ನವದೆಹಲಿ: ರಾಜ್ಯದ ಸಾರಿಗೆ ನಿಗಮವು ಕಾರ್ಮಿಕರ ಮಕ್ಕಳಿಗೆ ಮಾಡಿರುವ ಅನುಕೂಲವನ್ನು ಪರಿಗಣಿಸಿ ಈ ಭಾರಿ ಕೆ ಎಸ್ ಆರ್ ಟಿ ಸಿ ಗೆ Governance now PSU IT ರಾಷ್ಟ್ರೀಯ ಪ್ರಶಸ್ತಿ ದೊರಕಿರುವುದು ತಿಳಿದು ಬಂದಿದೆ.
ನವದೆಹಲಿಯಲ್ಲಿ Governance Now ರವರು ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ ಸಾರಿಗೆ ನಿಗಮವು ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ ಸಹಾಯಕ್ಕಾಗಿ ಜಾರಿ ಮಾಡಿರುವ ವಿನೂತನ ವಿದ್ಯಾ ಚೇತನ ಆನ್ಲೈನ್ ಉಪಕ್ರಮಕ್ಕಾಗಿ Digital Accessibility and Inclusion ಪ್ರಶಸ್ತಿಯನ್ನು ನೀಡಿ ಗೌರವಿಲಾಗಿದೆ.
ಶಿವಕುಮಾರ್ ಮುಖ್ಯ ಕಾಮಗಾರಿ ಅಭಿಯಂತರರು ಹಾಗೂ ಅಶೋಕ ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ಚಾಮರಾಜನಗರ ವಿಭಾಗ, ಕರಾರಸಾ ನಿಗಮ ರವರುಗಳು ನಿಗಮದ ಪರವಾಗಿ ಪ್ರಶಸ್ತಿಯನ್ನು ಡಾ. ವಿಕ್ರಮ್ ಸಿಂಗ್, ನಿವೃತ್ತ ಡಿಜಿಪಿ, ಉತ್ತರ ಪ್ರದೇಶ, ಚಾರು ಪ್ರಜ್ಞಾ, ವಕ್ತಾರರು ಮತ್ತು ಕೈಲಾಸನಾಥ ಅಧಿಕಾರಿ, ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿ ಎಂಟರ್ಪ್ರೈಸಸ್ ರವರಿಂದ ಸ್ವೀಕರಿಸಿದರು.