಂಡಸ್ ಬಿಸಿನೆಸ್ ಅಕಾಡೆಮಿ ಸಂಸ್ಥೆಯ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಜಯಚಂದ್ರ ಅವರು ಉಪಸ್ಥಿತರಿದ್ದರು.